ಮುಂಬೈ: ಮಹಾರಾಷ್ಟ್ರದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) ನಾಯಕ ಅಜಿತ್ ಪವಾರ್ (Ajit Pawar) ಅವರು ಚಲಿಸುತ್ತಿದ್ದ ಲಿಫ್ಟ್ ನಾಲ್ಕನೇ ಫ್ಲೋರ್‌ನಿಂದ ಕುಸಿದಿದ್ದು, ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ.
ಪುಣೆ ನಗರದ ಹರ್ಡಿಕರ್ ಆಸ್ಪತ್ರೆಯ ಕಟ್ಟಡ ಉದ್ಘಾಟನೆಗೆ ಹೋಗಿದ್ದ ವೇಳೆ ಅವಘಡ ಸಂಭವಿಸಿದೆ. ಅಜಿತ್ ಪವಾರ್, ಒಬ್ಬ ಡಾಕ್ಟರ್ ಹಾಗೂ ಇಬ್ಬರು ಪೊಲೀಸರು ಲಿಫ್ಟ್‌ನಲ್ಲಿ ಚಲಿಸುತ್ತಿದ್ದರು. ಇದೇ ವೇಳೆ ವಿದ್ಯುತ್ ಸ್ಥಗಿತಗೊಂಡಿದ್ದು, ಏನಾಗಿದೆ ಎಂಬುದು ಅರಿಯುವಷ್ಟರಲ್ಲಿಯೇ ನಾಲ್ಕನೇ ಮಹಡಿಯಿಂದ ನೆಲಮಹಡಿಗೆ ಲಿಫ್ಟ್ ಕುಸಿದಿದೆ. ಬಳಿಕ ಲಿಫ್ಟ್‌ನ ಬಾಗಿಲು ಮುರಿದು ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅಜಿತ್ ಪವಾಋ, “ಲಿಫ್ಟ್‌ನಲ್ಲಿ ತೆರಳುವಾಗ ಏಕಾಏಕಿ ವಿದ್ಯುತ್ ಸ್ಥಗಿತಗೊಂಡಿತು. ಇದಾದ ಕೆಲವೇ ಕ್ಷಣದಲ್ಲಿ ಲಿಫ್ಟ್ ಕೆಳಗೆ ಬಿತ್ತು” ಎಂದಿದ್ದಾರೆ. ಆದರೆ, ಅವರು ಘಟನೆ ಕುರಿತು ಯಾರ ಮೇಲೂ ಆರೋಪ ಹೊರಿಸಿಲ್ಲ. ಲಿಫ್ಟ್‌ನಲ್ಲಿದ್ದ ಬೇರೆಯವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪವಾರ್ ತಿಳಿಸಿದ್ದಾರೆ. ಇದಾದ ಬಳಿಕ ಪವಾರ್ ಅವರು ತಾಯಿಯ ಆಶೀರ್ವಾದ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Supriya Sule | ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಸೀರೆಗೆ ಬೆಂಕಿ, ಅಪಾಯದಿಂದ ಪಾರು