Site icon Vistara News

Heart Attack | ಸಾಯಿಬಾಬಾ ಮಂದಿರದಲ್ಲಿ ಭಕ್ತನಿಗೆ ಹೃದಯಾಘಾತ, ದೇವರ ಪಾದದಡಿಯಲ್ಲೇ ಸಾವು, ಇದೆಂಥಾ ದುರ್ವಿಧಿ!

Heart Attack

ಭೋಪಾಲ್‌: ಜೀವನದಲ್ಲಿ ಒಳ್ಳೆಯದಾಗಲಿ, ಅಂದುಕೊಂಡಿದ್ದೆಲ್ಲ ಈಡೇರುವಂತಾಗಲಿ, ಸಂಕಷ್ಟಗಳು ಮಾಯವಾಗಿ, ಶಾಂತಿ, ಸಮೃದ್ಧಿ ನೆಲೆಯೂರುವಂತಾಗಲಿ ಎಂದು ಜನ ದೇವಾಲಯಗಳಿಗೆ ತೆರಳುತ್ತಾರೆ. ಭಕ್ತಿಯಿಂದ ದೇವರನ್ನು ಆರಾಧಿಸುತ್ತಾರೆ. ಹೀಗೆ, ಇಷ್ಟದ ದೇವರ ದರ್ಶನಕ್ಕೆಂದು ಸಾಯಿಬಾಬಾ ಮಂದಿರಕ್ಕೆ ಹೋದ ಭಕ್ತನಿಗೆ ದೇಗುಲದ ಆವರಣದಲ್ಲಿಯೇ ಹೃದಯಾಘಾತ (Heart Attack) ಉಂಟಾಗಿದೆ. ಸಾಯಿಬಾಬಾ ಪಾದದಡಿಯಲ್ಲೇ ಭಕ್ತನು ಪ್ರಾಣ ಬಿಟ್ಟಿದ್ದಾನೆ. ಸಿಸಿಟಿವಿಯಲ್ಲಿ ಈ ದೃಶ್ಯಾವಳಿ ಸೆರೆಯಾಗಿದ್ದು, ವಿಡಿಯೊ ವೈರಲ್‌ ಆಗಿದೆ.

ಮಧ್ಯಪ್ರದೇಶದ ಕುತ್ನಿ ಜಿಲ್ಲೆ ಕುಥಾಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿರುವ ಸಾಯಿಬಾಬಾ ಮಂದಿರಕ್ಕೆ ಕಳೆದ ಗುರುವಾರ ರಾಜೇಶ್‌ ಮೆಹನಿ ಎಂಬ ಯುವಕನು ತೆರಳಿದ್ದಾನೆ. ಸಾಯಿಬಾಬಾ ದರ್ಶನ ಪಡೆದು, ನಮಸ್ಕಾರ ಮಾಡಿದ ಬಳಿಕ ಸಾಯಿಬಾಬಾ ಪಾದದಡಿಯಲ್ಲೇ ಆತ ಕುಸಿದಿದ್ದಾನೆ. ಕೆಲ ನಿಮಿಷದ ಬಳಿಕ ಬೇರೆ ಭಕ್ತರು ವ್ಯಕ್ತಿಯನ್ನು ಎಬ್ಬಿಸಿದಾಗ ಅವರು ಕೊನೆಯುಸಿರೆಳೆದಿದ್ದಾರೆ ಎಂಬುದು ಗೊತ್ತಾಗಿದೆ. ಹೃದಯಾಘಾತದಿಂದಲೇ ರಾಜೇಶ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಯುವಕರೇ ಹೆಚ್ಚಿನ ಪ್ರಮಾಣದಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದು, ರಾಜೇಶ್‌ ಮೆಹನಿ ಸಾವು ಭೀತಿಯನ್ನು ಹೆಚ್ಚಿಸಿದೆ.

ಇದನ್ನೂ ಓದಿ | Children heart attack | 13 ವರ್ಷದ ಬಾಲಕ ಹೃದಯಾಘಾತದಿಂದ ನಿಧನ, ಶಾಲೆಯಲ್ಲೇ ಕುಸಿದುಬಿದ್ದು ಉಸಿರು ಚೆಲ್ಲಿದ!

Exit mobile version