Site icon Vistara News

ಹತಾಶೆಯ ಪರಮಾವಧಿ; ಎಷ್ಟುದಿನವಾದ್ರೂ ಡಿವೋರ್ಸ್ ಕೊಡದ ಜಡ್ಜ್​ ಕಾರು ಧ್ವಂಸ

man vandalises judge car

#image_title

ವಿಚ್ಛೇದನ ಅರ್ಜಿ (Divorce Proceedings) ವಿಚಾರಣೆಯನ್ನು ನ್ಯಾಯಾಧೀಶರು ಬೇಗ ಬೇಗ ನಡೆಸಲಿಲ್ಲ ಎಂಬ ಕಾರಣಕ್ಕೆ 55 ವರ್ಷದ ವ್ಯಕ್ತಿಯೊಬ್ಬ ನ್ಯಾಯಾಧೀಶರ ಕಾರನ್ನೇ ಹಾಳು ಮಾಡಿದ್ದಾನೆ. ಕೇರಳದ ತಿರುವಲ್ಲ ಕೌಟುಂಬಿಕ ಕೋರ್ಟ್​​ನ ಆವರಣದಲ್ಲಿ ನಿಂತಿದ್ದ ಕಾರಿನ ನಂಬರ್​ ಪ್ಲೇಟ್​ ಕಿತ್ತು ಹಾಕಲು ಯತ್ನಿಸಿದ್ದಾನೆ. ಅವನ ಈ ಕೆಲಸವನ್ನು ಕೆಲವರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಈ ವ್ಯಕ್ತಿಯನ್ನು ಇ.ಪಿ ಜಯಪ್ರಕಾಶ್ ಎಂದು ಗುರುತಿಸಲಾಗಿದೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿ ಇದ್ದಾನೆ.

ಬುಧವಾರ ಸಂಜೆ 4.30ರ ಹೊತ್ತಿಗೆ ಘಟನೆ ನಡೆದಿದೆ. ಈ ವ್ಯಕ್ತಿ ತನಗೆ ಪತ್ನಿಯಿಂದ ವಿಚ್ಛೇದನ ಬೇಕು ಎಂದು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ. ಆದರೆ ಆ ಅರ್ಜಿ ವಿಚಾರಣೆ ವಿಳಂಬ ಆಗುತ್ತಿತ್ತು. ಅವನಿಗೆ ಅರ್ಜೆಂಟ್ ಆಗಿ ಡಿವೋರ್ಸ್ ಬೇಕಿತ್ತು. ಬುಧವಾರ ಕೂಡ ವಿಚಾರಣೆ ಇತ್ತು. ಅಂದೂ ಕೂಡ ತುಂಬ ಬೆಳವಣಿಗೆ ಆಗಲಿಲ್ಲ. ಕೋರ್ಟ್​ನಿಂದ ಕೋಪದಿಂದಲೇ ಹೊರಬಂದ ಜಯಪ್ರಕಾಶ್, ಸಮೀಪದ ಮಾರ್ಕೆಟ್​ಗೆ ಹೋಗಿ ಒಂದು ಗುದ್ದಲಿಯನ್ನು ತಂದ. ಆ ಗುದ್ದಲಿಯಿಂದ ಕಾರಿನ ನಾಲ್ಕೂ ಕಿಟಕಿಗಳನ್ನು ಒಡೆದಿದ್ದಾನೆ. ನಂಬರ್​ ಪ್ಲೇಟ್​ನ್ನು ಕಿತ್ತು ಹಾಕಿದ್ದಾನೆ.

ಇದನ್ನೂ ಓದಿ: Viral Video: ಹೆದ್ದಾರಿಯ ಸ್ವಾಗತ ಕಮಾನಿನ ಮೇಲೆ ಪುಶ್​ ಅಪ್ಸ್​; ಇವನು ಕುಡುಕನೋ? ಸಾಹಸಿಯೋ!

ಆತನ ಹತಾಶೆ ಮಿತಿಮೀರಿತ್ತು. ಗುದ್ದಲಿಯನ್ನು ಹಿಡಿದುಕೊಂಡು ಇಡೀ ಕಾರನ್ನು ಸುತ್ತುತ್ತಿದ್ದ. ವಿಚಾರಣೆ ನಡೆಸುತ್ತಿರುವ ಜಡ್ಜ್​ಗೆ ನಿಂದಿಸುತ್ತಿದ್ದ. ಕೂಡಲೇ ಅಲ್ಲಿಯೇ ಇದ್ದ ಪೊಲೀಸರು ಅವನನ್ನು ಬಂಧಿಸಿದ್ದಾರೆ. ನ್ಯಾಯಾಲಯದ ಕೆಲಸಕ್ಕೆ ತಡೆ ಉಂಟು ಮಾಡಿದ, ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾನಿ ಮಾಡಿದ ಆರೋಪದಡಿ ಜಯಪ್ರಕಾಶ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಡಿವೋರ್ಸ್ ಅರ್ಜಿಯನ್ನು ನ್ಯಾಯಾಧೀಶರು ಬೇಗಬೇಗ ವಿಚಾರಣೆ ನಡೆಸುತ್ತಿಲ್ಲ ಎಂದೇ ಹೀಗೆ ಕಾರು ಧ್ವಂಸ ಗೊಳಿಸಿದ್ದಾಗಿ ಆತ ಪೊಲೀಸರ ಎದುರು ಹೇಳಿಕೊಂಡಿದ್ದಾನೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version