Site icon Vistara News

Supriya Sule | ಎನ್​ಸಿಪಿ ಸಂಸದೆ ಸುಪ್ರಿಯಾ ಸುಳೆ ಸೀರೆಗೆ ಬೆಂಕಿ, ಅಪಾಯದಿಂದ ಪಾರು

Supriya Sule said that Gadkari is the only minister working in Modi's cabinet

ಮುಂಬಯಿ : ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಾರ್ಟಿ (ಎನ್​ಸಿಪಿ) ಸಂಸದೆ ಸುಪ್ರಿಯಾ ಸುಳೆ (Supriya Sule) ಅವರ ಸೀರೆಗೆ ಬೆಂಕಿ ಹೊತ್ತಿಕೊಂಡು ಪ್ರಸಂಗ ಪುಣೆಯಲ್ಲಿ ನಡೆದಿದೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರ ಸೀರೆಗೆ ಸ್ಥಳದಲ್ಲಿ ಹಚ್ಚಿಟ್ಟಿದ್ದ ದೀಪದ ಬೆಂಕಿ ತಾಗಿದೆ ಎಂದು ಹೇಳಲಾಗಿದೆ. ಬಾರಾಮತಿಯ ಸಂಸದೆಯಾಗಿರುವ ಅವರು ಈ ಕುರಿತ ಪ್ರಕಟಣೆ ಹೊರಡಿಸಿದ್ದು, ತಮಗೇನೂ ಆಗಿಲ್ಲ. ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾರೆ.

ಪುಣೆ ಇಂಜವಾಡಿಯಲ್ಲಿ ಕರಾಟೆ ಚಾಂಪಿಯನ್​ಶಿಪ್​ ಒಂದರ ಉದ್ಘಾಟನೆಗೆ ಸುಪ್ರಿಯಾ ಅವರು ಹೋಗಿದ್ದರು. ಅವರು ಅಲ್ಲಿದ್ದ ಛತ್ರಪತಿ ಶಿವಾಜಿಯ ಸಣ್ಣ ಪ್ರತಿಮೆಯೊಂದಕ್ಕೆ ಮಾಲಾರ್ಪಣೆ ಮಾಡಲು ಮುಂದಾದಾಗ ಕೆಳಗೆ ಹಚ್ಚಿಟ್ಟಿದ್ದ ದೀಪದ ಜ್ವಾಲೆ ಸೀರೆಗೆ ತಾಗಿದೆ.

ಕಾರ್ಯಕ್ರಮದ ಉದ್ಘಾಟನೆ ವೇಳೆ ಸೀರೆಗೆ ಅನಿರೀಕ್ಷಿತವಾಗಿ ಬೆಂಕಿ ತಾಗಿದೆ. ತಕ್ಷಣವೇ ಅದನ್ನು ನಂದಿಸಲಾಯಿತು. ಹೀಗಾಗಿ ಏನೂ ಅಪಾಯ ಉಂಟಾಗಿಲ್ಲ. ನನ್ನ ಬಂಧುಗಳು ಹಾಗೂ ಪಕ್ಷದ ಕಾರ್ಯಕರ್ತರು ಆತಂಕ ಪಡಬೇಕಾಗಿಲ್ಲ ಎಂದು ಸುಪ್ರಿಯಾ ಅವರು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | Border Dispute | ಸಂಸತ್ತಿನಲ್ಲಿ ಕರ್ನಾಟಕದ ವಿರುದ್ಧ ಹರಿಹಾಯ್ದ ಸುಳೆ! ಶಾ ಮಧ್ಯಪ್ರವೇಶಕ್ಕೆ ಆಗ್ರಹ

Exit mobile version