Site icon Vistara News

Mental Health Institute : ದೇಶದ ಯಾವುದೇ ಸರ್ಕಾರಿ ಮಾನಸಿಕ ಆರೋಗ್ಯ ಸಂಸ್ಥೆಯೂ ಸರಿಯಾಗಿ ಕೆಲಸ ಮಾಡುತ್ತಿಲ್ಲ!

ನವ ದೆಹಲಿ: ಭಾರತದಲ್ಲಿ ಒಟ್ಟಾರೆಯಾಗಿ 46 ಸರ್ಕಾರಿ ಮಾನಸಿಕ ಆರೋಗ್ಯ ಸಂಸ್ಥೆಗಳಿವೆ(Mental Health Institute). ಆದರೆ ಅದರಲ್ಲಿ ಯಾವುದೂ ಸರಿಯಾದ ರೀತಿಯಲ್ಲಿ ಕರ್ತವ್ಯ ಪಾಲಿಸುತ್ತಿಲ್ಲ. ಎಲ್ಲ ಸಂಸ್ಥೆಗಳ ಸ್ಥಿತಿ ಶೋಚನೀಯವಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಹೇಳಿದೆ.

ಇದನ್ನೂ ಓದಿ: Suicide Case: ಒಂಟಿ ಮನೆಯಲ್ಲಿ ಒಂದೇ ಕುಟುಂಬದ ಮೂವರು ಸಹೋದರಿಯರ ಆತ್ಮಹತ್ಯೆ; ಮಾನಸಿಕ ಖಿನ್ನತೆ ಶಂಕೆ
ಎನ್‌ಎಚ್‌ಆರ್‌ಸಿಯು ಪೂರ್ಣ ಆಯೋಗವು ಗ್ವಾಲಿಯರ್‌, ಆಗ್ರಾ, ರಾಂಚಿಯ ನಾಲ್ಕು ಸರ್ಕಾರಿ ಮಾನಸಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದೆ. ಉಳಿದ 42 ಕೇಂದ್ರಗಳಿಗೆ ವಿಶೇಷ ವರದಿಗಾರರನ್ನು ಕಳುಹಿಸಿ ಪರಿಶೀಲನೆ ನಡೆಸಿದೆ. ಆಗ ಅಲ್ಲಿ ವೈದ್ಯರ ಕೊರತೆ ಇರುವುದು, ಗುಣಮುಖರಾದ ರೋಗಿಗಳನ್ನೂ ಅಕ್ರಮವಾಗಿ ಇರಸಿಕೊಂಡಿರುವುದು ಕಂಡುಬಂದಿದೆ.

ಯಾವುದೇ ರೋಗಿ ಸಂಪೂರ್ಣವಾಗಿ ಗುಣಮುಖನಾದ ನಂತರ ಆತನನ್ನು ಆತನ ಕುಟುಂಬದೊಂದಿಗೆ ಸೇರಿಸಬೇಕು. ಒಂದು ವೇಳೆ ಕುಟುಂಬ ಅದಕ್ಕೆ ಒಪ್ಪದಿದ್ದರೆ, ಸರ್ಕಾರವೇ ಆತನ ಜವಾಬ್ದಾರಿ ಹೊತ್ತು, ಆತನಿಗೊಂದು ಕುಟುಂಬ ಕಲ್ಪಿಸಿಕೊಡಬೇಕು. ಆದರೆ ರಾಜ್ಯ ಸರ್ಕಾರಗಳು ಈ ವಿಚಾರದಲ್ಲಿ ವಿಫಲವಾಗಿವೆ ಎಂದು ಎನ್‌ಎಚ್‌ಆರ್‌ಸಿ ಹೇಳಿದೆ. ಗುಣಮುಖರಾದವರನ್ನು ಆಸ್ಪತ್ರೆಯಲ್ಲಿ ಇಟ್ಟುಕೊಳ್ಳುವ ಮೂಲಕ ಕಾನೂನಿನ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ.

ವರದಿ ಕೇಳಿದ ಎನ್‌ಎಚ್‌ಆರ್‌ಸಿ
ಈ ಭೇಟಿಯ ನಂತರ ಮಾನಸಿಕ ಆರೋಗ್ಯ ಕೇಂದ್ರಗಳಲ್ಲಿನ ಶೋಚನೀಯ ಸ್ಥಿತಿಯ ಬಗ್ಗೆ ಎನ್‌ಎಚ್‌ಆರ್‌ಸಿಯು ಕೇಂದ್ರ ಕೇಂದ್ರ ಆರೋಗ್ಯ ಕಾರ್ಯದರ್ಶಿ, ಆರೋಗ್ಯ ಸೇವೆಗಳ ಮಹಾನಿರ್ದೇಶಕರು, ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳು (ಆರೋಗ್ಯ), ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಗರದ ಪೊಲೀಸ್ ಆಯುಕ್ತರು ಹಾಗೂ 46 ಕೇಂದ್ರಗಳ ನಿರ್ದೇಶಕರಿಂದ ವರದಿ ಕೇಳಿದೆ. ಗುಣಮುಖರಾದ ರೋಗಿಗಳನ್ನು ಅವರ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿ ಆಸ್ಪತ್ರೆಗಳಲ್ಲಿ ಹೇಗೆ ಅಕ್ರಮವಾಗಿ ಇರಿಸಿಕೊಳ್ಳಲಾಗುತ್ತಿದೆ ಎನ್ನುವುದಕ್ಕೆ ಅವರು ಕಾರಣಗಳನ್ನು ನೀಡಬೇಕಾಗುತ್ತದೆ.

ಇದನ್ನೂ ಓದಿ: Shruti Haasan | ಮಾನಸಿಕ ಸಮಸ್ಯೆಯಿದೆ ಎಂದವರಿಗೆ ಶ್ರುತಿ ಹಾಸನ್ ಖಡಕ್‌ ಪ್ರತಿಕ್ರಿಯೆ
ಈ ಭೇಟಿಯ ವೇಳೆ ಹೆಚ್ಚಿನ ರಾಜ್ಯಗಳು ʼರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರʼ, ʼರಾಜ್ಯ ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿʼ ಹಾಗೂ ʼರಾಜ್ಯ ಸರ್ಕಾರದ ಮಾನಸಿಕ ಆರೋಗ್ಯ ರಕ್ಷಣಾ ನಿಯಮಗಳುʼ ಮತ್ತು ರಾಜ್ಯ ಮಾನಸಿಕ ಆರೋಗ್ಯ ರಕ್ಷಣಾ ನಿಯಮಗಳನ್ನೂ ರಚಿಸಿಲ್ಲ ಎನ್ನುವುದನ್ನು ಗಮನಿಸಿರುವುದಾಗಿ ಎನ್‌ಎಚ್‌ಆರ್‌ಸಿ ಹೇಳಿದೆ. ಅವುಗಳ ರಚನೆಯ ಕುರಿತಾದ ಮಾಹಿತಿಯನ್ನೂ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ.

Exit mobile version