Site icon Vistara News

New Parliament Building: ಸಂಸತ್ ಭವನದಲ್ಲಿ ಮೊಳಗಿದ ’ಮೋದಿ‘ ಘೋಷ; ಮೇಜು ಕುಟ್ಟಿ, ಚಪ್ಪಾಳೆ ತಟ್ಟಿ ಸಂಭ್ರಮ

PM Modi Enters New Parliament Building

#image_title

ನೂತನ ಸಂಸತ್​ ಭವನದ (New Parliament Building)ಲೋಕಾರ್ಪಣೆ ಕಾರ್ಯಕ್ರಮದ ಎರಡನೇ ಹಂತ ಬೆಳಗ್ಗೆ 11.30ರಿಂದ ಪ್ರಾರಂಭವಾಯಿತು. ಬೆಳಗ್ಗೆ ಫಲಕ ಅನಾವರಣ ಮಾಡುವ ಮೂಲಕ, ಪ್ರಧಾನಿ ಮೋದಿ (PM Modi) ಕೈಯಿಂದ ಉದ್ಘಾಟನೆಗೊಂಡ ಸಂಸತ್​ ಭವನದಲ್ಲಿ ಬಿಜೆಪಿ ಸಂಸದರು ಮತ್ತು ಈ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಪಕ್ಷಗಳ ಸಂಸದರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ವಿಶೇಷ ಆಹ್ವಾನಿತರು ಬಂದು ಕುಳಿತಿದ್ದರು.

ಪ್ರಧಾನಿ ಮೋದಿ ಆಗಮನಕ್ಕೂ ಮುನ್ನವೇ ಬಂದು ಕುಳಿತುಕೊಂಡ ಸಂಸದರು/ ಜನಪ್ರತಿನಿಧಿಗಳು ಬಳಿಕ ಪ್ರಧಾನಿ ಮೋದಿ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾರನ್ನು ಸ್ವಾಗತಿಸಿದರು. ಮೋದಿಯವರು ಸಂಸತ್ ಪ್ರವೇಶಿಸುತ್ತಿದ್ದ ವೇಳೆ, ಟೇಬಲ್​ ಕುಟ್ಟಿ, ಮೋದಿ-ಮೋದಿ ಎಂದು ಘೋಷಣೆ ಕೂಗುತ್ತಿದ್ದರು. ಚಪ್ಪಾಳೆ ತಟ್ಟುತ್ತಿದ್ದರು. ಎಲ್ಲರ ಮುಖದಲ್ಲಿ ನಗು, ಸಂತೋಷ ತುಂಬಿತ್ತು. ರಾಷ್ಟ್ರಗೀತೆಯೊಂದಿಗೆ ವೇದಿಕೆ ಕಾರ್ಯಕ್ರಮ ಶುರುವಾಯಿತು. ಬಳಿಕ ಸೆಂಗೋಲ್ ಬಗ್ಗೆ ಸಂಸತ್ ಭವನದಲ್ಲಿ ಒಂದು ಶಾರ್ಟ್​ಫಿಲ್ಮ್​ ಪ್ರದರ್ಶಿಸಲಾಯಿತು.

ರಾಷ್ಟ್ರಪತಿ/ಉಪರಾಷ್ಟ್ರಪತಿ ಸಂದೇಶ ಓದಿದ ರಾಜ್ಯಸಭಾ ಉಪಾಧ್ಯಕ್ಷ
ಇಂದಿನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪರಾಷ್ಟ್ರಪತಿ ಜಗದೀಪ್ ಧನಕರ್ ಪಾಲ್ಗೊಂಡಿಲ್ಲ. ಇವರಿಬ್ಬರ ಸಂದೇಶವನ್ನು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್​ ನಾರಾಯಣ್ ಸಿಂಗ್​ ಓದಿದರು. ರಾಷ್ಟ್ರಗೀತೆ ಮುಗಿಯುತ್ತಿದ್ದಂತೆ ಸಂಸತ್​ ಭವನದಲ್ಲಿ ಭಾಷಣ ಮಾಡಿದ ಹರಿವಂಶ್ ಅವರು ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ, ಎರಡೂವರೆ ವರ್ಷದಲ್ಲಿ ಹೊಸ ಸಂಸತ್ ಭವನ ಕಟ್ಟಡ ನಿರ್ಮಾಣವಾಗಿ, ಉದ್ಘಾಟನೆಯೂ ಆಗಿದ್ದು ಇಡೀ ದೇಶಕ್ಕೆ ಅಪಾರವಾದ ಸಂತೋಷ ತಂದ ವಿಷಯ’ ಎಂದು ಹೇಳಿದರು. ‘ಸ್ವಾತಂತ್ರ್ಯ ಬಂದು 75ವರ್ಷಗಳಾದ ಸಂದರ್ಭದಲ್ಲಿ ಆಚರಿಸಲಾಗುತ್ತಿರುವ ಅಮೃತಕಾಲದಲ್ಲಿ ಉದ್ಘಾಟನೆಗೊಂಡ ಹೊಸ ಸಂಸತ್​ ಭವನ ಒಂದು ಮೈಲಿಗಲ್ಲು ಮತ್ತು ಸ್ಫೂರ್ತಿ’ ಎಂದು ಹೇಳಿದರು.

ನೂತನ ಸಂಸತ್ ಭವನ ಫುಲ್​ ಪ್ಯಾಕ್​
ಹೊಸ ಸಂಸತ್ ಭವನದಲ್ಲಿ ಕುಳಿತ ಸಂಸದರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ವಿಶೇಷ ಆಹ್ವಾನಿತರು
Exit mobile version