ಸ್ನೇಹಿತರೆಲ್ಲ ಸೇರಿದಾಗ ಸಣ್ಣಪುಟ್ಟ ಚಾಲೆಂಜ್ ಮಾಡಿಕೊಳ್ಳುವುದು, ಒಬ್ಬರು ಸೋಲುವುದು-ಗೆಲ್ಲುವುದೆಲ್ಲ ತೀರ ಸಾಮಾನ್ಯ. ಸವಾಲುಗಳು ಆರೋಗ್ಯಕರವಾಗಿದ್ದರೆ, ಇದೇನೂ ದೊಡ್ಡ ವಿಷಯವಲ್ಲ. ಆದರೆ ಉತ್ತರ ಪ್ರದೇಶದಲ್ಲಿ ಈ ಚಾಲೆಂಜ್ ಎಂಬುದು ಒಬ್ಬನ ಜೀವ ತೆಗೆದಿದೆ. 10 ನಿಮಿಷದಲ್ಲಿ ಮೂರು ಕ್ವಾರ್ಟರ್ ಕಳ್ಳಬಟ್ಟಿ ಕುಡಿಯುವ ಚಾಲೆಂಜ್ ಸ್ವೀಕರಿಸಿದ 45 ವರ್ಷದ ವ್ಯಕ್ತಿ ಅದಷ್ಟನ್ನು ಕುಡಿಯುತ್ತಿದ್ದಂತೆ ಮೃತಪಟ್ಟಿದ್ದಾನೆ.
ಆಗ್ರಾದಲ್ಲಿ ಜೈ ಸಿಂಗ್ ಎಂಬ ಆಟೋ ಚಾಲಕ ತನ್ನಿಬ್ಬರು ಸ್ನೇಹಿತರೊಂದಿಗೆ ಮದ್ಯಪಾನ ಮಾಡಲು ಹೋಗಿದ್ದ. ಎಲ್ಲರೂ ಕುಳಿತು ಮದ್ಯ ಸೇವಿಸುತ್ತಿದ್ದಾಗ ಹೀಗೆ ಚಾಲೆಂಜ್ ಆಯಿತು. ಸ್ನೇಹಿತರಿಬ್ಬರು ಸೇರಿಕೊಂಡು ಜೈ ಸಿಂಗ್ ಬಳಿ 10 ನಿಮಿಷದಲ್ಲಿ 3 ಕ್ವಾರ್ಟರ್ ಮದ್ಯ ಸೇವಿಸಬೇಕು. ಅದಾಗದೆ ಇದ್ದರೆ ಬಿಲ್ ಪೂರ್ಣವಾಗಿ ನೀಡಬೇಕು ಎಂದು ಹೇಳಿದರು. ಅದನ್ನು ಜೈ ಸಿಂಗ್ ಗಂಭೀರವಾಗಿ ಪರಿಗಣಿಸಿ ಒಪ್ಪಿಕೊಂಡ. ಅದು ಸ್ಥಳೀಯವಾಗಿ ತಯಾರಾಗುವ ಮದ್ಯವಾಗಿದ್ದರಿಂದ ಅದೇನು ಎಡವಟ್ಟಾಯಿತೋ ಗೊತ್ತಿಲ್ಲ, ಅಲ್ಲಿ ಕುಡಿದ ಅವನು ಶಿಲ್ಪಗ್ರಾಮ ಎಂಬಲ್ಲಿ ರಸ್ತೆ ಬದಿಯಲ್ಲಿ ಎಚ್ಚರ ತಪ್ಪಿ ಬಿದ್ದಿದ್ದ. ಬಳಿಕ ಆತನ 16 ವರ್ಷದ ಮಗ ಕರಣ್ ನೋಡಿ, ಆಸ್ಪತ್ರೆಗೆ ದಾಖಲು ಮಾಡಿದ್ದ. ಆದರೆ ಚಿಕಿತ್ಸೆ ಫಲಿಸದೆ, ಜೈ ಸಿಂಗ್ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಒಂದಕ್ಷರ ಓದಲು, ಬರೆಯಲು ಬಾರದ ಸುಕ್ರಜ್ಜಿ ನಡೆದಾಡುವ ದಂತ ಕಥೆ ಆಗಿದ್ದು ಹೇಗೆ?
ಸದ್ಯ ಪೊಲೀಸರು ಜೈಸಿಂಗ್ನ ಇಬ್ಬರು ಸ್ನೇಹಿತರಾದ ಭೋಲಾ ಮತ್ತು ಕೇಶವ್ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಇಬ್ಬರೂ ಅರೆಸ್ಟ್ ಆಗಿದ್ದಾರೆ. ಮೃತ ಜೈ ಸಿಂಗ್ಗೆ ನಾಲ್ವರು ಮಕ್ಕಳಿದ್ದು, ಎಲ್ಲರೂ ಅಪ್ರಾಪ್ತರೇ ಆಗಿದ್ದಾರೆ. ಈ ಕೇಶವ್ ಮತ್ತು ಭೋಲಾ ಇಬ್ಬರೂ 10ವರ್ಷಗಳಿಂದಲೂ ಜೈ ಸಿಂಗ್ ಸ್ನೇಹಿತರು ಎಂದು ಹೇಳಿರುವ ಆತನ ಸಹೋದರ ಸುಖ್ಬೀರ್ ಸಿಂಗ್ ‘ಅವರಿಬ್ಬರೂ ಹೋಗುವಾಗ ತನ್ನ ಸಹೋದರನ ಬಳಿಯಿದ್ದ 60 ಸಾವಿರ ರೂಪಾಯಿ ಕದ್ದೊಯ್ದಿದ್ದಾರೆ’ ಎಂದು ಆರೋಪಿಸಿದ್ದಾರೆ. ಪ