Site icon Vistara News

Shiyas Kareem: ಅತ್ಯಾಚಾರ ಪ್ರಕರಣ; ರಿಯಾಲಿಟಿ ಶೋ ಸ್ಟಾರ್ ಶಿಯಾಸ್ ಕರೀಂ ಬಂಧನ!

model Shiyas Kareem

ಕಾಸರಗೋಡು: ಜನಪ್ರಿಯ ರಿಯಾಲಿಟಿ ಶೋ ತಾರೆ (Shiyas Kareem) ಮತ್ತು ಮಾಡೆಲ್ ಶಿಯಾಸ್ ಕರೀಂ ಅವರನ್ನು ಚೆನ್ನೈ ಪೊಲೀಸರು ವಿಮಾನ ನಿಲ್ದಾಣದಲ್ಲಿ ಅರೆಸ್ಟ್ ಮಾಡಿದ್ದಾರೆ. ಶಿಯಾಸ್ ಕರೀಂ ವಿರುದ್ಧ ಕೇರಳದಲ್ಲಿ ಅತ್ಯಾಚಾರ ಮತ್ತು ವಂಚನೆ ಪ್ರಕರಣ ದಾಖಲಾಗಿತ್ತು. ಶಿಯಾಸ್ ಕರೀಂ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ 11 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಅ.5ರ ಬೆಳಗ್ಗೆ ಅರೆಸ್ಟ್‌ ಮಾಡಿದ್ದಾರೆ.

ಶಿಯಾಸ್ ಕರೀಂ ವಿದೇಶದಿಂದ ಚೆನ್ನೈಗೆ ಬಂದಿದ್ದ, ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆತನನ್ನು ಚೆನ್ನೈ ಕಸ್ಟಮ್ಸ್ ಇಲಾಖೆ ವಶಕ್ಕೆ ಪಡೆದಿದ್ದು, ಕೇರಳ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ. ಜಿಮ್ನಾಷಿಯಂ ತರಬೇತುದಾರರಾಗಿರುವ ಯುವತಿಯ ದೂರಿನ ಮೇರೆಗೆ ಕಾಸರಗೋಡು ಚಂದೇರಾ ಪೊಲೀಸರು ಶಿಯಾಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: 4 ವರ್ಷದಿಂದ ಇಬ್ಬರು ಪುತ್ರಿಯರ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿಯ ಬಂಧನ; ಇವನೆಂಥಾ ತಂದೆ?

32 ವರ್ಷದ ಮಹಿಳೆ ಕರೀಂ ವಿರುದ್ಧ 2021 ರಿಂದ ಹಲವಾರು ಬಾರಿ ಅತ್ಯಾಚಾರ ಮತ್ತು ಕಿರುಕುಳಕ್ಕೆ ಒಳಗಾಗಿರುವುದಾಗಿ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿಯಾಸ್ ಕರೀಂ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ 11 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂತಲೂ ಹೇಳಿಕೆ ನೀಡಿದ್ದಾರೆ.

Exit mobile version