ನಾಗಪುರ್, ಮಹಾರಾಷ್ಟ್ರ: ಹೊಸ ಸ್ಮಾರ್ಟ್‌ಫೋನ್ (Smartphone) ಖರೀದಿಗೆ ಹಣ ನೀಡಲು ನಿರಾಕರಿಸಿದ ತನ್ನ ತಾಯಿಯನ್ನು (Mother) 28 ವರ್ಷದ ಯುವಕನೊಬ್ಬ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ (Maharashtra) ನಾಗಪುರದಲ್ಲಿ (Nagpur) ನಡೆದಿದೆ. ಮೃತ ಮಹಿಳೆಯನ್ನು ಕಮಲಾಬಾಯಿ ಬದ್ವೈಕ್ ಎಂದು ಗುರುತಿಸಲಾಗಿದೆ. ಅವರಿಗೆ 47 ವರ್ಷ ವಯಸ್ಸಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಕೊಲೆ ಮಾಡಿರುವ ಯುವಕನನ್ನು ರಾಮನಾಥ ಎಂದು ಗುರುತಿಸಲಾಗಿದೆ(Murder Case).
ಆರಂಭದಲ್ಲಿ ಕೊಲೆಯಾದ ಬಗ್ಗೆ ಸುಳಿವು ಇರಲಿಲ್ಲ. ಬುಧವಾರ ಮೃತಪಟ್ಟ ಕಮಲಾಬಾಯಿ ಬದ್ವೈಕ್ (47) ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ವೇಳೆ ಕತ್ತು ಹಿಸುಕಿ ಕೊಂದಿರುವ ಸುಳಿವು ದೊರೆಯುತ್ತಿದ್ದಂತೆ, ಮುಂದಿನ ತನಿಖೆಯನ್ನು ಕೈಗೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ತಾಯಿಯನ್ನು ತನ್ನ ಸಹೋದರ ರಾಮನಾಥ್ ಆಸ್ಪತ್ರೆಗೆ ಕರೆದೊಯ್ದರು ಎಂದು ಕರೆ ಬಂತು ಎಂದು ಕೊಲೆಯಾದ ಮಹಿಳೆಯ ಮತ್ತೊಬ್ಬ ಮಗ ದೀಪಕ್ ಹೇಳಿದ್ದಾರೆ. ಆಸ್ಪತ್ರೆಗೆ ಹೋದ ಸ್ವಲ್ಪ ಸಮಯದ ನಂತರ ಮಹಿಳೆ ಮೃತಪಟ್ಟಿದ್ದಾರೆ. ಅವರು ಶವವನ್ನು ನೋಡಿದಾಗ, ದೀಪಕ್‌ನಿಗೆ ಅನುಮಾನ ಬರಲು ಶುರುವಾಗಿದೆ. ಏನೋ ತಪ್ಪಾಗಿದೆ ಅನ್ನಿಸಲಾರಂಭಿಸಿದೆ. ತಾಯಿಯ ಚಿನ್ನಾಭರಣಗಳು ಸಹ ಕಾಣೆಯಾಗಿದ್ದವು ಎಂಬ ಮಾಹಿತಿಯನ್ನು ದೀಪಕ್ ನೀಡಿದ್ದ ಎಂದ ಪೊಲೀಸರು ತಿಳಿಸಿದ್ದಾರೆ.
ದೀಪಕ್ ಅನುಮಾನ ವ್ಯಕ್ತಪಡಿಸಿದ ಬೆನ್ನಲ್ಲೇ ಪೊಲೀಸರು ರಾಮನಾಥನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಆಗ, ಆರೋಪಿಯ ತನ್ನ ತಾಯಿಯನ್ನು ಕೊಲೆ ಮಾಡಿದ ಮಾಹಿತಿಯನ್ನು ನೀಡಿದ್ದಾನೆ. ಸ್ಮಾರ್ಟ್‌ಫೋನ್ ಖರೀದಿಗೆ ಹಣ ನೀಡಲು ತಾಯಿ ನಿರಾಕರಿಸಿದಳು. ಸ್ಕಾರ್ಪ್‌ನಿಂದ ಕತ್ತು ಬಿಗಿದು ಕೊಲೆ ಮಾಡಿದೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಆರೋಪಿ ಈಗ ಜೈಲಿನಲ್ಲಿದ್ದಾನೆ.
ಈ ಸುದ್ದಿಯನ್ನೂ ಓದಿ: Murder Case : ತಲೆ ಮೇಲೆ ಕಲ್ಲು ಎತ್ತಿಹಾಕಿ 8ನೇ ಕ್ಲಾಸ್ ಹುಡುಗನ ಬರ್ಬರ ಹತ್ಯೆ