ಮುಂಬಯಿ: ಭಾರತದ ಇಬ್ಬರು ನಿರ್ದೇಶಕರು ಆಸ್ಕರ್ ಪ್ರಶಸ್ತಿ (Oscars 2023) ಗೆದ್ದಿರುವುದು ಭಾರತೀಯ ಚಿತ್ರಲೋಕದ ಗೌರವವನ್ನು ಹೆಚ್ಚಿಸಿದೆ. ಭಾರತೀಯರೆಲ್ಲರೂ ಇದೇ ಸಂಭ್ರಮದಲ್ಲಿದ್ದಾರೆ. ನಾಟು ನಾಟು ಹಾಡಿರುವ ಆರ್ಆರ್ಆರ್ ಸಿನಿಮಾ ತಂಡವನ್ನು ಹಾಗೂ ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿ ತಂಡವನ್ನು ಹಾಡಿ ಹೊಗಳುತ್ತಿದ್ದಾರೆ. ಆದರೆ, ವಂಚಕ ಸುಕೇಶ್ ಚಂದ್ರಶೇಖರ್ ಮಾಜಿ ಪ್ರಿಯತಮೆ ಹಾಗೂ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಮೇಕಪ್ ಆರ್ಟಿಸ್ಟ್ ಶಾನ್ ಮುಟ್ಟತ್ತಿಲ್ ಪ್ರಕಾರ ಪ್ರಶಸ್ತಿ ಸಿಕ್ಕಿದ್ದಲ್ಲ ಖರೀದಿ ಮಾಡಿದ್ದು. ಜಾಕ್ವೆಲಿನ್ ಗೆಳೆಯನ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಆಸ್ಕರ್ ಪ್ರಶಸ್ತಿಗಳ ಘೋಷಣೆಯ ಇನ್ಸ್ಟಾಗ್ರಾಮ್ ಪೋಸ್ಟ್ನ ಕಾಮೆಂಟ್ ಸೆಕ್ಷನ್ನಲ್ಲಿ ಶಾನ್, ಇದೊಂದು ನಿಜವಾಗಿಯೂ ತಮಾಷೆಯ ವಿಷಯ. ಭಾರತದಲ್ಲಿ ಮಾತ್ರ ಪ್ರಶಸ್ತಿಗಳನ್ನು ಹಣ ಕೊಟ್ಟು ಖರೀದಿ ಮಾಡಬಹುದು ಎಂದು ಅಂದುಕೊಂಡಿದ್ದೆ. ಇದೀಗ ಆಸ್ಕರ್ ಕೂಡ ಗೆಲ್ಲಬಹುದು. ಹಣದಿಂದ ನಾವು ಏನನ್ನು ಬೇಕಾದರೂ ಕೊಂಡುಕೊಳ್ಳಬಹುದು. ಈಗ ಆಸ್ಕರ್ ಕೂಡ, ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ನಾಟು ನಾಟು ಹಾಡು ಮತ್ತು ಕೀರವಾಣಿ – ಈಗ ಸ್ವರ್ಗಕ್ಕೆ ಒಂದೇ ಗೇಣು!
ಜಾಕ್ವೆಲ್ ಫರ್ನಾಂಡೀಸ್ ನಟಿಸಿರುವ ಟೆಲ್ ಇಟ್ ಲೈಕ್ ಎ ವುಮೆನ್ ಎಂಬ ಹಾಡು ಕೂಡ ಆಸ್ಕರ್ನ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಸ್ಪರ್ಧೆ ಮಾಡಿ ಸೋತಿತ್ತು. ಲೇಡಿ ಗಾಗಾ ಅವರ ಹೋಲ್ಡ್ ಮೈ ಹ್ಯಾಂಡ್ ಎಂಬ ಹಾಡು ಕೂಡ ಇದೇ ವಿಭಾಗದಲ್ಲಿ ಸ್ಪರ್ಧೆ ಮಾಡಿತ್ತು. ರಿಹಾನ್ನಳ ಲಿಫ್ಟ್ ಮೇಕ್ ಅಲ್ ಎಂಬ ಹಾಡು ಕೂಡ ಈ ಸ್ಪರ್ಧೆಯಲ್ಲಿತ್ತು.