ಮುಂಬಯಿ: ಪತ್ನಿಯನ್ನು ಕೊಂದ ಆರೋಪದಡಿ 29 ವರ್ಷದ ರೆಹಾನ್ ಖಾನ್ ಎಂಬಾತನನ್ನು ಮುಂಬಯಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಕೇಸ್ನಲ್ಲಿಯೂ ಕೂಡ ಬಲವಂತದ ಮತಾಂತರದ ಆರೋಪ ಕೇಳಿಬಂದಿದೆ. ಮೃತ ಯುವತಿ ಅಂದರೆ ರೆಹಾನ್ ಖಾನ್ ಪತ್ನಿ ಹೆಸರು ಯಶೋಧಾ ಖಟೀಕ್ (24). ಈಕೆಯ ಶವ ಮುಂಬಯಿಯ ಧಾರಾವಿಯಲ್ಲಿರುವ ಅವರ ನಿವಾಸದ ಸೀಲಿಂಗ್ ರಾಡ್ಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಈಕೆಯ ಪಾಲಕರು ನೀಡಿದ ದೂರಿನ ಮೇರೆಗೆ ಕೇಸ್ ದಾಖಲಿಸಿಕೊಂಡ ಪೊಲೀಸರು, ಯಶೋಧಾ ಶವಪರೀಕ್ಷೆ ನಡೆಸಿದ್ದರು. ಅದರಲ್ಲಿ ಆಕೆ ಉಸಿರುಕಟ್ಟಿ ಮೃತಪಟ್ಟಿರುವುದಾಗಿ ವರದಿ ಬಂದಿದೆ.
ಯಶೋಧಾ ಮೂಲತಃ ಮಧ್ಯಪ್ರದೇಶದ ಕಟ್ನಿಯವರು. 2018ರಲ್ಲಿ ರೆಹಾನ್ ಖಾನ್ ಜತೆ ಮುಂಬಯಿಗೆ ಓಡಿಬಂದಿದ್ದಳು. ಇಲ್ಲಿ ಬಂದು ಮದುವೆಯನ್ನೂ ಆಗಿದ್ದಳು. ಈಗ ಯಶೋಧಾ ಪಾಲಕರು ರೆಹಾನ್ ಖಾನ್ ವಿರುದ್ಧ ದೂರು ದಾಖಲಿಸಿದ್ದಾರೆ. ಆತ ತಮ್ಮ ಮಗಳ ಹೆಸರನ್ನು ರುಬಿನಾ ಎಂದು ಬದಲಿಸಿದ್ದ. ಇಸ್ಲಾಂಗೆ ಮತಾಂತರ ಆಗುವಂತೆ ಸದಾ ಪೀಡಿಸುತ್ತಿದ್ದ. ಕುಡಿದುಬಂದು ಆಕೆಗೆ ಹೊಡೆಯುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ರೆಹಾನ್ ಖಾನ್ ವಿರುದ್ಧ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಮನ್ ಕೀ ಬಾತ್ ಹೆಸರಲ್ಲಿ ಜನರಿಂದ ಹಣ ಪಡೆಯುತ್ತಿದ್ದ ಪತ್ರಕರ್ತ; ಪೊಲೀಸರಿಂದ ಹುಡುಕಾಟ