ನವ ದೆಹಲಿ: ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ಗೆ ಮೊಹಮ್ಮದ್ ಶರೀಫ್ ಎಂಬಾತ 23 ಲಕ್ಷ ರೂಪಾಯಿ ಬಿಲ್ ವಂಚನೆ ಮಾಡಿದ್ದಾನೆ. ‘ನಾನು ಯುಎಇ ದೇಶದ ನಿವಾಸಿ. ಅಬುಧಾಬಿಯ ರಾಜಮನೆತನದ ಉದ್ಯೋಗಿ’ ಎಂದು ಹೇಳಿಕೊಂಡು, ದೆಹಲಿಯ ಐಷಾರಾಮಿ ಹೋಟೆಲ್ಗೆ ನಾಲ್ಕು ತಿಂಗಳ ಹಿಂದೆ ಬಂದಿದ್ದ ಈತ ಈಗ ಯಾರಿಗೂ ಹೇಳದೆ ಪರಾರಿಯಾಗಿದ್ದಾನೆ. ಆತ ಹೋಟೆಲ್ಗೆ 23 ಲಕ್ಷ ರೂಪಾಯಿ ಬಿಲ್ ಕೊಡುವುದು ಬಾಕಿ ಇದೆ. ಅಷ್ಟೇ ಅಲ್ಲ, ಆತ ಉಳಿದುಕೊಂಡಿದ್ದ ಐಷಾರಾಮಿ ಹೋಟೆಲ್ನಲ್ಲಿದ್ದ ಬೆಳ್ಳಿ ಪಾತ್ರೆಗಳು, ಮುತ್ತಿನಿಂದ ಹೆಣೆಯಲ್ಪಟ್ಟಿರುವ ಟ್ರೇ ಇತ್ಯಾದಿ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾನೆ.
ಆಗಸ್ಟ್ 1ರಂದು ಈ ಹೋಟೆಲ್ಗೆ ಬಂದಿದ್ದ ಮೊಹಮ್ಮದ್ ಶರೀಫ್, ಅಬುಧಬಿಯ ರಾಜಮನೆತನದವರಾದ ಶೇಖ್ ಫಲಾಹ್ ಬಿನ್ ಜಾಯೇದ್ ಅಲ್ ನಹ್ಯಾನ್ ಜತೆ ಆಪ್ತವಾಗಿದ್ದೆ. ನಾನು ಅಲ್ಲಿಯೇ ಕೆಲಸ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದ. ತಾನು ಯುಎಇ ನಿವಾಸಿ ಎಂಬುದಕ್ಕೆ ಸಾಕ್ಷಿಯಾಗಿ ಅಲ್ಲಿನ ರೆಸಿಡೆಂಟ್ ಕಾರ್ಡ್ ಕೊಟ್ಟಿದ್ದ. ತನ್ನ ಉದ್ಯಮದ ಕಾರ್ಡ್ ಎಂದೂ ಒಂದು ಕಾರ್ಡ್ ತೋರಿಸಿದ್ದ. ಒಟ್ಟಾರೆ ಯುಎಇ ಸರ್ಕಾರದೊಂದಿಗೆ ನಿಕಟ ಸಂಪರ್ಕ ಹೊಂದಿದ್ದೇನೆ ಎಂದೇ ಬಿಂಬಿಸಿಕೊಂಡಿದ್ದ. ನಾಲ್ಕು ತಿಂಗಳಿಗೆ 35 ಲಕ್ಷ ರೂಪಾಯಿ ಬಿಲ್ ಆಗುತ್ತದೆ ಎಂದು ಹೋಟೆಲ್ನವರು ಹೇಳಿದ್ದರು. ಅದರಲ್ಲಿ 11.5 ಲಕ್ಷ ರೂ.ಪಾವತಿಸಿ, ಉಳಿದ ಹಣ ಕೊಡದೆ ಹೋಗಿದ್ದಾನೆ.
ದೆಹಲಿ ಹೊಟೆಲ್ನವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಸದ್ಯಕ್ಕಂತೂ ಮೊಹಮ್ಮದ್ ಶರೀಫ್ನನ್ನು ಟ್ರೇಸ್ ಮಾಡಲು ಸಾಧ್ಯವಾಗಿಲ್ಲ. ಹೋಟೆಲ್ ಮತ್ತು ಸುತ್ತಲಿನ ಸಿಸಿಟಿವಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Donald Trump Company | ತೆರಿಗೆ ವಂಚನೆ ಕೇಸ್, ಡೊನಾಲ್ಡ್ ಟ್ರಂಪ್ ಕಂಪನಿಗೆ 130 ಕೋಟಿ ರೂ. ದಂಡ