ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸದ್ಯ ಇ.ಡಿ.ಯಿಂದ ಮುಕ್ತಿ ಸಿಗುವ ಲಕ್ಷಣ ಕಾಣಿಸುತ್ತಿಲ್ಲ. ಇಂದು (ಜೂ.21) ಮತ್ತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರಿಗೆ ಸಮನ್ಸ್ ನೀಡಿದ್ದಾರೆ. ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಇ ಡಿ ವಿಚಾರಣೆಗೆ ಒಳಪಟ್ಟ ರಾಹುಲ್ ಗಾಂಧಿಗೆ ಜೂ.13ರಿಂದ 15ರವರೆಗೆ ಸತತ ಮೂರು ದಿನ ಗ್ರಿಲ್ ಮಾಡಲಾಗಿತ್ತು. ಅದಾದ ಬಳಿಕ 17ಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಆದರೆ ತಾವು ಸೋಮವಾರ ಹಾಜರಾಗುವುದಾಗಿ ಮನವಿ ಮಾಡಿದ್ದ ರಾಹುಲ್ ಗಾಂಧಿ ನಿನ್ನೆ (ಜೂ.20) ಬೆಳಗ್ಗೆಯಿಂದ ಸಂಜೆವರೆಗೂ ಇ.ಡಿ. ಕಚೇರಿಯಲ್ಲಿ ಇದ್ದರು.
ರಾಹುಲ್ ಗಾಂಧಿ ಸೋಮವಾರ ಬೆಳಗ್ಗೆ 11 ಗಂಟೆಯ ಹೊತ್ತಿಗೆ ಇಡಿ ಕಚೇರಿ ತಲುಪಿದ್ದಾರೆ. ಅಧಿಕಾರಿಗಳು ಸಂಜೆಯವರೆಗೂ ಅವರನ್ನು ವಿಚಾರಣೆಗೆ ಒಳಪಡಿಸಿ, ಮತ್ತೆ ಮಂಗಳವಾರ ಹಾಜರಾಗುವಂತೆ ಸಮನ್ಸ್ ನೀಡಿದರು. ಈ ಮಧ್ಯೆ ರಾಹುಲ್ ಗಾಂಧಿ ತಮ್ಮ ವಿಚಾರಣೆಯನ್ನು ಎಷ್ಟಾಗತ್ತೋ ಅಷ್ಟು ಬೇಗ ಮುಗಿಸಿ. ನನ್ನ ತಾಯಿಯ ಆರೋಗ್ಯ ಸರಿಯಾಗಿಲ್ಲ. ಅವರನ್ನು ಆರೈಕೆ ಮಾಡಲು ನಾನು ಹೋಗಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಇನ್ನು ಸೋನಿಯಾ ಗಾಂಧಿ ಕೊವಿಡ್ ೧೯ನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದು. ಅವರು ನಿನ್ನೆಯಷ್ಟೇ ಡಿಸ್‌ಚಾರ್ಜ್ ಆಗಿದ್ದಾರೆ. ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಸೋನಿಯಾ ಗಾಂಧಿ ಜೂ.೨೩ಕ್ಕೆ ಇಡಿ ವಿಚಾರಣೆಗೆ ಹಾಜರಾಗಬೇಕು.
ಇದನ್ನೂ ಓದಿ:ಸೋನಿಯಾ ಗಾಂಧಿ ಆಸ್ಪತ್ರೆಯಿಂದ ಡಿಸ್ಚಾರ್ಜ್, ರಾಹುಲ್‌ಗೆ ಮಂಗಳವಾರವೂ ಬುಲಾವ್