ಕೊಹಿಮಾ: ನಾಗಾಲೆಂಡ್‌ನ ಅತ್ಯಂತ ಹಿರಿಯ ವ್ಯಕ್ತಿ (Nagaland’s Oldest Person) ಎನ್ನುವ ಖ್ಯಾತಿ ಪಡೆದಿದ್ದ 121 ವರ್ಷದ ಪುಪಿರೆಯ್ ಪ್ಫುಖಾ ಅವರು ನಿಧನರಾಗಿದ್ದಾರೆ. ಕೊಹಿಮಾ ಜಿಲ್ಲೆಯ ಕಿಗ್ವೆಮಾ ಗ್ರಾಮದ ತಮ್ಮ ನಿವಾಸದಲ್ಲಿ ಬುಧವಾರ ಸಂಜೆ ಕೊನೆಯುಸಿರೆಳೆದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: Viral Video : ಹಾವು ಮತ್ತು ಮುಂಗುಸಿ ನಡುವೆ ನಡೆಯಿತು ಫೈಟ್; ವೈರಲ್ ಆಯ್ತು ವಿಡಿಯೊ
ಈ ಬಗ್ಗೆ ಮಾಹಿತಿ ಕೊಟ್ಟಿರುವ ಕಿಗ್ವೆಮಾ ಗ್ರಾಮದ ಮುಖ್ಯಸ್ಥರಾದ ಬಾಲಿ ಅವರು, “ಪುಪಿರೆಯ್ ಅವರು ತಮ್ಮ 80ರ ದಶಕದಲ್ಲಿ ಕಣ್ಣಿನ ದೃಷ್ಟಿ ಕಳೆದುಕೊಂಡರು. ಆದರೂ ಅವರ ನೆನಪಿನ ಶಕ್ತಿ ಚೆನ್ನಾಗಿತ್ತು. ಅವರ ಜೀವಿತಾವಧಿಯಲ್ಲಿ ನಡೆದಿದ್ದ 2 ಮಹಾಯುದ್ಧಗಳು, ಕ್ಷಾಮಗಳನ್ನು ಮತ್ತು ಹಲವಾರು ಹಿಂದಿನ ನೆನಪುಗಳನ್ನು ಅವರು ತಮ್ಮ ಕೊನೆಯ ದಿನಗಳವರೆಗೂ ನೆನಪಿನಲ್ಲಿಟ್ಟುಕೊಂಡಿದ್ದರು” ಎಂದು ಹೇಳಿದ್ದಾರೆ.
ದೇವರ ಆಶೀರ್ವಾದ ಇದ್ದಿದ್ದರಿಂದಲೇ ಪುಪಿರೆಯ್ ಅವರು ಇಷ್ಟೊಂದು ವರ್ಷಗಳ ಕಾಲ ಆರೋಗ್ಯವಾಗಿ ಬದುಕಿದ್ದರು. ಅವರು ನಮ್ಮ ಗ್ರಾಮದ ಬುದ್ಧಿವಂತಿಕೆ ಮತ್ತು ಆಶೀರ್ವಾದದ ಶಕ್ತಿ ಕೇಂದ್ರದಂತಿದ್ದರು ಎಂದಿದ್ದಾರೆ ಬಾಲಿ. ಪುಪಿರೆಯ್ ಅವರ ಅಂತ್ಯಕ್ರಿಯೆಯನ್ನು ಗ್ರಾಮದ ಚರ್ಚ್‌ನಲ್ಲಿ ಗುರುವಾರ ಮಧ್ಯಾಹ್ನ ಮಾಡಲಾಗಿದೆ.