Site icon Vistara News

Death News : ಕಾಂಗ್ರೆಸ್ ಶಾಸಕಿ ಮನೆಯಲ್ಲಿ ಮೃತದೇಹ ಪತ್ತೆ, ಕೊಲೆ ಶಂಕೆ

Crime news

ಪಾಟ್ನಾ: ಬಿಹಾರದ ನವಾಡಾ ಜಿಲ್ಲೆಯ ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಅವರ ಮನೆಯಲ್ಲಿ 24 ವರ್ಷದ ವ್ಯಕ್ತಿಯ ಶವ ಶನಿವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿ ಪಿಯೂಷ್ ಸಿಂಗ್​ ಎಂಬುವರಾಗಿದ್ದಾರೆ. ಅವರು ಶಾಸಕಿ ನೀತು ಸಿಂಗ್ ಅವರ ದೂರದ ಸಂಬಂಧಿ. ಪೊಲೀಸರು ಶವವನ್ನು ಪತ್ತೆ ಮಾಡಿದಾಗ ನೀತು ತಮ್ಮ ಮನೆಯಲ್ಲಿ ಇರಲಿಲ್ಲ ಎಂದು ನವಾಡಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಂಬ್ರೀಶ್ ರಾಹುಲ್ ತಿಳಿಸಿದ್ದಾರೆ.

ನೀತು ಸಿಂಗ್ ಕಳೆದ ಕೆಲವು ದಿನಗಳಿಂದ ಪಾಟ್ನಾದಲ್ಲಿದ್ದರು ಮತ್ತು ಘಟನೆಯ ಸಮಯದಲ್ಲಿ ಇತರ ಕುಟುಂಬ ಸದಸ್ಯರು ಸಹ ಅಲ್ಲಿರಲಿಲ್ಲ ಎಂದು ಹೇಳಲಾಗಿದೆ. ನವಾಡಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಂಬ್ರೀಶ್ ರಾಹುಲ್ ಅವರು ಶನಿವಾರ ಸಂಜೆ ಶಾಸಕರ ಮನೆಯಲ್ಲಿ ಶವ ಪತ್ತೆಯಾಗಿರುವಮಾಹಿತಿ ಪಡೆದರು, ನಂತರ ಅವರು ತನಿಖೆಗಾಗಿ ತಂಡವನ್ನು ಕಳುಹಿಸಿದ್ದಾರೆ ಎಂದು ಹೇಳಿದರು. ನೀತು ಕುಮಾರ್ ಪ್ರಸ್ತುತ ಪಾಟ್ನಾದಲ್ಲಿದ್ದಾರೆ. ಮನೆಯಲ್ಲಿ ಬೇರೆ ಯಾವುದೇ ಕುಟುಂಬ ಸದಸ್ಯರು ಇರಲಿಲ್ಲ ಎನ್ನಲಾಗಿದೆ.

ನೀತು ಸಿಂಗ್ ಅವರ ಸೋದರಳಿಯ ಗೋಲು ಸಿಂಗ್ ಅವರಿಗೆ ಸೇರಿದ ಕೋಣೆಯಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಗೋಲು ತಲೆಮರೆಸಿಕೊಂಡಿದ್ದಾನೆ. ಗೋಲುನನ್ನು ಭೇಟಿಯಾಗಲು ತಮ್ಮ ಮಗನ ಮನೆಯಿಂದ ಹೋಗಿದ್ದ ಎಂದು ಅವರ ಪಿಯೂಷ್​ ತಾಯಿ ಹೇಳಿದ್ದಾರೆ.

ಇದನ್ನೂ ಓದಿ : Terrorist Attack : ಶ್ರೀನಗರದಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಗುಂಡಿನ ದಾಳಿ

ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಗೋಲು ಸಿಂಗ್ ಗಾಗಿ ಶೋಧ ನಡೆಸುತ್ತಿದ್ದಾರೆ. ಅವರು ನೀತು ಸಿಂಗ್ ಅವರ ಭಾವ ಸುಮನ್ ಸಿಂಗ್ ಮತ್ತು ಕಾಂಗ್ರೆಸ್ ನ ಮಾಜಿ ಜಿಲ್ಲಾಧ್ಯಕ್ಷ ಅಭಾ ಸಿಂಗ್ ಅವರ ಪುತ್ರ. “ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ನಾವು ಗೋಲು ಸಿಂಗ್ ಅವರನ್ನು ಶಂಕಿಸುತ್ತೇವೆ. ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಮರಣೋತ್ತರ ಪರೀಕ್ಷೆ ಮುಗಿದ ನಂತರ, ಘಟನೆ ನಡೆದ ನಿಖರ ಸಮಯ ನಮಗೆ ತಿಳಿಯುತ್ತದೆ” ಎಂದು ಎಸ್ಪಿ ಹೇಳಿದ್ದಾರೆ.

ಏನಾಗಿತ್ತು?

ಪ್ರಾಥಮಿಕ ತನಿಖೆಯ ಪ್ರಕಾರ, ಪಿಯೂಷ್ ಸಿಂಗ್ ಶನಿವಾರ ಸಂಜೆ 7 ಗಂಟೆಗೆ ಗೋಲು ಸಿಂಗ್ ಅವರ ಮನೆಗೆ ಹೋಗಿದ್ದರು ಮತ್ತು ಮನೆಗೆ ಮರಳಲಿಲ್ಲ. ಪಿಯೂಷ್ ಸಿಂಗ್ ಅವರನ್ನು ರಾತ್ರಿ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನೀತು ಸಿಂಗ್ ಅವರ ಮನೆಯಲ್ಲಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಎಸ್ಪಿ ಹೇಳಿದರು.

Exit mobile version