ಸಿಲಿಗುರಿ: ಕೇವಲ ಹತ್ತು ರೂಪಾಯಿಗಾಗಿ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿ ಜಿಲ್ಲೆಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿ ರಾಮಪ್ರಸಾದ್ ಸಾಹಾ ಅವರ ಶವ ಬೈಕುಂಠಪುರ ಅರಣ್ಯದಲ್ಲಿ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ(Murder Crime). ಕೊಲೆಯಾದ ವ್ಯಕ್ತಿ ಹಾಗೂ ಆರೋಪಿಗಳಿಬ್ಬರೂ ಮಾದಕ ವ್ಯಸನಿಗಳಾಗಿದ್ದಾರೆ.
ರಾಮಪ್ರಸಾದ್ ಮಾದಕವ್ಯಸನಿಯಾಗಿದ್ದು, ತನ್ನ ಸ್ನೇಹಿತರೊಂದಿಗೆ ನಿತ್ಯ ಕಾಡಿಗೆ ಹೋಗುತ್ತಿದ್ದ. ಸೋಮವಾರ ಈತ ತನ್ನ ಸ್ನೇಹಿತ ಸುಬ್ರತ್ ದಾಸ್ ಮ್ತತು ಅಜಯ್ ರಾಯ್ ಎಂಬಾತರೊಂದಿಗೆ ಅರಣ್ಯಕ್ಕೆ ಹೋಗಿದ್ದಾನೆ. ಇವರೆಲ್ಲರೂ ಮಾದಕವ್ಯಸನಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾದಕ ವ್ಯಸನ ಮಾಡಿದ ಬಳಿಕ, ರಾಮ ಪ್ರಸಾದ್ ಸಾಹಾ ಬಳಿ ಹಣ ಇಲ್ಲದಿರುವುದು ಗೊತ್ತಾಗಿದೆ ಮತ್ತು ಇನ್ನಷ್ಟು ಡ್ರಗ್ಸ್ ಬೇಕೆನಿಸಿದೆ. ಆಗ ಆತ, ತನ್ನ ಸ್ನೇಹಿತನಾದ ಸುಬ್ರತ್‌ಗೆ ಹತ್ತು ರೂ. ಕೊಡುವಂತೆ ಕೇಳಿದ್ದಾನೆ. ಇದಕ್ಕೆ ಆತ ನಿರಾಕರಿಸಿದ್ದಾನೆ.
ಬಳಿಕ ಇವರ ಮಧ್ಯೆ ಜಗಳ ಶುರುವಾಗಿದೆ. ಆಗ ಸುಬ್ರತ್ ತನ್ನ ಸ್ನೇಹಿತ ರಾಮಪ್ರಸಾದ್ ಸಾಹಾನ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಂದು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಬ್ರತ್ ಮತ್ತುಅಜಯ್ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇಡೀ ಘಟನೆ ಗೊತ್ತಾಗಿದೆ.
ಇದನ್ನೂ ಓದಿ | Murder mystery | ಸೊಸೆಯ ಮೇಲೇ ಕಣ್ಣು ಹಾಕಿದ್ದ ಧೂರ್ತ ಮಾವನ ಸುಪಾರಿ ಮರ್ಡರ್: ಕೊಲ್ಲಿಸಿದ್ದು ಯಾರು?