Site icon Vistara News

Narendra Modi : ಕಾಲೇಜು ಹುಡ್ಗರೊಂದಿಗೆ ಮೆಟ್ರೋದಲ್ಲಿ ಹರಟುತ್ತಾ ಹೋದ ಪ್ರಧಾನಿ ಮೋದಿ, ಏನೇನು ಕೇಳಿದ್ರು?

modi in metro

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ದೆಹಲಿ ವಿಶ್ವವಿದ್ಯಾನಿಲಯದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ವಿಶೇಷವೆಂದರೆ ಅವರು ವಿವಿಗೆ ಸಾಮಾನ್ಯರಂತೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿ ಹೋಗಿದ್ದಾರೆ.

ಇದನ್ನೂ ಓದಿ: Viral News : ವಿಶ್ವದಲ್ಲೇ ಅತಿ ಉದ್ದದ ನಾಲಿಗೆ ಹೊಂದಿರುವ ನಾಯಿ ಇದೇ ನೋಡಿ; ಅಬ್ಬಬ್ಬಾ ಎಷ್ಟೊಂದು ಉದ್ದವಿದೆ ಇದರ ನಾಲಿಗೆ!
ಮೆಟ್ರೋದಲ್ಲಿ ಅವರು ಕಾಲೇಜು ವಿದ್ಯಾರ್ಥಿಗಳ ಜತೆಯಲ್ಲಿ ಮಾತನಾಡಿಕೊಂಡು ಪ್ರಯಾಣ ಮಾಡಿದ್ದಾರೆ. ವಿಶ್ವವಿದ್ಯಾನಿಲಯದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಭಾಷಣ ಮಾಡಿದ ಸಂದರ್ಭದಲ್ಲಿ ಮೆಟ್ರೋ ಪ್ರಯಾಣದ ಅನುಭವವನ್ನೂ ಹಂಚಿಕೊಂಡಿದ್ದಾರೆ. “ನಾನಿಂದು ಕಾಲೇಜು ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ಇಲ್ಲಿಗೆ ಬಂದೆ. ಕಾಲೇಜು ವಿದ್ಯಾರ್ಥಿಗಳ ಬಳಿ ಮಾತನಾಡುವುದಕ್ಕೆ ಎಷ್ಟೊಂದು ವಿಚಾರಗಳಿವೆ” ಎಂದು ಅವರು ಹೇಳಿದರು.


“ಯಾವ ಫಿಲಂ ನೋಡಿದೆ? ಒಟಿಟಿಯಲ್ಲಿರುವ ಆ ಸೀರಿಸ್‌ ಚೆನ್ನಾಗಿಯಲ್ಲಾ? ಆ ರೀಲ್‌ ಅನ್ನು ನೀನು ನೋಡಿದೆಯೇ? ಹೀಗೆ ಅನೇಕ ಮಾತುಗಳು ಅವರಲ್ಲಿದೆ. ವಿಜ್ಞಾನದ ಬಗ್ಗೆ ಇಂದ ಹಿಡಿದು ಎಲ್ಲ ವಿಚಾರಗಳಲ್ಲೂ ಅವರ ಬಳಿ ಮಾತುಗಳಿವೆ” ಎಂದು ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳ ಕುರಿತಾಗಿ ಹೇಳಿದರು. ಅವರು ಮೆಟ್ರೋದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿಕೊಂಡು ಪ್ರಯಾಣ ಮಾಡಿದ ಫೋಟೋ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ ಆಗಿವೆ.


ದೆಹಲಿ ವಿವಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿ ಅವರು ಅಲ್ಲಿ ಮೂರು ಕಟ್ಟಡಗಳ ಶಂಕುಸ್ಥಾಪನೆ ನೆರವೇರಿಸಿದರು. ಹಾಗೆಯೇ ಕೆಲವು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಅವರು ಶಂಕುಸ್ಥಾಪನೆ ನೆರವೇರಿಸಿದ ಒಂದು ಕಟ್ಟಡಗಳಲ್ಲಿ ಒಂದನ್ನು ತಾಂತ್ರಿಕ ಸಿಬ್ಬಂದಿಗಾಗಿ ಮಾಡಲಾಗುತ್ತಿದೆ. ಇನ್ನೊಂದನ್ನು ಕಂಪ್ಯೂಟರ್‌ ಕೇಂದ್ರವಾಗಿ ಮತ್ತೊಂದನ್ನು ಅಕಾಡೆಮಿಕ್‌ ಕೇಂದ್ರವಾಗಿ ಮಾಡಲಾಗುವುದು. ಇವುಗಳು 7+1 ಮಹಡಿಯ ಕಟ್ಟಡಗಳಾಗಿರಲಿವೆ.

Exit mobile version