Site icon Vistara News

Cheetah In India | ಎಂಟು ಚೀತಾಗಳಲ್ಲಿ ಒಂದಕ್ಕೆ ನರೇಂದ್ರ ಮೋದಿ ಇಟ್ಟ ಹೆಸರೇನು?

Cheetah

ನವದೆಹಲಿ: ಭಾರತದಲ್ಲಿ ಏಳು ದಶಕಗಳ ಹಿಂದೆ ನಶಿಸಿಹೋಗಿದ್ದ ಚೀತಾ ಸಂತತಿಯನ್ನು (Cheetah In India) ಮರುಕಳಿಸುವ ದೃಷ್ಟಿಯಿಂದ ನಮೀಬಿಯಾದಿಂದ ಕರೆತಂದ ಎಂಟು ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಅರಣ್ಯಕ್ಕೆ ಬಿಟ್ಟಿದ್ದಾರೆ. ಇದರ ಬೆನ್ನಲ್ಲೇ ಎಂಟು ಚೀತಾಗಳಲ್ಲಿ ಒಂದಕ್ಕೆ ಮೋದಿ ಅವರೇ ಹೆಸರಿಟ್ಟಿದ್ದು ವಿಶೇಷವಾಗಿದೆ.

ಎಂಟು ಚೀತಾಗಳಲ್ಲಿ ಒಂದಕ್ಕೆ ಮೋದಿ ಅವರು “ಆಶಾ” ಎಂದು ಹೆಸರಿಟ್ಟಿದ್ದಾರೆ. ಆಶಾ ಎಂದರೆ ಹಿಂದಿಯಲ್ಲಿ ಭರವಸೆ ಎಂಬ ಅರ್ಥ ಬರುತ್ತದೆ. ಹಾಗಾಗಿ, ಮೋದಿ ಈ ಹೆಸರು ಆಯ್ಕೆ ಮಾಡಿದ್ದಾರೆ. ಮಧ್ಯಪ್ರದೇಶದ ಕುನೊ ನ್ಯಾಷನಲ್‌ ಪಾರ್ಕ್‌ನಲ್ಲಿ ಎಂಟು ಚೀತಾಗಳನ್ನು ಬಿಡಲಾಗಿದ್ದು, ನಾಲ್ಕು ವರ್ಷದ ಚೀತಾಗೆ ಆಶಾ ಎಂದು ನಾಮಕರಣ ಮಾಡಿದ್ದಾರೆ. ಚೀತಾಗಳ ಸಂಖ್ಯೆ ಹೆಚ್ಚಳವಾಗಲಿ, ಸಂತತಿ ಬೆಳೆಯಲಿ ಎಂಬ ದೃಷ್ಟಿಯಿಂದ ಈ ಹೆಸರು ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Cheetah | ಚೀತಾ ಉಳಿಸುವುದೆಂದ್ರೆ ಜಗತ್ತು ಬದಲಾಗುತ್ತಿದೆ ಎಂದರ್ಥ! ಭಾರತದಲ್ಲಿ ಸಂತತಿ ಬೆಳೆಯಬಲ್ಲದೇ?

Exit mobile version