ಮುಂಬೈ: ದೇಶದ ಖ್ಯಾತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಹಾಗೂ ಅವರ ಕುಟುಂಬಕ್ಕೆ ಜೀವ ಬೆದರಿಕೆ (Threat) ಹಾಕಿದ ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ವ್ಯಕ್ತಿಯು ೫೬ ವರ್ಷದ ಜ್ಯುವೆಲ್ಲರ್ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ 10.39ರಿಂದ ಮಧ್ಯಾಹ್ನ 12.04ರವರೆಗೆ ಈತ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದು, ತನ್ನನ್ನು ಅಫ್ಜಲ್ ಎಂದು ಗುರುತಿಸಿಕೊಂಡಿದ್ದ. ಈತ ಒಟ್ಟು ಒಂಬತ್ತು ಬಾರಿ ಕರೆಮಾಡಿ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಬಂಧಿತನ ಹೆಸರು ಅಫ್ಜಲ್ ಅಲ್ಲ ವಿಷ್ಣು ಭೋಮಿಕ್ ಎಂದಾಗಿದ್ದು, ಈತ ತ್ರಿಪುರದ ಮೂಲದವನು. ಕಳೆದ 30 ವರ್ಷಗಳಿಂದ ಮುಂಬೈಯಲ್ಲಿ ವಾಸಿಸುತ್ತಿದ್ದು, ಈತನ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯೊಂದರ ಕಾಲ್ ಸೆಂಟರ್‌ಗೆ ಕರೆ ಮಾಡಿದ ಈತ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬದವರಿಗೆ ಜೀವ ಬೆದರಿಕೆ ಹಾಕಿದ್ದಾನೆ. ಕೂಡಲೇ ಕಾಲ್ ಸೆಂಟರ್‌ನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು,ಪೊಲೀಸರು ಕರೆ ಮಾಡಿದವನ ಮೊಬೈಲ್ ನಂಬರ್ ಆಧರಿಸಿ ಆತನನ್ನು ಬಂಧಿಸಿದ್ದರು.
ಇದನ್ನೂ ಓದಿ | ಸತತ ಎರಡನೇ ವರ್ಷ ಸಂಬಳ ಬೇಡ ಎಂದ ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ