Site icon Vistara News

Meghalaya Election: ಮೇಘಾಲಯದಲ್ಲಿ ವೇಶ್ಯಾಗೃಹ ನಡೆಸುತ್ತಿದ್ದ ಆರೋಪಿ ಮರಕ್ ಸೇರಿ 60 ಮಂದಿಗೆ ಬಿಜೆಪಿ ಟಿಕೆಟ್

Meghalaya Election, BJP announces 60 candidate including Bernard N Marak

ಶಿಲ್ಲಾಂಗ್: ಫೆಬ್ರವರಿ 27ಕ್ಕೆ ಮೇಘಾಲಯ ವಿಧಾನಸಭೆ ಚುನಾವಣೆ ನಡೆಯಲಿದೆ(Meghalaya Election). ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿವೆ. ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ (Conrad K Sangma) ವಿರುದ್ಧ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಬಂಡುಕೋರ ನಾಯಕ ಬರ್ನಾರ್ಡ್ ಎನ್ ಮರಕ್ (Bernard N Marak) ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಮರಕ್ ಅವರು ವೇಶ್ಯಾಗೃಹ ನಡೆಸುತ್ತಿದ್ದ ಆರೋಪವನ್ನು ಎದುರಿಸುತ್ತಿದ್ದಾರೆ. ಜತೆಗೆ, ಮೇಘಾಲಯದ 60 ಕ್ಷೇತ್ರಗಳಿಗೂ ಬಿಜೆಪಿಯು ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

ಕಾನ್ರಾಡ್ ಸಂಗ್ಮಾ ನೇತೃತ್ವದ ಮೇಘಾಲಯ ಡೆಮಾಕ್ರಟಿಕ್ ಕೂಟದಿಂದ ಕಳೆದ ತಿಂಗಳು ಬಿಜೆಪಿ ಹೊರ ಬಂದು, ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದು ಪಕ್ಷದ ವಕ್ತಾರರು ಹೇಳಿದ್ದಾರೆ.

60 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ

ಬಿಜೆಪಿಯ ಹಾಲಿ ಶಾಸಕರಾದ ಸಂಬೋರ್ ಶುಲ್ಲೈ, ಎ ಎಲ್ ಹೆಕ್ ಅವರಿಗೂ ಟಿಕೆಟ್ ನೀಡಲಾಗಿದ್ದು, ಇವರಿಬ್ಬರೂ ಕ್ರಮವಾಗಿ ದಕ್ಷಿಣ ಶಿಲ್ಲಾಂಗ್ ಮತ್ತು ಪಿಂಥೋರುಖ್ರಾ ಕ್ಷೇತ್ರಗಳಿಂದ ಕಣಕ್ಕೆ ಇಳಿಯಲಿದ್ದಾರೆ. ಹಾಗೆಯೇ, ಇತರ ಪಕ್ಷಗಳಿಂದ ಬಿಜೆಪಿಗೆ ವಲಸೆ ಬಂದಿರುವ ಹಾಲಿ ಶಾಸಕರಿಗೂ ಬಿಜೆಪಿ ಟಿಕೆಟ್ ನೀಡಿದೆ. ಈ ಪೈಕಿ, ಎಚ್‌ ಎಂ ಶಾಂಗ್‌ಪ್ಲಿಯಾಂಗ್, ಫೆರ್ಲಿನ್ ಸಂಗ್ಮಾ, ಬೆನೆಡಿಕ್ಟ್ ಮರಾಕ್ ಮತ್ತು ಸ್ಯಾಮ್ಯುಯೆಲ್ ಎಂ ಸಂಗ್ಮಾ ಅವರು ಕ್ರಮವಾಗಿ ಮೌಸಿನ್‌ರಾಮ್, ಸೆಲ್ಸೆಲ್ಲಾ, ರಾಕ್ಸಾಮ್ಗ್ರೆ ಮತ್ತು ಬಾಗ್ಮಾರಾ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ: ಮೇಘಾಲಯ ಬಿಜೆಪಿ ರಾಜ್ಯ ಉಪಾಧ್ಯಕ್ಷನ ವೇಶ್ಯಾಗೃಹದ ಮೇಲೆ ಪೊಲೀಸ್‌ ದಾಳಿ; 6 ಮಕ್ಕಳ ರಕ್ಷಣೆ

2018ರಲ್ಲಿ ಸ್ಪರ್ಧಿಸಲು ವಿಫಲರಾಗಿದ್ದ ಮೇಘಾಲಯ ಬಿಜೆಪಿ ರಾಜ್ಯ ಅಧ್ಯಕ್ಷ ಅರ್ನೆಸ್ಟ್ ಮಾವ್ರಿ ಅವರು ಈ ಬಾರಿ ವೆಸ್ಟ್ ಶಿಲ್ಲಾಂಗ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಪಕ್ಷದ ವಕ್ತಾರ ಎಂ ಎಚ್ ಖಾರ್ಕ್ರಾಂಗ್ ಅವರು ಉತ್ತರ ಶಿಲ್ಲಾಂಗ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿಯ ಒಟ್ಟು ಮಹಿಳೆಯರಿಗೆ ಟಿಕೆಟ್ ನೀಡಿದೆ.

Exit mobile version