Site icon Vistara News

Mohit Joshi : ಇನ್ಫೋಸಿಸ್‌ ಅಧ್ಯಕ್ಷ ಸ್ಥಾನ ಬಿಟ್ಟು, ಟೆಕ್‌ ಮಹೀಂದ್ರಾ ಸೇರಿದ ಮೋಹಿತ್‌

#image_title

ಬೆಂಗಳೂರು: ಪ್ರಸಿದ್ಧ ಟೆಕ್‌ ಸಂಸ್ಥೆಯಾಗಿರುವ ಇನ್ಫೋಸಿಸ್‌ ಅಧ್ಯಕ್ಷ ಸ್ಥಾನದಲ್ಲಿದ್ದ ಮೋಹಿತ್‌ ಜೋಶಿ (Mohit Joshi) ಅವರು ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಟೆಕ್‌ ಮಹೀಂದ್ರಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಹಾಗೂ ಸಿಇಒ ಆಗಿ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ: Infosys | ಇನ್ಫೋಸಿಸ್‌ಗೆ 6,586 ಕೋಟಿ ರೂ. ತ್ರೈಮಾಸಿಕ ನಿವ್ವಳ ಲಾಭ, 13% ಹೆಚ್ಚಳ
ಈ ಬಗ್ಗೆ ಟೆಕ್‌ ಮಹೀಂದ್ರಾ ಸಂಸ್ಥೆ ಅಧಿಕೃತ ಘೋಷಣೆ ಮಾಡಿದೆ. ಈಗ ವ್ಯವಸ್ಥಾಪಕ ನಿರ್ದೇಶಕರ ಸ್ಥಾನದಲ್ಲಿರುವ ಸಿ.ಪಿ.ಗುರ್ನಾನಿ ಅವರು ಡಿಸೆಂಬರ್‌ 19ರಂದು ನಿವೃತ್ತರಾಗಲಿದ್ದಾರೆ. ಅವರ ನಂತರ ಮೋಹಿತ್‌ ಅವರು ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ಸಿಇಒ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಹಾಗೆಯೇ ಇನ್ನೊಂದೆಡೆ, ಇನ್ಫೋಸಿಸ್‌ ಸಂಸ್ಥೆ ಕೂಡ ಮೋಹಿತ್‌ ಜೋಶಿ ರಾಜೀನಾಮೆ ಕೊಟ್ಟಿರುವ ವಿಚಾರವನ್ನು ತಿಳಿಸಿದೆ. ಜೋಶಿ ಅವರು ಮಾರ್ಚ್‌ 11ರಿಂದ ರಜೆಯಲ್ಲಿರುತ್ತಾರೆ. ಹಾಗೆಯೇ ಅವರು ಕಂಪನಿಯೊಂದಿಗೆ ಜೂನ್‌ 9ರವರೆಗೆ ಕೆಲಸ ಮಾಡಲಿದ್ದಾರೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Tech Mahindra | ಟೆಕ್‌ ಮಹೀಂದ್ರಾದಿಂದ ಮುಂದಿನ 5 ವರ್ಷಗಳಲ್ಲಿ 20,000 ನೇಮಕ
ಮೋಹಿತ್‌ ಅವರು ಟೆಕ್‌ ಮಹೀಂದ್ರಾ ಸಂಸ್ಥೆಗೆ ಐದು ವರ್ಷಗಳ ಕಾಲ ಅಂದರೆ 2023ರ ಡಿಸೆಂಬರ್‌ 20ರಿಂದ 2028ರ ಡಿಸೆಂಬರ್‌ 19ರವರೆಗೆ ಎಂ.ಡಿ. ಮತ್ತು ಸಿಇಒ ಆಗಿ ಸೇವೆ ಸಲ್ಲಿಸಲಿದ್ದಾರೆ. ಮೋಹಿತ್‌ ಅವರು 2007ರಲ್ಲಿ ಇನ್ಫೋಸಿಸ್‌ ಮೆಕ್ಸಿಕೋದ ಸಿಇಒ ಆಗಿ ನೇಮಕವಾದರು. ಅದಕ್ಕೂ ಮೊದಲು ಅವರು ABN AMRO ಮತ್ತು ANZ ಗ್ರಿಂಡ್ಲೇಸ್‌ ಕಂಪನಿಗಳಲ್ಲಿ ಕೆಲಸ ಮಾಡಿದ್ದರು.

Exit mobile version