Site icon Vistara News

Sharad Pawar: ಎನ್​ಸಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಜಿತೇಂದ್ರ ಅವ್ಹಾದ್ ರಾಜೀನಾಮೆ

MLA Jitendra Awhad Quits NCP General secretary post

#image_title

ಥಾಣೆ: ನ್ಯಾಷನಲಿಸ್ಟ್​ ಕಾಂಗ್ರೆಸ್ ಪಾರ್ಟಿ (NCP) ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಶರದ್ ಪವಾರ್ (Sharad Pawar)ಅವರು ಮಂಗಳವಾರ ಘೋಷಣೆ ಮಾಡಿದ ಬೆನ್ನಲ್ಲೇ ಎನ್​ಸಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಇಂದು ಶಾಸಕ ಜಿತೇಂದ್ರ ಅವ್ಹಾದ್​ ರಾಜೀನಾಮೆ ಕೊಟ್ಟಿದ್ದಾರೆ. ಶರದ್​ ಪವಾರ್ ರಾಜೀನಾಮೆ ನೀಡಬಾರದು ಎಂದು ಪಕ್ಷದ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಶರದ್ ಪವಾರ್ ಅವರು ತಮ್ಮ ರಾಜೀನಾಮೆ ಬಗ್ಗೆ ಇನ್ನೂ ಎರಡು-ಮೂರು ದಿನಗಳ ಕಾಲ ವಿಚಾರ ಮಾಡಲಿ ಎಂದು ಅವರ ಸೋದರಳಿತ, ಎನ್​ಸಿಪಿ ಮುಖಂಡ ಅಜಿತ್ ಪವಾರ್ ಹೇಳಿದ್ದಾರೆ. ಆದರೆ ಶರದ್​ ಪವಾರ್ ತಮ್ಮ ತೀರ್ಮಾನದಿಂದ ಹಿಂದೆ ಸರಿಯುವ ಲೆಕ್ಕದಲ್ಲಿ ಇಲ್ಲ. ಆದರೆ ಶರದ್ ಪವಾರ್ ರಾಜೀನಾಮೆ ಘೋಷಣೆ ಮಾಡುತ್ತಿದ್ದಂತೆ ಜಿತೇಂದ್ರ ಅವ್ಹಾದ್ ಸೇರಿ ಇನ್ನೂ ಹಲವು ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಿಸೈನ್ ಮಾಡಿದ್ದಾರೆ. ​

ಎನ್​ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಅವರು ಎಎನ್​​ಐ ಜತೆ ಮಾತನಾಡಿ ‘ನಾನು ನನ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಈಗಾಗಲೇ ರಾಜೀನಾಮೆ ಪತ್ರವನ್ನು ಶರದ್ ಪವಾರ್ ಅವರಿಗೆ ಕಳಿಸಿಕೊಟ್ಟಿದ್ದೇನೆ. ಎನ್​ಸಿಪಿ ಥಾಣೆ ಘಟಕದ ಎಲ್ಲ ಪದಾಧಿಕಾರಿಗಳೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಶರದ್​ ಪವಾರ್ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಘೋಷಣೆ ಮಾಡಿದ್ದರಿಂದಲೇ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:Sharad Pawar: ಎನ್​ಸಿಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಶರದ್​ ಪವಾರ್ ನಿರ್ಧಾರ

ಶರದ್ ಪವಾರ್ ಅವರು ಮಂಗಳವಾರ ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ. ತಾವು ಸಾರ್ವಜನಿಕ ಜೀವನದಿಂದ ದೂರ ಸರಿಯುವುದಿಲ್ಲ. ರಾಜ್ಯಸಭೆಯಲ್ಲಿ ನನ್ನ ಅಧಿಕಾರ ಅವಧಿ ಮೂರು ವರ್ಷಗಳು ಬಾಕಿ ಇವೆ. ನಾನು ಇನ್ನು ಯಾವುದೇ ಚುನಾವಣೆಯಲ್ಲೂ ಸ್ಪರ್ಧೆ ಮಾಡುವುದಿಲ್ಲ. ನಮ್ಮ ಮಹಾರಾಷ್ಟ್ರ ರಾಜ್ಯ ಮತ್ತು ಇಡೀ ದೇಶದ ಸಮಸ್ಯೆಗಳ ಬಗ್ಗೆ ರಾಜ್ಯಸಭೆಯಲ್ಲಿ ಧ್ವನಿ ಎತ್ತುತ್ತೇನೆ. ಹೊರತಾಗಿ ಇನ್ನೇನೂ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುವುದಿಲ್ಲ. ನಾವು ಆಸೆಬುರುಕರಾಗಬಾರದು’ ಎಂದು ಅವರು ಹೇಳಿದ್ದಾರೆ. ತೆರವಾಗಿರುವ ಎನ್​ಸಿಪಿ ಅಧ್ಯಕ್ಷನ ಸ್ಥಾನಕ್ಕೆ ಅಜಿತ್ ಪವಾರ್ ಏರಲಿದ್ದಾರೆ. ಅಜಿತ್ ಪವಾರ್​ಗೋಸ್ಕರವೇ ಶರದ್ ಪವಾರ್ ಆ ಸ್ಥಾನ ಬಿಟ್ಟುಕೊಟ್ಟಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

Exit mobile version