Site icon Vistara News

Javed Akhtar | ತಾಲಿಬಾನ್‌ ಜತೆ ಆರೆಸ್ಸೆಸ್‌ ಹೋಲಿಕೆ, ಜಾವೇದ್‌ ಅಖ್ತರ್‌ಗೆ ಕೋರ್ಟ್‌ ಸಮನ್ಸ್

Summons To Javed Akhtar

ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ತಾಲಿಬಾನ್‌ ಜತೆ ಹೋಲಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ನ ಖ್ಯಾತ ಗೀತಸಾಹಿತಿ (Javed Akhtar) ಜಾವೇದ್‌ ಅಖ್ತರ್‌ ಅವರಿಗೆ ಮುಂಬೈ ಕೋರ್ಟ್‌ ಸಮನ್ಸ್‌ ಜಾರಿಮಾಡಿದೆ.

ಕಳೆದ ವರ್ಷ ಸಂತೋಷ್‌ ದುಬೆ ಎಂಬ ವಕೀಲರು ಜಾವೇದ್‌ ಅಖ್ತರ್‌ ವಿರುದ್ಧ ಭಾರತೀಯ ದಂಡ ಸಂಹಿತೆ (IPC)ಯ ಸೆಕ್ಷನ್‌ 499 (ಮಾನಹಾನಿ), 500 (ಮಾನಹಾನಿಗೆ ಶಿಕ್ಷೆ) ಅಡಿಯಲ್ಲಿ ಮೊಕದ್ದಮೆ ಹೂಡಿದ್ದರು. ಅದರಂತೆ, ನ್ಯಾಯಾಲಯವು ಜಾವೇದ್‌ ಅಖ್ತರ್‌ ಅವರಿಗೆ ಸಮನ್ಸ್‌ ನೀಡಿದೆ. ಫೆಬ್ರವರಿ 6ರಂದು ವಿಚಾರಣೆ ನಡೆಯಲಿದ್ದು, ನ್ಯಾಯಾಲಯಕ್ಕೆ ಅಖ್ತರ್‌ ಹಾಜರಾಗಬೇಕು ಎಂದು ಸೂಚಿಸಿದೆ.

ಅಖ್ತರ್‌ ಹೇಳಿದ್ದೇನು?
2021ರ ಆಗಸ್ಟ್‌ನಲ್ಲಿ ತಾಲಿಬಾನಿಗಳು ಅಫಘಾನಿಸ್ತಾನವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡ ಕುರಿತು ಟಿವಿ ಸಂದರ್ಶನದಲ್ಲಿ ಜಾವೇದ್‌ ಅಖ್ತರ್‌ ಪ್ರಸ್ತಾಪಿಸಿದ್ದರು. “ತಾಲಿಬಾನ್‌ ಹಾಗೂ ಆರ್‌ಎಸ್‌ಎಸ್‌ ಮಧ್ಯೆ ಸಾಮ್ಯತೆ ಇದೆ. ಎರಡೂ ಮೂಲಭೂತವಾದವನ್ನು ಪ್ರತಿಪಾದಿಸುತ್ತವೆ” ಎಂದು ಹೇಳಿದ್ದರು.

ಇದನ್ನೂ ಓದಿ | ಬಿಜೆಪಿ-ಆರ್​ಎಸ್​ಎಸ್​ ಯಾಕೆ ಜೈ ಸಿಯಾ ರಾಮ್​ ಘೋಷಣೆ ಕೂಗೋದಿಲ್ಲ; ವ್ಯಂಗ್ಯ ಮಾಡಿ ಕಾರಣ ತಿಳಿಸಿದ ರಾಹುಲ್ ಗಾಂಧಿ

Exit mobile version