ದಿಸ್ಪುರ: ಬಾಲ್ಯ ವಿವಾಹವನ್ನು ತಡೆಯುವ ದಿಸೆಯಲ್ಲಿ ಅಸ್ಸಾಂ ಸರ್ಕಾರವು ಮಹತ್ವದ ತೀರ್ಮಾನ ತೆಗೆದುಕೊಂಡಿದೆ. “14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರನ್ನು ಮದುವೆಯಾಗುವ ಪುರುಷರ ವಿರುದ್ಧ ಪೋಕ್ಸೊ (POCSO Act In Assam) ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
“ರಾಜ್ಯದಲ್ಲಿ ತಾಯಿ ಹಾಗೂ ಶಿಶು ಮರಣ ಪ್ರಮಾಣ ಹೆಚ್ಚಿದೆ. ಹಾಗೆಯೇ, ಸರಾಸರಿ ಬಾಲ್ಯ ವಿವಾಹದ ಪ್ರಮಾಣ ಶೇ.31ರಷ್ಟಿದೆ. ತಾಯಿ ಹಾಗೂ ಶಿಶು ಮರಣಕ್ಕೆ ಬಾಲ್ಯವಿವಾಹವೇ ಪ್ರಮುಖ ಕಾರಣವಾಗಿದೆ. ಹಾಗಾಗಿ, ಬಾಲ್ಯ ವಿವಾಹವನ್ನು ತಡೆಯಲು ಸಚಿವ ಸಂಪುಟ ಸಭೆಯು ಮಹತ್ವದ ತೀರ್ಮಾನ ತೆಗೆದುಕೊಂಡಿದೆ” ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ರಾಜ್ಯಾದ್ಯಂತ ಬಾಲ್ಯ ವಿವಾಹ ತಡೆಯಲು ಎಲ್ಲ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಪ್ರತಿ ಗ್ರಾಮಕ್ಕೆ ಒಬ್ಬ ಚೈಲ್ಡ್ ಪ್ರೊಟೆಕ್ಷನ್ ಅಧಿಕಾರಿಯನ್ನು ನೇಮಿಸಲಾಗುತ್ತದೆ. ಗ್ರಾಮಗಳಲ್ಲಿ ಬಾಲ್ಯ ವಿವಾಹ ನಡೆದರೆ ದೂರು ದಾಖಲಿಸುವುದು ಗ್ರಾಮ ಪಂಚಾಯಿತಿ ಕಾರ್ಯದರ್ಶಿಯ ಕರ್ತವ್ಯ” ಎಂದು ಹೇಳಿದರು.
ಇದನ್ನೂ ಓದಿ | POCSO Act | ಮುಸ್ಲಿಂ ಬಾಲಕಿಯನ್ನು ಮದುವೆ ಆದರೂ ವ್ಯಕ್ತಿಗೆ ಪೋಕ್ಸೊ ಕಾಯ್ದೆ ಅನ್ವಯ ಎಂದ ಕೇರಳ ಹೈಕೋರ್ಟ್