ಅಮೃತಸರ: ಕಾಂಗ್ರೆಸ್ ನಾಯಕ ಮತ್ತು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ಅವರು ತಮ್ಮ ಭಾವಿ ಸೊಸೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯಿಸಿದ್ದಾರೆ. ತಮ್ಮ ಕುಟುಂಬದೊಂದಿಗೆ ಭಾವಿ ಸೊಸೆಯಿರುವ ಫೋಟೋಗಳನ್ನು ಸೋಮವಾರ ಹಂಚಿಕೊಂಡಿರುವ ಅವರು ʼಇದು ಹೊಸ ಆರಂಭʼ ಎಂದು ಹೇಳಿಕೊಂಡಿದ್ದಾರೆ.
ಗಂಗಾ ನದಿಯ ತಟದಲ್ಲಿ ನವಜೋತ್ ಸಿಂಗ್ ಅವರ ಕುಟುಂಬ ದುರ್ಗಾಷ್ಟಮಿಯ ಪೂಜೆ ಸಲ್ಲಿಸಿದೆ. ಫೋಟೋದಲ್ಲಿ ನವಜೋತ್ ಅವರ ಜತೆಯಲ್ಲಿ ಅವರ ಪತ್ನಿ, ಮಗಳು ರಬಿಯಾ ಸಿಧು, ಮಗ ರಣ್ ಸಿಧು ಮತ್ತು ಭಾವಿ ಸೊಸೆ ಇನಾಯತ್ ರಾಂಧವಾ ಅವರು ಇರುವುದನ್ನು ಕಾಣಬಹುದಾಗಿದೆ.
ಇದನ್ನೂ ಓದಿ: ರಾಜ ಮಾರ್ಗ ಅಂಕಣ: ಉಸಿರಿರುವವರೆಗೂ ಭುಜದ ಮೇಲೆ ಐದು ನಕ್ಷತ್ರ ಹೊಂದಿದ್ದ ಕನ್ನಡಿಗ ಕಾರಿಯಪ್ಪ
ಈ ಫೋಟೋಗಳನ್ನು ಹಂಚಿಕೊಂಡಿರುವ ಸಿಧು, “ಮಗನು ತನ್ನ ಪ್ರೀತಿಯ ತಾಯಿಯ ದೊಡ್ಡ ಆಸೆಯನ್ನು ಗೌರವಿಸುತ್ತಿದ್ದಾನೆ. ಈ ಮಂಗಳಕರ ದುರ್ಗಾಷ್ಟಮಿಯ ದಿನದಂದು ತಾಯಿ ಗಂಗಾ ಮಾತೆಯ ಮಡಿಲಲ್ಲಿ ನಮ್ಮ ಹೊಸ ಆರಂಭ, ನಮ್ಮ ಭಾವಿ ಸೊಸೆ ಇನಾಯತ್ ಅವರನ್ನು ಪರಿಚಯಿಸುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
The son honours the most cherished desire of his beloved mother …. On this auspicious Durga-Ashtami day in the lap of mother Ganges , a new beginning , introducing our would be daughter in law Inayat Randhawa . They exchanged promise bands. pic.twitter.com/4ELfTpUTmJ
— Navjot Singh Sidhu (@sherryontopp) June 26, 2023
ಈ ಟ್ವೀಟ್ ಹೊರಬೀಳುತ್ತಿದ್ದಂತೆಯೇ ಸಿಧು ಅವರ ಅಭಿಮಾನಿಗಳು ನೂತನ ಜೋಡಿಗೆ ಶುಭ ಹಾರೈಸಲಾರಂಭಿಸಿದ್ದಾರೆ. ಗಂಗಾ ನದಿ ತಟದಿಂದಲೇ ಸೊಸೆಯನ್ನು ಪರಿಚಯಿಸಿರುವ ಬಗ್ಗೆ ಮೆಚ್ಚುಗೆ ಮಾತುಗಳನ್ನೂ ಆಡಲಾರಂಭಿಸಿದ್ದಾರೆ. ಈ ಪೋಸ್ಟ್ಗೆ ಸಾವಿರಾರು ಮಂದಿ ಲೈಕ್ ಮಾಡಿದ್ದು, ಹಲವರು ಟ್ವೀಟ್ ಅನ್ನು ರಿಟ್ವೀಟ್ ಮಾಡಿಕೊಂಡಿದ್ದಾರೆ ಕೂಡ.
ಇದನ್ನೂ ಓದಿ: Viral Video: ಪ್ರೀತಿಯಲ್ಲಿ ಬಿದ್ದ ಮಗಳಿಗೆ ಬಾಸುಂಡೆ ಬರುವಂತೆ ಬಾರಿಸಿದ ಅಮ್ಮ! ಇದು ಲವ್ ಸೈಡ್ ಎಫೆೆಕ್ಟ್
ರಸ್ತೆಯಲ್ಲಿ ಗಲಾಟೆ ಪ್ರಕರಣದಲ್ಲಿ ಭಾಗಿಯಾಗಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣರಾದ ಆರೋಪದಲ್ಲಿ ಜೈಲು ಸೇರಿದ್ದ ಸಿಧು ಅವರನ್ನು 10 ತಿಂಗಳ ಜೈಲು ಶಿಕ್ಷೆಯ ನಂತರ ಏಪ್ರಿಲ್ 2ರಂದು ಬಿಡುಗಡೆ ಮಾಡಲಾಗಿತ್ತು. ಅದಾದ ನಂತರ ಕಳೆದ ತಿಂಗಳು ಗಂಗಾ ದಸರಾ ಸಮಯದಲ್ಲಿ ಸಿಧು ಅವರು ತಮ್ಮ ಕುಟುಂಬದೊಂದಿಗೆ ಋಷಿಕೇಶಕ್ಕೆ ಭೇಟಿ ನೀಡಿದ್ದರು. ಆ ಫೋಟೋಗಳನ್ನು ಕೂಡ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.