Site icon Vistara News

Afzal Ansari: ಸಂಸದ ಅಫ್ಜಲ್​ ಅನ್ಸಾರಿಗೆ 4 ವರ್ಷ ಜೈಲು ಶಿಕ್ಷೆ; ಲೋಕಸಭೆಯಿಂದ ಅನರ್ಹವಾಗೋದು ಪಕ್ಕಾ!

Afzal Ansari

#image_title

ಲಖನೌ: ಉತ್ತರ ಪ್ರದೇಶದ ಘಾಜಿಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಬಹುಜನ ಸಮಾಜವಾದಿ ಪಕ್ಷದ ಸಂಸದ ಅಫ್ಜಲ್​ ಅನ್ಸಾರಿಗೆ (Afzal Ansari) ಗೂಂಡಾ ಕಾಯ್ದೆಯಡಿ 4ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿ ಘಾಜಿಪುರದ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ. 1996ರಲ್ಲಿ ನಡೆದಿದ್ದ ವಿಶ್ವ ಹಿಂದು ಪರಿಷದ್​ ಪದಾಧಿಕಾರಿ ನಂದಕಿಶೋರ್​ ರೌಂಗ್ಟಾ ಅಪಹರಣ ಮತ್ತು ಕೊಲೆ ಪ್ರಕರಣ ಮತ್ತು 2005ರ ಬಿಜೆಪಿ ಶಾಸಕ ಕೃಷ್ಣಾನಂದ ರೈ ಅವರ ಅಪಹರಣ ಮತ್ತು ಹತ್ಯೆ ಕೇಸ್​​ನಲ್ಲಿ ಅಫ್ಜಲ್ ಅನ್ಸಾರಿ ಕೂಡ ಭಾಗಿಯಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕೋರ್ಟ್​ ಈ ಶಿಕ್ಷೆ ವಿಧಿಸಿದೆ.

ಪ್ರಜಾಪ್ರತಿನಿಧಿ ಕಾಯ್ದೆಯನ್ವಯ, ಯಾವುದೇ ಸಂಸದ, ಯಾವುದೇ ಆರೋಪದಡಿ 2ವರ್ಷಕ್ಕಿಂತಲೂ ಹೆಚ್ಚು ಅವಧಿಯ ಜೈಲು ಶಿಕ್ಷೆಗೆ ಗುರಿಯಾದರೆ, ಆತ ತನ್ನ ಲೋಕಸಭೆ ಸದಸ್ಯನ ಸ್ಥಾನವನ್ನು ಕಳೆದುಕೊಳ್ಳುತ್ತಾರೆ. ಇದೀಗ ಅಫ್ಜಲ್ ಅನ್ಸಾರಿಗೆ ನಾಲ್ಕು ವರ್ಷಗಳ ಶಿಕ್ಷೆ ಆಗಿರುವುದರಿಂದ ಆತನಿಗೂ ಸಹಜವಾಗಿಯೇ ಸಂಸದನ ಸ್ಥಾನ ಹೋಗಲಿದೆ.

ಕೃಷ್ಣಾನಂದ ರೈ ಅವರು 2002ರಿಂದ 2005ರವರೆಗೆ ಉತ್ತರ ಪ್ರದೇಶದ ಮವೂ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. 2005ರಲ್ಲಿ ಇವರ ಅಪಹರಣವಾಗಿ, ಹತ್ಯೆಯಾಗಿತ್ತು. ಗಾಝಿಯಾಬಾದ್​ನಲ್ಲಿರುವ ತಮ್ಮ ಹುಟ್ಟೂರಾದ ಗೊಂಡೌರ್​ ಹಳ್ಳಿಗೆ ತೆರಳುತ್ತಿದ್ದಾಗ ಅವರನ್ನು ದುಷ್ಕರ್ಮಿಗಳು ಅಪಹರಣ ಮಾಡಿ, ಹತ್ಯೆಗೈದಿದ್ದರು. ಈ ಹತ್ಯೆಯನ್ನು ಅನ್ಸಾರಿ ಸಹೋದರರೇ ಮಾಡಿಸಿದ್ದಕ್ಕೆ ಪುರಾವೆ ಸಿಕ್ಕಿತ್ತು. ನಂದಕಿಶೋರ್​ ಕೊಲೆಯಲ್ಲೂ ಇವರ ಕೈವಾಡ ಇದ್ದಿದ್ದು ಸಾಬೀತಾಗಿತ್ತು.

ಅನ್ಸಾರಿ ಸಹೋದರರಿಗೆ ಜೈಲು ಶಿಕ್ಷೆಯಾಗಿದ್ದಕ್ಕೆ, ಮೃತ ಬಿಜೆಪಿ ನಾಯಕ ಕೃಷ್ಣಾನಂದ ರೈ ಅವರ ಮಗ ಪಿಯುಶ್​ ಯೋಗಿ ಆದಿತ್ಯನಾಥ್​ರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಸರ್ಕಾರ ಮಾಫಿಯಾ ಸಂಸ್ಕೃತಿಗೆ ಕಟು ವಿರೋಧಿಯಾಗಿದೆ. ಮಾಡಿದ ದುಷ್ಕೃತ್ಯಕ್ಕೆ ತಕ್ಕದಾದ ಶಿಕ್ಷೆ ಅವರಿಗೆ ಸಿಕ್ಕಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Mukhtar Ansari: ಬಿಜೆಪಿ ಶಾಸಕನ ಹತ್ಯೆ ಕೇಸ್​; ಗ್ಯಾಂಗ್​ಸ್ಟರ್ ಮುಖ್ತಾರ್ ಅನ್ಸಾರಿಗೆ 10 ವರ್ಷ ಜೈಲು

Exit mobile version