ವಿವಾಹಿತ ಹಿಂದು ಮಹಿಳೆಯೊಬ್ಬರನ್ನು ಮತಾಂತರ ಮಾಡಲು ಯತ್ನಿಸಿದ (Convert to Islam) ಮುಸ್ಲಿಮ್ ವ್ಯಕ್ತಿ (Muslim Man) ವಿರುದ್ಧ ಕೇಸ್ ದಾಖಲಾಗಿದೆ. ಈತ ಒಂದು ಗೇಮಿಂಗ್ ಆ್ಯಪ್ (Gaming App) ಮೂಲಕ ಮಹಿಳೆಯನ್ನು ಮತಾಂತರಕ್ಕೆ ಯತ್ನಿಸಿದ್ದ. ರಾಜಸ್ಥಾನದ (Rajasthan News) ಸಿಕಾರ್ನ ವಿವಾಹಿತ ಹಿಂದು ಮಹಿಳೆ ಮೊಬೈಲ್ನಲ್ಲಿ ‘ಫ್ರೀ ಫೈರ್’ ಎಂಬ ಗೇಮಿಂಗ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು, ಆಗಾಗ ಆಟವಾಡುತ್ತಿದ್ದರು. ಈ ಗೇಮಿಂಗ್ ಆ್ಯಪ್ ಮೂಲಕ ಆಕೆ ಲವ್ ಲೈಫ್ ಎಂಬ ಗ್ರೂಪ್ಗೆ ಸೇರಿದ್ದರು. ಅಲ್ಲಿಯೇ ತಯ್ಯಬ್ ಖಾನ್ ಪರಿಚಯವಾಗಿತ್ತು. ಇವರಿಬ್ಬರೂ ಒಂದೂವರೆ ವರ್ಷಗಳಿಂದಲೂ ಗೇಮಿಂಗ್ ಆ್ಯಪ್ನಲ್ಲಿ ಮತ್ತು ವಾಟ್ಸ್ ಆ್ಯಪ್ ಚಾಟ್ ಮೂಲಕ ಪರಿಚಿತರಾಗಿದ್ದರು. ಈಗ ತಯ್ಯಬ್ ವಿರುದ್ಧ ಮಹಿಳೆಯ ಕುಟುಂಬ ಪೊಲೀಸರಿಗೆ ದೂರು ನೀಡಿದೆ.
ತಯ್ಯಬ್ ಮತ್ತು ಮಹಿಳೆ ವಾಟ್ಸ್ಆ್ಯಪ್ನಲ್ಲಿ ಚಾಟ್ ಮಾಡುತ್ತಿದ್ದರು. ಆತ ತನ್ನ ಬಗ್ಗೆ ಮೆಸೇಜ್ನಲ್ಲಿಯೇ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದ. ‘ನಾನು ಮೂಲತಃ ಉತ್ತರಪ್ರದೇಶದ ಅಲಿಗಢ್ನವನು. ಅಲ್ಲಿ ನನ್ನದೇ ಆದ ಗಾರ್ಮೆಂಟ್ಸ್ ಇದೆ’ ಎಂದು ಹೇಳಿಕೊಂಡಿದ್ದ. ಆದರೆ ಕ್ರಮೇಣ ಅವನು ಇಸ್ಲಾಂ ಸಂಪ್ರದಾಯದ ಬಗ್ಗೆ ಮಹಿಳೆಗೆ ಬೋಧಿಸಿದ್ದ. ನಮಾಜ್ ಮಾಡುವುದು ಹೇಗೆಂದು ಮೆಸೇಜ್ನಲ್ಲಿಯೇ ವಿವರಿಸಿದ್ದ. ನಮಾಜ್ ಮಾಡುವುದು ಯಾಕೆಂದೂ ತಿಳಿಸಿದ್ದ. ಇದು ಮಹಿಳೆಯ ಕುಟುಂಬದವರಿಗೆ ಗೊತ್ತಾಯಿತು. ಮೊದಲು ಮನೆಯವರೇ ತಯ್ಯಬ್ಗೆ ಕರೆ ಮಾಡಿದರು. ಆದರೆ ಆತ ಫೋನ್ ಸ್ವೀಕಾರ ಮಾಡಲಿಲ್ಲ. ತುಂಬ ಸಲ ಕರೆ ಮಾಡಿದಾಗ ಅವನ ಸ್ನೇಹಿತನೊಬ್ಬ ರಿಸೀವ್ ಮಾಡಿ, ತಯ್ಯಬ್ ಇಂಥದ್ದನ್ನೆಲ್ಲ ಮಾಡುವುದಿಲ್ಲ. ಅವನ ಮೊಬೈಲ್ ದುರ್ಬಳಕೆ ಆಗಿರಬಹುದು’ ಎಂದು ಉತ್ತರಿಸಿದ್ದಾನೆ.
ಈ ಯುವತಿಯ ಪತಿ ಬೆಂಗಳೂರಲ್ಲಿ ಕೆಲಸ ಮಾಡುತ್ತಾರೆ. ಹಾಗಾಗಿ ಯುವತಿ ಇತ್ತೀಚೆಗೆ ಪತಿಯ ಮನೆಯಿಂದ ತವರು ಮನೆಗೆ ಹೋಗಿದ್ದರು. ಕೆಲವು ಮಾಧ್ಯಮಗಳಿಗೆ ಆಕೆ ತಯ್ಯಬ್ ಖಾನ್ ತನಗೆ ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂನಲ್ಲಿ ಮಾಡಿದ ಮೆಸೇಜ್ಗಳನ್ನು ಆಕೆ ತೋರಿಸಿದ್ದಾರೆ. ಇಸ್ಲಾಂ ಬಗ್ಗೆ ಬೋಧನೆ ಮಾಡಿದ ಆತ, ‘ನೀನು ಇಸ್ಲಾಂಗೆ ಸೇರದೆ ಇದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದೂ ಹೇಳಿದ್ದಾನೆ. ತಯ್ಯಬ್ ನನ್ನ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದ. ನಾನು ಅವನನ್ನು ಪ್ರೀತಿಸುವಂತೆ ಮಾಡಿ, ಮತಾಂತರಗೊಳಿಸಲು ತುಂಬ ಯತ್ನಿಸಿದ’ ಎಂದೂ ಮಹಿಳೆ ಹೇಳಿಕೊಂಡಿದ್ದಾರೆ.
ಪ್ರಾರಂಭದಲ್ಲಿ ಮನೆಯವರಿಗೆ ಏನೂ ಗೊತ್ತಾಗಿರಲಿಲ್ಲ. ಹರ್ಷಿತಾಗೆ ತಯ್ಯಬ್ ಹನಿಯಾ ಎಂದೂ ಹೆಸರಿಟ್ಟಿದ್ದ. ಬುರ್ಖಾಗಳೂ ಈಕೆಯ ಬಳಿ ಸೇರಿದ್ದವು. ಅವಳು ಹಣೆಗೆ ಸಿಂಧೂರ-ಬಿಂದಿ ಇಡುವುದು ಬಿಟ್ಟಿದ್ದಳು. ದೇವಸ್ಥಾನಗಳಿಗೆ ಹೋಗುತ್ತಿರಲಿಲ್ಲ. ಅಂತಿಮವಾಗಿ ಇದು ಆಕೆಯ ಸಹೋದರನ ಗಮನಕ್ಕೆ ಬಂದಿದೆ. ಬುರ್ಖಾವನ್ನು ನೋಡುತ್ತಿದ್ದಂತೆ ಆತ ಹೌಹಾರಿದ್ದಾನೆ. ಕೂಡಲೇ ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ಸದ್ಯ ಆಕೆ ತನ್ನ ತಪ್ಪನ್ನು ಅರ್ಥ ಮಾಡಿಕೊಂಡಿದ್ದಾಳೆ. ಮನೆ ಬಿಟ್ಟು ಹೋಗುವ ಮೊದಲೇ ಆಕೆಯನ್ನು ರಕ್ಷಿಸಲಾಗಿದೆ.
ಇದನ್ನೂ ಓದಿ: Pejawar Seer: ಮತಾಂತರ, ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ದುಸ್ಸಾಹಸ ಬೇಡ: ಪೇಜಾವರ ಶ್ರೀ