ನವ ದೆಹಲಿ: ದೆಹಲಿಯಲ್ಲಿ ಐದನೇ ಮಂಕಿಪಾಕ್ಸ್ ಪ್ರಕರಣ (Monkeypox Case) ದಾಖಲಾಗಿದ್ದು, ಸೋಂಕಿತ ಮಹಿಳೆ ಲೋಕ ನಾಯಕ ಜೈ ಪ್ರಕಾಶ್ ನಾರಾಯಣ್ (ಎಲ್ಎನ್ಜೆಪಿ) ಆಸ್ಪತ್ರೆಗೆ ದಾಖಲಾಗಿದ್ದಾರೆ. ದೇಶದಲ್ಲಿ ಒಟ್ಟಾರೆ ಮಂಕಿಪಾಕ್ಸ್ ರೋಗಿಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಕಾಣಿಸಿಕೊಂಡ ಐದು ಕೇಸ್ಗಳಲ್ಲಿ, ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದರೆ, ಒಬ್ಬರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಬಾರಿ ಕೊರೊನಾ ಪತ್ತೆಯಾಗಿದ್ದು, ನೈಜೀರಿಯಾದಿಂದ ಬಂದ ಆಫ್ರಿಕಾ ಮೂಲದ 22ವರ್ಷದ ಯುವತಿಯಲ್ಲಿ ಎಂದು ವರದಿಯಾಗಿದೆ.
75ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿರುವ ಮಂಕಿಪಾಕ್ಸ್ ಭಾರತದಲ್ಲೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಕೇಂದ್ರ ಸರ್ಕಾರ ಹೇಳಿದೆ. ಮಂಕಿಪಾಕ್ಸ್ ಸೋಂಕಿತರೂ ಕೂಡ ಕಡ್ಡಾಯವಾಗಿ ಐಸೋಲೇಟ್ ಆಗಬೇಕು. ತಮ್ಮಿಂದ ಇನ್ನೊಬ್ಬರಿಗೆ ಸೋಂಕು ಹರಡಲು ಬಿಡಬಾರದು ಎಂದು ತಿಳಿಸಿದೆ.
ದೆಹಲಿ ಬಿಟ್ಟರೆ ಕೇರಳದಲ್ಲಿ ಐವರು ಮಂಕಿಪಾಕ್ಸ್ ಸೋಂಕಿತರು ಇದ್ದಾರೆ. ಅಂದಹಾಗೇ, ಭಾರತದಲ್ಲಿ ಮೊಟ್ಟಮೊದಲು ಮಂಕಿಪಾಕ್ಸ್ ಪತ್ತೆಯಾಗಿದ್ದೇ ಕೇರಳದಲ್ಲಿ. ಇಲ್ಲಿ ಜುಲೈ 30ರಂದು ವ್ಯಕ್ತಿಯೊಬ್ಬ ಇದೇ ಸೋಂಕಿನಿಂದ ಸಾವನ್ನಪ್ಪಿದ್ದಾನೆ. ಉಳಿದವರಿಗೂ ಚಿಕಿತ್ಸೆ ಮುಂದುವರಿದಿದೆ. ಮಂಕಿಪಾಕ್ಸ್ ಒಮ್ಮೆಲೇ ಮಾರಣಾಂತಿಕವಲ್ಲ. ಆದರೆ ಮೂತ್ರಪಿಂಡ ಸಮಸ್ಯೆ ಸೇರಿ ಇನ್ಯಾವುದೇ ರೀತಿಯ ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ರೋಗ ನಿರೋಧಕ ಶಕ್ತಿ ತೀರ ಕಡಿಮೆ ಇದ್ದವರಿಗೆ ಇದು ಪ್ರಾಣಾಪಾಯ ತಂದೊಡ್ಡಲಿದೆ ಎಂದು ಹೇಳಲಾಗಿದೆ. ಈ ರೋಗವನ್ನು ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ಗಂಭೀರವಾಗಿ ಪರಿಗಣಿಸಿದ್ದು, ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿದೆ.
ಮಂಕಿಪಾಕ್ಸ್ ಲಕ್ಷಣಗಳೇನು?
1. ಜ್ವರ, ಆಯಾಸ, ತಲೆ ನೋವು, ಮಾಂಸ ಖಂಡಗಳಲ್ಲಿ ನೋವು, ಚಳಿ, ಬೆನ್ನು ನೋವು, ಗಂಟಲು ನೋವು, ಒಣ ಕೆಮ್ಮು, ಉಸಿರಾಟದ ತೊಂದರೆ.
2.ಮೈಮೇಲೆ ಸಣ್ಣ ಗುಳ್ಳೆಗಳು ಏಳುತ್ತವೆ. ಬಳಿಕ ಅದು ದೊಡ್ಡದಾಗಿ ಕೀವು ತುಂಬುತ್ತದೆ.
3.ಬಾಯಿಯ ಒಳಗೆ, ಕಣ್ಣಿನ ಒಳಭಾಗ, ಗುದದ್ವಾರಗಳಲ್ಲಿ ಈ ಗುಳ್ಳೆ, ದದ್ದು ಉಂಟಾಗುತ್ತದೆ.
ಹೇಗೆ ಹರಡುತ್ತದೆ?
ಮಂಕಿಪಾಕ್ಸ್ ರೋಗ ಒಬ್ಬರಿಂದ ಒಬ್ಬರಿಗೆ ಪ್ರಸರಣಗೊಳ್ಳುತ್ತದೆ. ಮಂಕಿಪಾಕ್ಸ್ ಸೋಂಕಿತ ಮನುಷ್ಯ ಅಥವಾ ಪ್ರಾಣಿಯ ಗಾಯದಿಂದ ಒಸರುವ ದ್ರವ ತಗುಲಿದರೆ, ಉಸಿರಾಟದ ಹನಿಗಳು, ಎಂಜಲು ಅಥವಾ ಸೋಂಕಿತ ಮಲಗಿದ್ದ ಜಾಗದಲ್ಲೇ ಇನ್ನೊಬ್ಬರು ಮಲಗಿದಾಗ ರೋಗ ಹರಡುತ್ತದೆ. ಸದ್ಯ ಭಾರತದಲ್ಲಿ ಕಾಣಿಸಿಕೊಂಡ ಮೂರೂ ಪ್ರಕರಣಗಳು ಕೇರಳದಲ್ಲೇ ದಾಖಲಾಗಿವೆ ಮತ್ತು ಈ ಮೂವರೂ ಹೊರದೇಶದಿಂದಲೇ ಬಂದವರಾಗಿದ್ದಾರೆ.
ಇದನ್ನೂ ಓದಿ: ಮಂಕಿಪಾಕ್ಸ್ ಭಯ; ಲೈಂಗಿಕ ಸಂಗಾತಿಗಳ ಸಂಖ್ಯೆ ಕಡಿಮೆ ಮಾಡಿಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ಸಲಹೆ