ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ, ಬಾಲಿವುಡ್‌ನ ಹಿರಿಯ ನಟರಾದ ಅಮಿತಾಬ್ ಬಚ್ಚನ್, ಧರ್ಮೆಂದ್ರ ಅವರ ಮನೆಗಳನ್ನು ಸ್ಪೋಟಿಸುವುದಾಗಿ ಬೆದರಿಕೆ ಕರೆಯೊಂದು (Threat On Phone Call) ಬಂದಿದೆ. ಮಂಗಳವಾರ (ಫೆ.28) ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಂ (ಇಆರ್‌ಎಸ್‌ಎಸ್)ಗೆ (ERSS) ಫೋನ್ ಕರೆ ಬಂದಿದೆ. ಅದರ ನಂತರ, ನಾಗ್ಪುರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಇದೀಗ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತನಿಖೆ ಆರಂಭಿಸಿದ ಮುಂಬೈ ಪೊಲೀಸರು
ನಾಗ್ಪುರ ಪೊಲೀಸರಿಗೆ ಈ ಬೆದರಿಕೆ ಕರೆ ಬಂದಿದೆ. ತಕ್ಷಣ ನಾಗ್ಪುರ ಪೊಲೀಸರು ಮುಂಬೈ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಮುಂಬೈನಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಬಾಂಬ್ ಡಿಟೆಕ್ಷನ್ ಮತ್ತು ಡಿಸ್ಪೋಸಲ್ ಸ್ಕ್ವಾಡ್ (ಬಿಡಿಡಿಎಸ್) ತಂಡಗಳು ಈಗಾಗಲೇ ಮೂವರ ನಿವಾಸದ ಸುತ್ತಮುತ್ತ ಪರಿಶೀಲಿಸುತ್ತಿವೆ. ಭಯೋತ್ಪಾದಕ ದಾಳಿ ನಡೆಸಲು 25 ಶಸ್ತ್ರಸಜ್ಜಿತ ವ್ಯಕ್ತಿಗಳು ಮುಂಬೈನ ದಾದರ್ ತಲುಪಿದ್ದಾರೆ ಎಂದು ಕರೆ ಮಾಡಿದವರು ಹೇಳಿದ್ದಾರೆ. ಅಧಿಕಾರಿಗಳು ಕರೆ ಮಾಡಿದವರನ್ನು ಗುರುತಿಸಲು ಮತ್ತು ಪತ್ತೆ ಹಚ್ಚುವ ಕಾರ್ಯವನ್ನು ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: Maha politics: ಉದ್ಧವ್ ಠಾಕ್ರೆ ಪತ್ನಿ ರಶ್ಮಿ ಠಾಕ್ರೆ ರಂಗಪ್ರವೇಶ, ರೆಬೆಲ್ ಶಾಸಕರ ಪತ್ನಿಯರಿಗೆ ಫೋನ್ ಕರೆ!
ಮುಕೇಶ್ ಅಂಬಾನಿ ಅವರ ಕುಟುಂಬಕ್ಕೆ Z+ ಭದ್ರತೆ
ಉದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಭಾರತ ಮತ್ತು ವಿದೇಶಗಳಲ್ಲಿ ಉನ್ನತ ಮಟ್ಟದ Z+ ಭದ್ರತೆಯನ್ನು (Z+ security) ಒದಗಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಭಾರತ ಅಥವಾ ವಿದೇಶದಲ್ಲಿ ಅತ್ಯುನ್ನತ ಮಟ್ಟದ Z+ ಭದ್ರತೆಯನ್ನು ಒದಗಿಸುವ ಸಂಪೂರ್ಣ ವೆಚ್ಚವನ್ನು ಅವರು ಭರಿಸುತ್ತಾರೆ ಎಂದು ನ್ಯಾಯಾಲಯ ಹೇಳಿದೆ. 2021 ರಲ್ಲಿ, ಮುಂಬೈ ಪೊಲೀಸರ ಅಪರಾಧ ವಿಭಾಗದ ಘಟಕವು ಮೂರು ರೈಲು ನಿಲ್ದಾಣಗಳು ಮತ್ತು ಅಮಿತಾಭ್ ಬಚ್ಚನ್ ಅವರ ಮನೆಯಲ್ಲಿ ಬಾಂಬ್‌ಗಳ ವದಂತಿಗಳನ್ನು ಹರಡಿದ್ದಕ್ಕಾಗಿ ಇಬ್ಬರನ್ನು ಬಂಧಿಸಿತ್ತು.