ಇಂಧೋರ್: ವಿಕೃತ ಮನಸ್ಥಿತಿಯ ಮನುಷ್ಯರು ನಮ್ಮ ಸುತ್ತಮುತ್ತ ಅನೇಕರು ಸಿಗುತ್ತಾರೆ. ಬಸ್ನಲ್ಲಿ ಅಶ್ಲೀಲವಾಗಿ ವರ್ತಿಸಿದ, ಸಾರ್ವಜನಿಕ ಪ್ರದೇಶಗಳಲ್ಲಿ ಲೈಂಗಿಕ ಪ್ರಚೋದಕ ಕೃತ್ಯ ಮಾಡಿ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹಿಗ್ಗಾಮುಗ್ಗಾ ಹೊಡೆತ ತಿಂದವರು, ಜೈಲುಪಾಲಾದವರು ಹಲವರು ಇದ್ದಾರೆ.
ಆದರೆ ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟು ವಿಕೃತಿ ಮೆರೆದಿದ್ದಾನೆ. ಶಿವಲಿಂಗದ ಎದುರು ಕುಳಿತು ಅಶ್ಲೀಲವಾಗಿ ವರ್ತಿಸಿದ್ದಾನೆ. ಮಧ್ಯಪ್ರದೇಶದ ಇಂಧೋರ್ನಲ್ಲಿರುವ ವಿಶ್ವೇಶ್ವರ ಮಹಾದೇವ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದ ವಾಸಿಮ್, ಅಲ್ಲಿಯೇ ತನ್ನ ಲೈಂಗಿಕ ಕಾಮನೆಯ ಕುಚೇಷ್ಟೆ ತೋರಿಸಿದ್ದಾನೆ. ಆತನನ್ನು ಬಂಧಿಸಿರುವ ಪೊಲೀಸರು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾರೆ.
ವಾಸಿಂ ದೇವಸ್ಥಾನಕ್ಕಿಂತ ಸ್ವಲ್ಪ ದೂರದಲ್ಲಿ ಟೈರ್ ದುರಸ್ತಿ ಅಂಗಡಿ ಇಟ್ಟಿದ್ದ. ಪಂಕ್ಚರ್ ಆದ ಟೈರ್ಗಳನ್ನು ರಿಪೇರಿ ಮಾಡಿಕೊಡುತ್ತಿದ್ದ. ಇದೀಗ ಅವನು ಶಿವಲಿಂಗದ ಎದುರು ಅಶ್ಲೀಲವಾಗಿ ವರ್ತಿಸಿದ ಬೆನ್ನಲ್ಲೇ, ದೇಗುಲದ ಆವರಣದಲ್ಲಿರುವ ಸಿಸಿಟಿವಿ ಕ್ಯಾಮರಾಗಳನ್ನೆಲ್ಲ ಪರಿಶೀಲನೆ ಮಾಡಲಾಗಿದೆ. ಈತ ಸದಾ ದೇಗುಲದ ಆವರಣದಲ್ಲಿ ಸುತ್ತಾಡುವ ಮತ್ತು ಅಲ್ಲೇ ಮಹಿಳೆಯರೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿದ ದೃಶ್ಯ ಈ ಫೂಟೇಜ್ನಲ್ಲಿ ಕಂಡುಬಂದಿದೆ.
ಈ ವ್ಯಕ್ತಿಯ ಕೃತ್ಯ ಬಹಿರಂಗಗೊಳ್ಳುತ್ತಿದ್ದಂತೆ ಸ್ಥಳೀಯ ಹಿಂದೂ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಅಷ್ಟೇ ಅಲ್ಲ, ಇಡೀ ದೇವಸ್ಥಾನವನ್ನು ಶುದ್ಧೀಕರಿಸಲಾಗಿದೆ. ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: Viral Video | ನಿಂತಿದ್ದ ಬುಲೆಟ್ ಬೈಕ್ ಏಕಾಏಕಿ ಕೆಳಗೆ ಬಿತ್ತು; ಬೆಂಕಿ ಹೊತ್ತಿ ಉರಿಯಿತು!