Site icon Vistara News

Indian Army: ಭಾರತೀಯ ಸೇನೆ ನೂತನ ಉಪಮುಖ್ಯಸ್ಥರಾಗಿ ಲೆಫ್ಟಿನೆಂಟ್​ ಜನರಲ್​ ಸುಚೇಂದ್ರ ಕುಮಾರ್​ ನೇಮಕ

MV Suchindra Kumar appointed As new Vice Chief of Indian Army

#image_title

ಭಾರತೀಯ ಸೇನೆಯಲ್ಲಿ (Indian Army) ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಮಹತ್ವದ ಬದಲಾವಣೆಮಾಡಲಾಗಿದೆ. ಸೇನೆಯ ನೂತನ ಉಪ ಮುಖ್ಯಸ್ಥರನ್ನಾಗಿ (Vice Chief of Indian Army) ಲೆಫ್ಟಿನೆಂಟ್​ ಜನರಲ್ ಎಂ.ವಿ.​ ಸುಚೇಂದ್ರ ಕುಮಾರ್ (MV Suchindra Kumar)​ ನೇಮಕಗೊಂಡಿದ್ದಾರೆ. ಇಷ್ಟುದಿನ ಭಾರತೀಯ ಸೇನೆಯ ಉಪಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್​ ಬಿಎಸ್​. ರಾಜು ಅವರು ಸೇನೆಯ ನೈಋತ್ಯ ವಲಯದ ಕಮಾಂಡರ್​ ಆಗಿ ನಿಯೋಜನೆಗೊಂಡಿದ್ದಾರೆ. ಸೇನಾ ನೈಋತ್ಯವಲಯದ ಕಮಾಂಡರ್​ ಆಗಿದ್ದ ಲೆಫ್ಟಿನೆಂಟ್​ ಜನರಲ್​ ಎ.ಎಸ್​.ಭಿಂದರ್​ ಅವರು ಫೆ.28ರಂದು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಉತ್ತರಾಧಿಕಾರಿಯಾಗಿ ಬಿ.ಎಸ್​.ರಾಜು ನೇಮಕಗೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಗ್ರಾಮದ ಯೋಧನಾಗಿರುವ ಬಿ.ಎಸ್​.ರಾಜು 2022ರ ಮೇ ತಿಂಗಳಲ್ಲಿ ಸೇನಾ ಉಪಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಈ ಹಿಂದಿನ ಸೇನಾ ಮುಖ್ಯಸ್ಥರಾದ ಎಂ.ಎಂ.ನರವಣೆ ನಿವೃತ್ತಿಯ ನಂತರ ಉಪಮುಖ್ಯಸ್ಥರಾದ ಮನೋಜ್​ ಪಾಂಡೆ ಆ ಸ್ಥಾನಕ್ಕೆ ಏರಿದ್ದರು. ಆಗ ಖಾಲಿಯಾದ ಉಪಮುಖ್ಯಸ್ಥನ ಸ್ಥಾನಕ್ಕೆ ಬಿ.ಎಸ್​.ರಾಜು ನೇಮಕವಾಗಿತ್ತು. ಸುಮಾರು 9 ತಿಂಗಳ ಬಳಿಕ ಬಿ.ಎಸ್​. ರಾಜು ಅವರ ಹುದ್ದೆ ಬದಲಾವಣೆ ಆಗಿದೆ. ಸೇನಾ ಉಪಮುಖ್ಯಸ್ಥನ ಸ್ಥಾನಕ್ಕೆ ಲೆಫ್ಟಿನೆಂಟ್​ ಜನರಲ್​ ಸುಚೇಂದ್ರ ಕುಮಾರ್​ ನೇಮಕಗೊಂಡಿದ್ದಾರೆ.

ಇದನ್ನೂ ಓದಿ: ಟರ್ಕಿಗೆ ರಕ್ಷಣಾ ಕಾರ್ಯಾಚರಣೆಗೆ ತೆರಳಿದ್ದ ಭಾರತೀಯ ಸೇನೆ ಸೈನಿಕನಿಗೆ ಸಿಕ್ತು ಗುಡ್​​ನ್ಯೂಸ್​; ಫೋಟೋ ನೋಡಿ ಯೋಧ ಭಾವುಕ

ಇನ್ನು ಸುಚೇಂದ್ರ ಕುಮಾರ್​ ಅವರು 2022ರ ಜುಲೈನಿಂದ ಇಲ್ಲಿಯವರೆಗೆ ಸೇನಾ ಸಿಬ್ಬಂದಿ (ಕಾರ್ಯತಂತ್ರ) ವಿಭಾಗದ ಉಪಮುಖ್ಯಸ್ಥರಾಗಿ ಕಾರ್ಯನಿವರ್ಹಿಸುತ್ತಿದ್ದರು. ಹಾಗೇ, ಸೇನೆಯ ಹಲವು ಪ್ರಮುಖ ಯೋಜನೆಗಳಲ್ಲಿ ಭಾಗಿಯಾಗಿ, ಕಾರ್ಯನಿರ್ವಹಿಸಿದ ಅನುಭವ ಇರುವವರು. ಅತಿ ವಿಶಿಷ್ಟ ಸೇವಾ ಪದಕ, ಯುದ್ಧ ಸೇವಾ ಪದಕ ಮತ್ತು ವಿಶಿಷ್ಟ ಸೇವಾ ಪದಕ ಪುರಸ್ಕೃತರು.

Exit mobile version