ನವ ದೆಹಲಿ: ನಾಗಾಲ್ಯಾಂಡ್ನ ಮುಖ್ಯಮಂತ್ರಿಯಾಗಿ ನೆಫಿಯೊ ರಿಯೊ (Nephiu Rio) ಅವರು ಇಂದು ಪ್ರಮಾಣವಚನ ಸ್ವೀಕಾರ ಮಾಡಿದರು. ನಾಗಾಲ್ಯಾಂಡ್ನ ರಾಜಕೀಯ ಧುರೀಣ, ನ್ಯಾಶನಲ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿಯ ನಾಯಕ ನೆಫಿಯೊ ರಿಯೊ ಅವರು ಸತತ ಐದನೇ ಬಾರಿಗೆ ನಾಗಾಲ್ಯಾಂಡ್ನ ಚುಕ್ಕಾಣಿ ಹಿಡಿದರು. ಕೊಹಿಮಾ ಸಿಟಿಯಲ್ಲಿ ನಡೆದ ರಿಯೊ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ನಾಗಾಲ್ಯಾಂಡ್ ರಾಜ್ಯಪಾಲ ಲಾ. ಗಣೇಶನ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ಪಾಲ್ಗೊಂಡಿದ್ದರು.
ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಫೆ.27ರಂದು ನಡೆದಿತ್ತು. ಅದರಲ್ಲಿ ಈ ಬಾರಿಯೂ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ 37 ಸೀಟ್ಗಳನ್ನು ಗೆದ್ದು ಸರ್ಕಾರ ರಚನೆ ಮಾಡುತ್ತಿದೆ. 60 ವಿಧಾನಸಭಾ ಕ್ಷೇತ್ರಗಳಿರುವ ನಾಗಾಲ್ಯಾಂಡ್ನಲ್ಲಿ ಎಡಿಪಿಪಿ 25 ಮತ್ತು ಬಿಜೆಪಿ 12 ಸೀಟ್ಗಳನ್ನು ಗೆದ್ದುಕೊಂಡಿವೆ. ಇನ್ನುಳಿದಂತೆ ನಾಗಾ ಪೀಪಲ್ಸ್ ಫ್ರಂಟ್ ಎರಡು ಕ್ಷೇತ್ರಗಳನ್ನು ಮತ್ತು ಕಾಂಗ್ರೆಸ್ ಏಳು ಕ್ಷೇತ್ರಗಳನ್ನು ಗೆದ್ದುಕೊಂಡಿವೆ. ಜನತಾ ದಳ (ಯುನೈಟೆಡ್) ಒಂದು ಕ್ಷೇತ್ರದಲ್ಲಿ ಮತ್ತು ರಾಮ್ ವಿಲಾಸ್ ಅವರ ಜನಶಕ್ತಿ ಪಕ್ಷ 15 ಕ್ಷೇತ್ರಗಳಲ್ಲಿ ಸ್ಪರ್ಧಿಸಿ , ಎರಡು ಕ್ಷೇತ್ರಗಳನ್ನು ಗೆದ್ದುಕೊಂಡಿದೆ.
ಎಲ್‌ಜೆಡಿ ಮತ್ತು ಆರ್‌ಪಿಐಗಳೆರಡೂ ತಮ್ಮ ಬೆಂಬಲ ಪತ್ರವನ್ನು ಎನ್‌ಡಿಪಿಪಿ-ಬಿಜೆಪಿಗೆ ನೀಡಿವೆ. ಹಾಗೆಯೇ, ಮೂರನೇ ಅತಿದೊಡ್ಡ ಪಕ್ಷವಾಗಿರುವ ಎನ್‌ಸಿಪಿ ಕೂಡ ಎನ್‌ಡಿಪಿಪಿಗೆ ಬೆಂಬಲ ವ್ಯಕ್ತಪಡಿಸಿದೆ. ಮತ್ತೊಂದೆಡೆ, ಎನ್‌ಫಿಎಫ್ ಕೂಡ ಬೆಂಬಲ ನೀಡುವ ಬಗ್ಗೆ ಯೋಚನೆ ಮಾಡುತ್ತಿದೆ. ಹೀಗಾಗಿ ನ್ಯಾಗಾಲ್ಯಾಂಡ್ನಲ್ಲಿ ಪ್ರತಿಪಕ್ಷಗಳೇ ಇಲ್ಲದಂತೆ ಆಗುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: Chief Minister Conrad Sangma: ಮೇಘಾಲಯದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಕಾನ್ರಾಡ್ ಸಂಗ್ಮಾ, ಇಬ್ಬರು ಡಿಸಿಎಂ