Site icon Vistara News

ದೆಹಲಿ ಸಚಿವ ಸತ್ಯೇಂದ್ರ ಜೈನ್​ಗೆ ಜೈಲಲ್ಲಿ ಮಸಾಜ್​ ಮಾಡಿದ್ದು ಥೆರಪಿಸ್ಟ್​ ಅಲ್ಲ ರೇಪಿಸ್ಟ್​!

Man Giving Massage To Satyendar Jain In Jail is Rapist

ನವ ದೆಹಲಿ: ಭ್ರಷ್ಟಾಚಾರ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ತಿಹಾರ ಜೈಲು ಸೇರಿರುವ ದೆಹಲಿ ಆಪ್​ ಸರ್ಕಾರದ ಸಚಿವ ಸತ್ಯೇಂದ್ರ ಜೈನ್​ ಮಸಾಜ್​ ವಿಡಿಯೊಗಳು ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ. ಜೈಲಿನಲ್ಲಿ ಸತ್ಯೇಂದ್ರ ಜೈನ್​ ಆರಾಮಾಗಿ ಮಲಗಿದ್ದರೆ, ವ್ಯಕ್ತಿಯೊಬ್ಬ ಅವರ ತಲೆ, ಕೈ, ಕಾಲುಗಳಿಗೆಲ್ಲ ಮಸಾಜ್​ ಮಾಡುತ್ತಿರುವ ದೃಶ್ಯ ಅದರಲ್ಲಿ ಕಾಣಸಿಗುತ್ತದೆ. ವಿಡಿಯೊಗಳು ವೈರಲ್ ಆಗುತ್ತಿದ್ದಂತೆ ತೀವ್ರ ಟೀಕೆಗೆ ಗುರಿಯಾಗಿದೆ. ಭ್ರಷ್ಟಾಚಾರ ಆರೋಪದಡಿ ಜೈಲು ಸೇರಿರುವ ಸಚಿವನಿಗೆ ಜೈಲಲ್ಲಿ ವಿಶೇಷ ವ್ಯವಸ್ಥೆ, ವಿಐಪಿ ಟ್ರೀಟ್​ಮೆಂಟ್​ ಮಾಡಲಾಗುತ್ತಿದೆಯಾ? ಎಂಬ ಹತ್ತು ಹಲವು ಪ್ರಶ್ನೆಗಳು ಎದ್ದಿದ್ದವು.

ಪ್ರತಿಪಕ್ಷಗಳು, ಜನಸಾಮಾನ್ಯರಿಂದ ಟೀಕೆ ಹೆಚ್ಚುತ್ತಿದ್ದಂತೆ ಆಪ್​ ಪಕ್ಷ ಅದನ್ನು ಸಮರ್ಥಿಸಿಕೊಂಡಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅರವಿಂದ್​ ಕೇಜ್ರಿವಾಲ್​ ‘ಸತ್ಯೇಂದ್ರ ಜೈನ್​​ಗೆ ಜೈಲಿನಲ್ಲಿ ವಿಐಪಿ ಟ್ರೀಟ್​ಮೆಂಟ್ ಸಿಗುತ್ತಿಲ್ಲ. ಅವರಿಗೆ ಫಿಸಿಯೊಥೆರಪಿ ಮಾಡಲಾಗುತ್ತಿದೆ. ಇದನ್ನು ಅಷ್ಟು ದೊಡ್ಡ ವಿಷಯವನ್ನಾಗಿ ಮಾಡುವ ಅಗತ್ಯವಿಲ್ಲ’ ಎಂದು ಹೇಳಿದ್ದರು.
ಆದರೆ ಇದೇ ವಿಚಾರದ ಬಗ್ಗೆ ಈಗೊಂದು ಇಂಟರೆಸ್ಟಿಂಗ್​ ಮಾಹಿತಿ ಹೊರಬಿದ್ದಿದೆ. ಸತ್ಯೇಂದ್ರ ಜೈನ್​​ಗೆ ಮಸಾಜ್​ ಮಾಡುತ್ತಿರುವ ವ್ಯಕ್ತಿ ಫಿಸಿಯೋಥೆರಪಿಸ್ಟ್​ ಅಲ್ಲ, ಜೈನ್​ಗೆ ಕೊಡಲಾಗುತ್ತಿರುವುದು ಫಿಸಿಯೋಥೆರಪಿ ಚಿಕಿತ್ಸೆಯನ್ನೂ ಅಲ್ಲ. ವಿಡಿಯೊದಲ್ಲಿ ಜೈನ್​ಗೆ ಮಸಾಜ್ ಮಾಡುತ್ತಿರುವವನೂ ಒಬ್ಬ ಕೈದಿ. ಅವನ ಹೆಸರು ರಿಂಕು ಎಂದಾಗಿದ್ದು, ಅಪ್ರಾಪ್ತೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಪೋಕ್ಸೋ ಕಾಯ್ದೆಯಡಿ ಬಂಧಿತನಾದ ಕೈದಿ ಎಂದು ತಿಹಾರ ಜೈಲಿನ ಮೂಲಗಳಿಂದಲೇ ಮಾಹಿತಿ ಸಿಕ್ಕಿದೆ.

ಆತನೊಬ್ಬ ಕೈದಿ ಎಂಬ ಬಗ್ಗೆ ಬಿಜೆಪಿ ವಕ್ತಾರ ಶೆಹಜಾದ್​ ಪೂನಾವಾಲಾ ಕೂಡ ಟ್ವೀಟ್ ಮಾಡಿದ್ದಾರೆ. ‘ಸತ್ಯೇಂದ್ರ ಜೈನ್​ಗೆ ಮಸಾಜ್​ ಮಾಡುತ್ತಿರುವಾತ ವಾಸ್ತವದಲ್ಲಿ ಒಬ್ಬ ರೇಪಿಸ್ಟ್​. ಆತ ಫಿಸಿಯೋಥೆರಪಿಸ್ಟ್​ ಅಲ್ಲ. ಇದನ್ನೂ ಆಮ್​ ಆದ್ಮಿ ಪಕ್ಷ ಸಮರ್ಥನೆ ಮಾಡಿಕೊಳ್ಳುತ್ತದೆಯಾ? ಈಗೇನು ಹೇಳುತ್ತದೆ?’ ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: Satyendra Jain | ಜೈಲಿನಲ್ಲಿ ಆಪ್‌ನ ಸತ್ಯೇಂದ್ರ ಜೈನ್‌ ಐಷಾರಾಮಿ ಜೀವನ, ಜೈಲಾಧಿಕಾರಿ ಸಸ್ಪೆಂಡ್

Exit mobile version