Site icon Vistara News

Pickup Van:‌ ಮಕ್ಕಳಿಗೆ ಐಸ್‌ಕ್ರೀಮ್‌ ತಿನ್ನಿಸಲು ಅಂಗಡಿ ಎದುರು ಬೈಕ್‌ ನಿಲ್ಲಿಸಿದ ತಂದೆ; ಗುದ್ದಿದ ಪಿಕ್‌ಅಪ್‌ ವ್ಯಾನ್

Pickup Van Rams Into People

Man takes 3 kids out for ice cream, speeding pickup van rams into them In Tamil Nadu

ಚೆನ್ನೈ: ತಮಿಳುನಾಡಿನ ಕೊಯಮತ್ತೂರು (Coimbatore ) ಜಿಲ್ಲೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಮೂವರು ಮಕ್ಕಳಿಗೆ ಐಸ್‌ಕ್ರೀಮ್‌ ತಿನ್ನಿಸಲು ಎಂದು ಬೈಕ್‌ನಲ್ಲಿ ಅವರನ್ನು ಕೂರಿಸಿಕೊಂಡು ಬಂದ ವ್ಯಕ್ತಿಯು ಅಂಗಡಿ ಎದುರು ನಿಲ್ಲಿಸುತ್ತಲೇ ವೇಗವಾಗಿ ಬಂದ ಪಿಕ್‌ಅಪ್‌ ವಾಹನವೊಂದು (Pickup Van) ಅವರಿಗೆ ಗುದ್ದಿದೆ. ಗುದ್ದಿದ ರಭಸಕ್ಕೆ ವ್ಯಕ್ತಿ, ಆತನ ಮೂವರು ಮಕ್ಕಳಿಗೆ ಗಂಭೀರವಾಗಿ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಭೀಕರ ಅಪಘಾತದ ವಿಡಿಯೊ ವೈರಲ್‌ ಆಗಿದೆ.

ಮೆಟ್ಟುಪಾಳಯಂ ಎಂಬ ಗ್ರಾಮದ ಮೀನಾಕ್ಷಿ ಆಸ್ಪತ್ರೆ ಬಳಿ ಅಪಘಾತ ಸಂಭವಿಸಿದೆ. ಭಾನುವಾರ (ಆಗಸ್ಟ್‌ 20) ಮಕ್ಕಳು ಹಠ ಮಾಡಿದರು ಎಂದು ತಂದೆಯು ಮೂವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಐಸ್‌ಕ್ರೀಮ್‌ ಪಾರ್ಲರ್‌ ಎದುರು ಬಂದಿದ್ದಾರೆ. ಇನ್ನೇನು ಬೈಕ್‌ ನಿಲ್ಲಿಸಿ, ಅಂಗಡಿಯೊಳಗೆ ಹೋಗಬೇಕು ಎನ್ನುವಷ್ಟರಲ್ಲೇ ವೇಗವಾಗಿ ಬಂದ ಪಿಕ್‌ಅಪ್‌ ವಾಹನವು ಡಿಕ್ಕಿಯೊಡೆದಿದೆ.

ಅಪಘಾತದ ವಿಡಿಯೊ

ಮೆಟ್ಟುಪಾಳಯಂ ಗ್ರಾಮದಿಂದ ಕರಮಡೈ ಕಡೆಗೆ ತೆರಳುತ್ತಿದ್ದ ಪಿಕ್‌ಅಪ್‌ ವಾಹನ ಚಾಲಕನ ನಿಯಂತ್ರಣ ತಪ್ಪಿ ಇವರಿದ್ದ ಬೈಕ್‌ಗೆ ಗುದ್ದಿದೆ. ಅಪಘಾತ ಸಂಭವಿಸುತ್ತಲೇ ಅಲ್ಲಿದ್ದ ಜನರು ನಾಲ್ವರನ್ನೂ ವಾಹನದ ಅಡಿಯಿಂದ ಹೊರಗೆ ತೆಗೆದಿದ್ದಾರೆ. ಕೂಡಲೇ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರೂ ಗಂಭೀರವಾಗಿ ಗಾಯಗೊಂಡಿದ್ದರೂ ಪ್ರಾಣಕ್ಕೆ ತೊಂದರೆ ಇಲ್ಲ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಕ್‌ಅಪ್‌ ವಾಹನ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ವಿಡಿಯೊ ವೈರಲ್‌ ಆಗುತ್ತಲೇ ವಾಹನ ಚಾಲಕನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಕಿರಿದಾದ ರಸ್ತೆಗಳಲ್ಲಿ ಅಷ್ಟೊಂದು ವೇಗವಾಗಿ ವಾಹನ ಓಡಿಸಿ, ಇನ್ನೊಬ್ಬರ ಪ್ರಾಣಕ್ಕೆ ಕುತ್ತು ತರಬೇಡಿ ಎಂದು ಆಗ್ರಹಿಸಿದ್ದಾರೆ.

Exit mobile version