Site icon Vistara News

ದೆಹಲಿ ಏರ್‌ಪೋರ್ಟ್‌ನಲ್ಲಿ ರಾಷ್ಟ್ರಧ್ವಜದ ಮೇಲೆ ನಿಂತು ನಮಾಜ್‌ ಮಾಡಿದ ವ್ಯಕ್ತಿ

Namaz In Delhi Airport

ನವದೆಹಲಿ: ತ್ರಿವರ್ಣ ಧ್ವಜದ ಮೇಲೆ ನಿಂತು ನಮಾಜ್‌ (Namaz on Tricolour) ಮಾಡಿದ ಅಸ್ಸಾಂ ಮೂಲದ ವ್ಯಕ್ತಿಯೊಬ್ಬನನ್ನು ಸಿಐಎಸ್‌ಎಫ್‌ ಸಿಬ್ಬಂದಿ ಬಂಧಿಸಿದ್ದಾರೆ. ಮೊಹಮ್ಮದ್‌ ತಾರೀಕ್‌ ಅಝೀಜ್‌ ಎಂಬಾತ ದೆಹಲಿ ಏರ್‌ಪೋರ್ಟ್‌ನಲ್ಲಿ ರಾಷ್ಟ್ರಧ್ವಜವನ್ನು ನೆಲದ ಮೇಲೆ ಹಾಸಿ ಅದರ ಮೇಲೆಯೇ ನಿಂತು ಪ್ರಾರ್ಥನೆ ಮಾಡುತ್ತಿದ್ದ. ಅದನ್ನು ನೋಡಿದ ಸಿಐಎಸ್‌ಎಫ್‌ ಯೋಧ (ಕೇಂದ್ರ ಕೈಗಾರಿಕಾ ಭದ್ರತಾ ಪಡೆ)ನೊಬ್ಬ ಕೂಡಲೇ ಅಲರ್ಟ್‌ ಆಗಿ ಆತನನ್ನು ಬಂಧಿಸಿದ್ದಾರೆ.

ತಾರೀಕ್‌ ಅಝೀಜ್‌ನನ್ನು ಬಂಧಿಸಿದ ಸಿಐಎಸ್‌ಎಫ್‌ ಸಿಬ್ಬಂದಿ ಬಳಿಕ ಆತನನ್ನು ದೆಹಲಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಹಾಗೇ, ಅಝೀಜ್‌ ವಿರುದ್ಧ ದೂರನ್ನೂ ನೀಡಿದ್ದಾರೆ. ದೆಹಲಿ ಪೊಲೀಸರು ಸಿಸಿಟಿವಿ ಕ್ಯಾಮರಾದಲ್ಲಿನ ದೃಶ್ಯಗಳನ್ನೂ ಪರಿಶೀಲನೆ ಮಾಡಿದ್ದಾರೆ. ಅದರಲ್ಲಿ ತಾರೀಕ್‌ ಡಿ ಬೋರ್ಡಿಂಗ್‌ ಗೇಟ್‌ 1 ಮತ್ತು 3 ರ ಮಧ್ಯೆ ರಾಷ್ಟ್ರಧ್ವಜ ಹಾಸಿ, ಅದನ್ನು ಮೆಟ್ಟಿ ನಿಂತು ನಮಾಜ್‌ ಮಾಡಿದ್ದು ಸ್ಪಷ್ಟವಾಗಿ ಕಾಣಿಸಿದೆ. ಹೀಗಾಗಿ ಆತನ ವಿರುದ್ಧ, ರಾಷ್ಟ್ರಗೌರವಕ್ಕೆ ಧಕ್ಕೆ ತಂದ ಆರೋಪದಡಿ ಎಫ್‌ಐಆರ್‌ ದಾಖಲು ಮಾಡಿದ್ದಾರೆ. ನಂತರ ತಾರೀಕ್‌ ಜಾಮೀನು ಪಡೆದು, ಅಸ್ಸಾಂಗೆ ತೆರಳಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಈ ಬಾರಿ ರಸ್ತೆಯಲ್ಲಿ ನಮಾಜ್‌ ನಡೆದಿಲ್ಲ: ಇತಿಹಾಸದಲ್ಲೆ ಮೊದಲು

ಮೊಹಮ್ಮದ್‌ ತಾರೀಕ್‌ ಅಝೀಜ್‌ ಅಸ್ಸಾಂನ ದಿಮಾಪುರ ನಿವಾಸಿಯಾಗಿದ್ದು ಯಾವುದೋ ಕಾರಣಕ್ಕೆ ದೆಹಲಿಗೆ ಬಂದಿದ್ದ. ಮರುದಿನ ದೆಹಲಿ ಏರ್‌ಪೋರ್ಟ್‌ನಿಂದ ವಾಪಸ್‌ ಅಸ್ಸಾಂಗೆ ಹೋಗುವನಿದ್ದ. ಏರ್‌ಪೋರ್ಟ್‌ನಲ್ಲಿದ್ದಾಗಲೇ ನಮಾಜ್‌ ಸಮಯವಾಯಿತು ಎಂದು, ರಾಷ್ಟ್ರಧ್ವಜ ಹಾಸಿ ಅದರ ಮೇಲೆ ನಮಾಜ್‌ ಮಾಡಿದ್ದಾನೆ. ಬಳಿಕ ಆತನನ್ನು ಬಂಧಿಸಿದ್ದ ಪೊಲೀಸರು ಅವನ ಪಾಸ್‌ಪೋರ್ಟ್‌ ಸೇರಿ, ಎಲ್ಲ ದಾಖಲೆಗಳನ್ನೂ ವಶಕ್ಕೆ ಪಡೆದಿದ್ದರು. ರಾಷ್ಟ್ರಧ್ವಜದ ಮೇಲೆ ನಮಾಜ್‌ ಮಾಡಿದ್ದಕ್ಕೆ ಕಾರಣ ಕೇಳಿದರೆ ಆತ ಯಾವುದೇ ಸಮಾಧಾನಕರ ಉತ್ತರ ನೀಡಲಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿಗೆ ಹೋದರೂ ಸಿಗದ ಅಮಿತ್‌ ಷಾ: ಫೋನ್‌ನಲ್ಲೆ ಮಾತಾಡಿ ಬಂದ CM

Exit mobile version