Site icon Vistara News

ಗರ್ಭಿಣಿಯ ಮೇಲೆ ಅತ್ಯಾಚಾರ ಮಾಡಿದ ಪಾಪಿ; ಪತಿಯ ಕೃತ್ಯವನ್ನು ವಿಡಿಯೊ ಮಾಡಿ ವೈರಲ್ ಮಾಡಿದ ಪತ್ನಿ

Man rapes pregnant wife records video in Odisha

#image_title

ಒಡಿಶಾದ ವ್ಯಕ್ತಿಯೊಬ್ಬ ತನ್ನ ಸಂಬಂಧಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ್ದಾನೆ. ಗರ್ಭಿಣಿಯಾಗಿದ್ದ ಆಕೆಯ ಮೇಲೆ ಈತ ರೇಪ್ ಮಾಡುತ್ತಿದ್ದರೆ, ಅವನ ಪತ್ನಿ ಅದನ್ನು ವಿಡಿಯೊ ರೆಕಾರ್ಡ್ ಮಾಡಿದ್ದಾಳೆ. ಅಷ್ಟಲ್ಲದೆ, ಈ ಹೊಲಸು ಕೃತ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿ, ಬಳಿಕ ಪೊಲೀಸರು ಸೈಬರ್​ ವಿಭಾಗಕ್ಕೆ ಹೇಳಿ ವಿಡಿಯೊವನ್ನು ನಿರ್ಬಂಧಿಸಿದ್ದಾರೆ. ಸದ್ಯ ದಂಪತಿಯನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ಆರೋಪಿಗಳು ಲಿಲಿಯಾ ಮತ್ತು ಆತನ ಪತ್ನಿ ಪದ್ಮಾ ರುಂಜಿಕರ್​. ಇವರಿಬ್ಬರೂ ಒಡಿಶಾದ ನಬರಂಗಪುರದ ನಿವಾಸಿಗಳಾಗಿದ್ದು, ಸಂತ್ರಸ್ತೆ ಸಂಬಂಧದಲ್ಲಿ ಲಿಲಿಯಾನಿಗೆ ಅತ್ತಿಗೆಯಾಗಬೇಕು. ಪದ್ಮಾ ರುಂಜಿಕರ್​ ಆಶಾ ಕಾರ್ಯಕರ್ತೆಯಾಗಿದ್ದರಿಂದ ವೈದ್ಯಕೀಯ ತಪಾಸಣೆಗಾಗಿ ಆಕೆಯನ್ನು ಕರೆದುಕೊಂಡು ಹೋಗಿದ್ದಳು. ಆಗಲೇ ಲಿಲಿಯಾ ಈಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಪತ್ನಿಯಾದ ಪದ್ಮಾ ಅದನ್ನು ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾಳೆ. ಅಷ್ಟಾದ ಮೇಲೆ, ಮಹಿಳೆಯನ್ನು ದೇವಸ್ಥಾನದ ಬಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬೆದರಿಕೆಯೊಡ್ಡಿದ್ದಾರೆ. ಪೊಲೀಸರಿಗೆ ಹೇಳದಂತೆ ಎಚ್ಚರಿಕೆ ನೀಡಿದ್ದಾರೆ. ಆದರೂ ಆ ಮಹಿಳೆ ಧೈರ್ಯ ಮಾಡಿ ಪೊಲೀಸರಿಗೆ ದೂರು ಕೊಟ್ಟಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Sexual Assault : 16ರ ಬಾಲಕಿಯನ್ನು ಮನೆಗೆ ಕರೆಸಿ ಅತ್ಯಾಚಾರ ಮಾಡಿದ ಮೂವರು ಬಾಲಕರು

ಸದ್ಯ ಆ ಆಶಾಕಾರ್ಯಕರ್ತೆಯ ಮೊಬೈಲ್​​ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಈಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಪತ್ರವನ್ನೂ ಬರೆದಿದ್ದಾರೆ. ಈ ಕೇಸ್​​ನ ತನಿಖೆಯನ್ನು 21ದಿನದಲ್ಲಿ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ.

Exit mobile version