ನವದೆಹಲಿ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಪಾಲ್ಗೊಂಡಿದ್ದ ಸಾರ್ವಜನಿಕ ಸಮಾರಂಭದ ಮಂಟಪದ ಬೋಲ್ಟ್‌ವೊಂದನ್ನು ತೆಗೆಯುತ್ತಿದ್ದ ವ್ಯಕ್ತಿಯನ್ನು ಗುಜರಾತ್ ಪೊಲೀಸರು ಬಂದಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡುತ್ತಿರುವ ಧ್ವನಿ ಸ್ಪಷ್ಟವಾಗಿ ಕೇಳಿಸುತ್ತದೆ.
ಬನಾಸಂಕಾಟಾ ಜಿಲ್ಲೆಯ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಪ್ರಧಾನಿ ಭಾಷಣ ಮಾಡುತ್ತಿರುವಾಗಲೇ ಮಂಟಪದ ಬೋಲ್ಟ್ ತೆಗೆಯುತ್ತಿದ್ದ ಉದ್ದೇಶವೇನು, ಈ ಘಟನೆಯ ಹಿನ್ನೆಲೆ ಏನು ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಬಂಧಿತ ವ್ಯಕ್ತಿ ತರಾಡ್ ಹಳ್ಳಿಯವರೇ ಆಗಿದ್ದಾರೆ.
ಪ್ರಧಾನಿ ಮೋದಿ ಅವರು ಅಕ್ಟೋಬರ್ 31ರಂದು ಬನಾಸಂಕಾಟಾ ಜಿಲ್ಲೆಯ ತರಾಡ್‌ನಲ್ಲಿ 8000 ಕೋಟಿ ರೂ.ಗೂ ಅಧಿಕ ಕುಡಿಯುವ ನೀರಿನ ಯೋಜನೆಗಳಿಗೆ ಚಾಲನೆ ನೀಡಲು ಆಗಮಿಸಿದ್ದರು. ಈ ಪ್ರಾಜೆಕ್ಟ್‌ನಿಂದ ಸುಮಾರು ಗುಜರಾತ್‌ನ 6 ಜಿಲ್ಲೆಗಳ ಸುಮಾರು 1000 ಹಳ್ಳಿಗೆಗೆ ನೀರು ದೊರೆಯಲಿದೆ.
ಇದನ್ನೂ ಓದಿ | Mann ki baat | ವೃಕ್ಷ ಸಂರಕ್ಷಕ, ಕನ್ನಡ ಹೋರಾಟಗಾರ ಸುರೇಶ್ ಕುಮಾರ್‌ಗೆ ಪ್ರಧಾನಿ ಮೋದಿ ಶ್ಲಾಘನೆ