Site icon Vistara News

Jitendra Shastri | ಮಿರ್ಜಾಪುರ್‌ ವೆಬ್‌ ಸಿರೀಸ್‌ ಖ್ಯಾತಿಯ ನಟ ಜಿತೇಂದ್ರ ಶಾಸ್ತ್ರಿ ನಿಧನ

Jitendra

ಮುಂಬೈ: ಮಿರ್ಜಾಪುರ್‌ ವೆಬ್‌ ಸಿರೀಸ್‌ನಲ್ಲಿ ಮನೋಜ್ಞವಾಗಿ ನಟಿಸುವ ಮೂಲಕ ಖ್ಯಾತಿ ಗಳಿಸಿದ್ದ ನಟ ಜಿತೇಂದ್ರ ಶಾಸ್ತ್ರಿ (೬2) (Jitendra Shastri) ನಿಧನರಾಗಿದ್ದಾರೆ. ನಟ ಸಂಜಯ್‌ ಮಿಶ್ರಾ ಅವರು ಇನ್‌ಸ್ಟಾಗ್ರಾಂ ಮೂಲಕ ಜಿತೇಂದ್ರ ಶಾಸ್ತ್ರಿ ನಿಧನದ ಕುರಿತು ಮಾಹಿತಿ ನೀಡಿದ್ದಾರೆ.

ಜಿತೇಂದ್ರ ಶಾಸ್ತ್ರಿ ನಿಧನಕ್ಕೆ ಬಾಲಿವುಡ್‌ ದಿಗ್ಗಜರು ಸಂತಾಪ ಸೂಚಿಸಿದ್ದಾರೆ. ‘ಫ್ಯಾಮಿಲಿ ಮ್ಯಾನ್‌’ ಖ್ಯಾತಿಯ ಮನೋಜ್‌ ಬಾಜ್ಪೇಯಿ, ಸಂಜಯ್‌ ಮಿಶ್ರಾ, ರಾಜೇಶ್‌ ತೈಲಾಂಗ್‌ ಸೇರಿ ಹಲವರು ಕಂಬನಿ ಮಿಡಿದಿದ್ದಾರೆ. ಮಿರ್ಜಾಪುರ್ ವೆಬ್‌ ಸಿರೀಸ್‌ನಲ್ಲಿ ಜಿತೇಂದ್ರ ಶಾಸ್ತ್ರಿ ಅವರು ಉಸ್ಮಾನ್‌ ಎಂಬ ಪಾತ್ರ ಮಾಡಿದ್ದರು.

ಮಧ್ಯಪ್ರದೇಶದಲ್ಲಿ ಜನಿಸಿದ ಜಿತೇಂದ್ರ ಮಿಶ್ರಾ ಹತ್ತಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಮನೆಮಾತಾಗಿದ್ದಾರೆ. ಬ್ಲ್ಯಾಕ್‌ ಫ್ರೈಡೇ, ಚರಸ್‌, ಲಜ್ಜಾ, ಇಂಡಿಯಾಸ್‌ ಮೋಸ್ಟ್‌ ವಾಂಟೆಡ್‌ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | Raju Srivastava | ಫಲಿಸಲಿಲ್ಲ ಒಂದೂವರೆ ತಿಂಗಳ ಚಿಕಿತ್ಸೆ; ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್​ ನಿಧನ

Exit mobile version