Site icon Vistara News

Mukul Rohatgi | ಮತ್ತೆ ಅಟಾರ್ನಿ ಜನರಲ್‌ ಆಗಲು ಮುಕುಲ್‌ ರೋಹಟಗಿ ನಕಾರ, ಕಾರಣ ಏನು?

Rohatgi

ನವದೆಹಲಿ: ದೇಶದ ಅಟಾರ್ನಿ ಜನರಲ್‌ ಆಗಿ ಅಧಿಕಾರ ವಹಿಸಿಕೊಳ್ಳಲು ಹಿರಿಯ ವಕೀಲ ಮುಕುಲ್‌ ರೋಹಟಗಿ (Mukul Rohatgi) ನಿರಾಕರಿಸಿದ್ದಾರೆ. ಈಗಿನ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರ ಅವಧಿಯು ಸೆಪ್ಟೆಂಬರ್‌ ೩೦ರಂದು ಮುಗಿಯುವ ಹಿನ್ನೆಲೆಯಲ್ಲಿ ರೋಹಟಗಿ ಅವರಿಗೆ ಮತ್ತೆ ಅಟಾರ್ನಿ ಜನರಲ್‌ ಆಗುವಂತೆ ಕೇಂದ್ರ ಸರ್ಕಾರ ಆಫರ್‌ ನೀಡಿತ್ತು. ಆದರೆ, ಇದನ್ನು ರೋಹಟಗಿ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಮುಕುಲ್‌ ರೋಹಟಗಿ ಅವರು ಇದಕ್ಕೂ ಮೊದಲು ಭಾರತದ ಅಟಾರ್ನಿ ಜನರಲ್‌ ಆಗಿದ್ದರು. ಆದರೆ, ಅವರು ೨೦೧೭ರಲ್ಲಿ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಕೆ.ಕೆ.ವೇಣುಗೋಪಾಲ್‌ ಅವರು ಅಧಿಕಾರ ವಹಿಸಿಕೊಂಡಿದ್ದರು. ಹಾಗೆ ನೋಡಿದರೆ, ೨೦೨೦ರಲ್ಲಿಯೇ ವೇಣುಗೋಪಾಲ್‌ ಅವರ ಅವಧಿ ಮುಗಿದಿತ್ತು. ವಯಸ್ಸಿನ (ಈಗ ೯೧ ವರ್ಷ) ಕಾರಣದಿಂದಾಗಿ ಕೆಲಸದಿಂದ ಬಿಡುಗಡೆ ಮಾಡಬೇಕು ಎಂದು ಕೋರಿದ್ದರು. ಆದರೂ, ಸರ್ಕಾರವು ಎರಡು ವರ್ಷ ಅವರ ಅವಧಿ ವಿಸ್ತರಿಸಿತ್ತು. ಕಳೆದ ಜೂನ್‌ ೨೯ರಂದೂ ಮೂರು ತಿಂಗಳು ಅಧಿಕಾರ ವಿಸ್ತರಿಸಿತ್ತು.

ಆದರೆ, ಇದುವರೆಗೆ ಮುಕುಲ್‌ ರೋಹಟಗಿ ಅವರು ಯಾಕೆ ಮತ್ತೆ ಅಟಾರ್ನಿ ಜನರಲ್‌ ಆಗಲು ಒಪ್ಪಿಲ್ಲ ಎಂಬುದಕ್ಕೆ ನಿಖರ ಮಾಹಿತಿ ತಿಳಿದುಬಂದಿಲ್ಲ. ರೋಹಟಗಿ ಅವರು ಸುಪ್ರೀಂ ಕೋರ್ಟ್‌ ಹಾಗೂ ದೇಶದ ಹಲವು ಹೈಕೋರ್ಟ್‌ಗಳಲ್ಲಿ ಪ್ರಮುಖ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ. ಗೋಧ್ರಾ ಹತ್ಯಾಕಾಂಡ ಪ್ರಮುಖ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ.

ಇದನ್ನೂ ಓದಿ | Hijab Row | ಮೋದಿ ಪೇಟ, ಜೀನ್ಸ್‌, ನೆಹರು, ಇವು ಹಿಜಾಬ್‌ ವಿಚಾರಣೆ ವೇಳೆ ಪ್ರಸ್ತಾಪವಾದ ವಿಷಯಗಳು!

Exit mobile version