Site icon Vistara News

ಕೇಂದ್ರ ಸರ್ಕಾರಕ್ಕೆ 9ವರ್ಷ; ನೂತನ ಸಂಸತ್​ ಭವನ ಉದ್ಘಾಟನೆಗೆ ದಿನಾಂಕ ಫಿಕ್ಸ್​?

Petition in Supreme Court seeks invite for President to new Parliament building event

Petition in Supreme Court seeks invite for President to new Parliament building event

ನವ ದೆಹಲಿ: ರಾಷ್ಟ್ರರಾಜಧಾನಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಂಸತ್​ ಭವನ ಉದ್ಘಾಟನೆ (New Parliament Building)ಗೆ ದಿನಗಣನೆ ಶುರುವಾಗಿದೆ. ಇದೇ ತಿಂಗಳ ಕೊನೆಯಲ್ಲಿ ಅಂದರೆ ಮೇ 26ರಂದು ಪ್ರಧಾನಿ ಮೋದಿಯವರು ಹೊಸ ಸಂಸತ್ ಭವನವನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೇ 29ಕ್ಕೆ 9ವರ್ಷ ಆಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಸಮಾರಂಭಗಳನ್ನು ಆಯೋಜಿಸಿದೆ. ಅದರ ಒಂದು ಭಾಗವಾಗಿ ನೂತನ ಸಂಸತ್​ ಭವನ ಉದ್ಘಾಟನೆಯನ್ನೂ ಮಾಡಲಿದೆ ಎಂದು ಹೇಳಲಾಗಿದೆ.

ಸೆಂಟ್ರಲ್​ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ನೂತನ ಸಂಸತ್​ ಕಟ್ಟಡ ನಿರ್ಮಿಸಲಾಗುತ್ತಿದೆ. ಈ ನೂತನ ಕಟ್ಟಡ 65 ಸಾವಿರ ಚದರ್ ಮೀಟರ್ ಪ್ರದೇಶಕ್ಕೆ ವ್ಯಾಪಿಸಿದೆ. ಲೋಕಸಭೆ ಮತ್ತು ರಾಜ್ಯ ಸಭೆ ಕಾರ್ಯ-ಕಲಾಪಗಳಿಗಾಗಿ ಎರಡು ದೊಡ್ಡ-ವಿಶಾಲವಾದ ಸಭಾಂಗಣಗಳನ್ನು ಹೊಂದಿದೆ. ಒಂದು ಗ್ರಂಥಾಲಯ, ಸಂಸದರ ಕಚೇರಿಗಳು, ಸಭೆಗಳಿಗಾಗಿ ಸಮಿತಿ ರೂಮ್​​ಗಳು ಮತ್ತಿತರ ಸೌಕರ್ಯಗಳನ್ನು ಹೊಂದಿರಲಿದೆ. ಲೋಕಸಭೆ ಕಲಾಪ ನಡೆಯುವ ಹಾಲ್​ಗಳಲ್ಲಿ 888 ಸಂಸದರು ಮತ್ತು ರಾಜ್ಯ ಸಭೆ ಕಲಾಪ ನಡೆಯುವಲ್ಲಿ 384 ಸಂಸದರು ಕುಳಿತುಕೊಳ್ಳಬಹುದಾಗಿದೆ. ಅಂದಹಾಗೇ, ಲೋಕಸಭೆ ಹಾಲ್​​ನ್ನು ರಾಷ್ಟ್ರಪಕ್ಷಿ ನವಿಲು ಮತ್ತು ರಾಜ್ಯಸಭೆಯನ್ನು ಕಮಲದ ಹೂವಿನ ಥೀಮ್​​ನಲ್ಲಿ ನಿರ್ಮಿಸಲಾಗಿದೆ.

ಇದನ್ನೂ ಓದಿ: ವಿಸ್ತಾರ Explainer | ಮನಮೋಹಕ ಸೆಂಟ್ರಲ್ ವಿಸ್ಟಾ ಅವೆನ್ಯೂ! ಉದ್ಘಾಟನೆಗೆ ಕ್ಷಣಗಣನೆ

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್‌ ಭವನಕ್ಕೆ ದಿಢೀರ್‌ ಭೇಟಿ ನೀಡಿ, ಕಾಮಗಾರಿಯನ್ನು ಪರಿಶೀಲಿಸಿದ್ದರು. ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ ಸಂಸತ್‌ ಭವನಕ್ಕೆ ಭೇಟಿ ನೀಡಿದ ಅವರು, ಒಂದು ಗಂಟೆಗೂ ಹೆಚ್ಚು ಸಮಯವನ್ನು ಅಲ್ಲಿಯೇ ಕಳೆದಿದ್ದಾರೆ. ಕಾಮಗಾರಿ ಪರಿಶೀಲನೆ ಜತೆಗೆ ನಿರ್ಮಾಣ ಕಾರ್ಮಿಕರ ಜತೆ ಮಾತುಕತೆಯನ್ನೂ ನಡೆಸಿದ್ದರು. ಸಂಸತ್ತಿನ ಉಭಯ ಸದನಗಳಿಗೆ ತೆರಳಿ ಕಾಮಗಾರಿ ಪರಿಶೀಲನೆ, ಅತ್ಯಾಧುನಿಕ ಸೌಕರ್ಯಗಳ ಕುರಿತು ಮಾಹಿತಿ ಪಡೆದಿದ್ದರು.

Exit mobile version