Site icon Vistara News

Anushka Shetty: ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಚಿತ್ರಕ್ಕೆ ‘ಸೂಪರ್ ಸ್ಟಾರ್’ ಅನುಷ್ಕಾ ಶೆಟ್ಟಿ ಪಡದೆ ಸಂಭಾವನೆ ಎಷ್ಟು?

Miss Shetty, Mr Polishetty

ನವದೆಹಲಿ: ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ (Super Star Anushka Shetty) ಅವರ ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ (Miss Shetty, Mr Polishetty) ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ನಟ ಪ್ರಭಾಸ್ (Actor Prabhas) ಜತೆ ಬಾಹುಬಲಿ ನಟಿಸಿದ ಬಳಿಕ ಅನುಷ್ಠಾ ಶೆಟ್ಟಿ ಕೂಡ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಈಗ ಅವರ ಹೊಸ ಸಿನಿಮಾ ಎಷ್ಟು ಸಂಭಾವನೆ (renumeration) ಪಡೆದುಕೊಂಡಿರಬಹುದು ಎಂಬ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ನಡೆಯುತ್ತಿದೆ. ಅನುಷ್ಕಾ ಶೆಟ್ಟಿ ಚಿತ್ರಗಳ ಬಿಡುಗಡೆ ನಡುವೆ ದೊಡ್ಡ ಗ್ಯಾಪ್ ಇದ್ದರೂ ಅವರು ಬೇಡಿಕೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಅಂದರೆ, ಈಗಲೂ ಅವರು ತಮ್ಮ ಸಿನಿಮಾಗಳಿಗೆ ದೊಡ್ಡ ಮೊತ್ತವನ್ನು ಸಂಭಾವನೆಯಾಗಿ ಪಡೆದುಕೊಳ್ಳುತ್ತಿದ್ದಾರೆ.

ಮಂಗಳೂರಲ್ಲಿ ಜನಿಸಿದ ಅನಿಷ್ಕಾ ಶೆಟ್ಟಿ ಅವರು ಬೆಂಗಳೂರಲ್ಲಿ ಓದಿದ್ದಾರೆ. ನಾಗಾರ್ಜನ್ ಅವರೊಂದಿಗೆ ಸೂಪರ್ ಚಿತ್ರದ ಮೂಲಕ 2005ರಲ್ಲಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಈವರೆಗೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅವರು ತಮ್ಮ ಸಿನಿಮಾಗಳ ಆಯ್ಕೆಯಲ್ಲಿ ಕಟ್ಟುನಿಟ್ಟು ಪ್ರದರ್ಶಿಸುತ್ತಿರುವುದನ್ನು ಕಾಣಬಹುದು. ಬಾಹುಬಲಿ 2 ಸಿನಿಮಾ ಬಿಡುಗಡೆಯಾಗಿ ಸೂಪರ್ ಸಕ್ಸೆಸ್ ಕಂಡ ಬಳಿಕ ಆಕೆ ಕೇವಲ ಎರಡೇ ಸಿನಿಮಾದಲ್ಲಿ ನಟಿಸಿದ್ದಾರೆ.

ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಚಿತ್ರದ ಟ್ರೈಲರ್

2018ರಲ್ಲಿ ತೆರೆ ಕಂಡ ಭಾಗಮತಿ ಸಿನಿಮಾದಲ್ಲಿ ಅವರು ನಟಿಸಿದ್ದರು. ಅದಾದ ಬಳಿಕ ಅವರು ನಿಶ್ಯಬ್ಧಂ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರವು 2020ರಲ್ಲಿ ತೆರೆ ಕಂಡಿದ್ದರು. ಮೂರು ವರ್ಷದ ಗ್ಯಾಪ್ ಬಳಿಕ ಅನಿಷ್ಕಾ ಶೆಟ್ಟಿ ಈಗ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಚಿತ್ರದ ಮೂಲಕ ಮತ್ತೆ ಜನರನ್ನು ರಂಜಿಸಲು ಬರುತ್ತಿದ್ದಾರೆ. ಈ ಮೊದಲು ಅನುಷ್ಕಾ ಶೆಟ್ಟಿ ಪ್ರತಿ ಸಿನಿಮಾಕ್ಕೆ 3 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದರು. ಆದರೆ, ಈಗ ರಿಲೀಸ್ ಆಗಲಿರುವ ಸಿನಿಮಾಕ್ಕೆ ಅವರು ಬರೋಬ್ಬರಿ 6 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ ಎಂದು ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ: Anushka Shetty: ಪ್ರಭಾಸ್‌ಗೆ ನಿಕ್‌ನೇಮ್‌ನಿಂದ ಕರೆದ ಅನುಷ್ಕಾ ಶೆಟ್ಟಿ: ಪೋಸ್ಟ್‌ ವೈರಲ್‌!

ಅನುಷ್ಕಾ ಅವರು ಚಿತ್ರರಂಗಕ್ಕೆ ಕಾಲಿಟ್ಟು ಕಳೆದ ವರ್ಷಕ್ಕೆ 16 ವರ್ಷಗಳನ್ನು ಪೂರೈಸಿದ್ದರು. ಈ ಸಂದರ್ಭದಲ್ಲಿ ಅನುಷ್ಕಾ ಶೆಟ್ಟಿ ಅವರು ಇನ್‌ಸ್ಟಾಗ್ರಾಮ್‌‌ನಲ್ಲಿ ಪೋಸ್ಟ್ ಮಾಡಿ, ತಾನು ನಟಿಸಿದ ಎಲ್ಲ ಚಿತ್ರಗಳನ್ನು ಸ್ಮರಿಸಿಕೊಂಡಿದ್ದರು. ಇದೇ ವೇಳೆ, ಅವರು ತಮ್ಮ ಮೊದಲು ತೆಲುಗು ಚಿತ್ರವನ್ನು ಸ್ಮರಿಸಿಕೊಂಡಿದ್ದರು.

ಅನುಷ್ಕಾ ಶೆಟ್ಟಿ ನಟಿಸುತ್ತಿರುವ ಈ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಚಿತ್ರದಲ್ಲಿ ನವೀನ್ ಪೋಲಿಶೆಟ್ಟಿ ಕೂಡ ಅಭಿನಯಿಸುತ್ತಿದ್ದಾರೆ. ಸೋಮವಾರ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ನಂದಿತಾ ಅವರು ಶೆಫ್ ಆಗಿ ಅಭಿನಯಿಸಿದ್ದಾರೆ. ಈ ಚಿತ್ರವು ಸೆಪ್ಟೆಂಬರ್ 7ರಂದು ಬಿಡುಗಡೆಯಾಗಲಿದೆ.

ಸಿನಿಮಾದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version