Site icon Vistara News

Ayushman Bharat | ಡಿಜಿಟಲ್‌ ಮಿಷನ್‌ ಪರಿಣಾಮಕಾರಿ ಜಾರಿಗೆ ಮಾರ್ಗಸೂಚಿ, ಏನೆಲ್ಲ ಸೌಲಭ್ಯ?

Ayushman

ನವದೆಹಲಿ: ದೇಶದ ೫೦ ಕೋಟಿ ಬಡವರಿಗೆ ವಾರ್ಷಿಕ ೫ ಲಕ್ಷ ರೂ.ವರೆಗಿನ ವೆಚ್ಚದಲ್ಲಿ ಆರೋಗ್ಯ ಭದ್ರತೆ ನೀಡಲು ಕೇಂದ್ರ ಸರಕಾರವು ಆಯುಷ್ಮಾನ್‌ ಭಾರತ್‌ (Ayushman Bharat) ಯೋಜನೆ ಜಾರಿಗೊಳಿಸಿದೆ. ಹಾಗೆಯೇ, ಇದರ ಡಿಜಿಟಲೀಕರಣಕ್ಕೂ ಸರಕಾರ ಆದ್ಯತೆ ನೀಡಿದೆ. ಅದರಂತೆ, ಆಸ್ಪತ್ರೆಗಳಲ್ಲಿ ಡಿಜಿಟಲೀಕರಣವನ್ನು ಉತ್ತೇಜಿಸಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್ಎಚ್ಎ)ವು ಆಸ್ಪತ್ರೆಗಳು, ಕ್ಲಿನಿಕ್‌ಗಳು ಮತ್ತು ಆರೋಗ್ಯ ಹಾಗೂ ಸ್ವಾಸ್ಥ್ಯ ಕೇಂದ್ರಗಳಂತಹ ಆರೋಗ್ಯ ಸಂಸ್ಥೆಗಳಿಗೆ ಹಾರ್ಡ್‌ವೇರ್‌ ಮಾರ್ಗಸೂಚಿ ಹೊರಡಿಸಿದೆ.

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ಗೆ (ABDM) ಅನುಗುಣವಾಗಿ ಅಪ್ಲಿಕೇಶನ್‌ಗಳನ್ನು ನಿರ್ವಹಿಸಲು ಐಟಿ ಹಾರ್ಡ್‌ವೇರ್ ಯೋಜನೆ, ಮೌಲ್ಯಮಾಪನ ಮತ್ತು ಖರೀದಿಗಾಗಿ ಮಾರ್ಗಸೂಚಿಗಳು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮೂಲಭೂತ ಚೌಕಟ್ಟನ್ನು ಒದಗಿಸುತ್ತವೆ.

“ಎಬಿಡಿಎಂ ಅನುಷ್ಠಾನದ ಮೊದಲ ಹೆಜ್ಜೆಯೆಂದರೆ ಆಸ್ಪತ್ರೆಗಳ ಡಿಜಿಟಲೀಕರಣ. ಆರೋಗ್ಯ ಸೌಲಭ್ಯದ ಗಾತ್ರದ ಆಧಾರದ ಮೇಲೆ ಐಟಿ ಮೂಲಸೌಕರ್ಯ ಅವಶ್ಯಕತೆಗಳ ಅವಲೋಕನ ನೀಡುವ ಕೆಲವು ಮಾರ್ಗಸೂಚಿಗಳ ಅಗತ್ಯವನ್ನು ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವ್ಯಕ್ತಪಡಿಸಿದವು. ಎನ್ಎಚ್ಎ ಹೊರಡಿಸಿದ ಹಾರ್ಡ್‌ವೇರ್ ಮಾರ್ಗಸೂಚಿಗಳು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಅಗತ್ಯ ನಿರ್ಣಯಿಸಲು ಸಹಾಯ ಮಾಡುತ್ತವೆ” ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್.ಎಸ್.ಶರ್ಮಾ ತಿಳಿಸಿದ್ದಾರೆ.

ಡಿಜಿಟಲ್ ಪರಿಸರ ವ್ಯವಸ್ಥೆಯು ಟೆಲಿ(ದೂರವಾಣಿ) ಸಮಾಲೋಚನೆ, ಕಾಗದ ರಹಿತ ಆರೋಗ್ಯ ದಾಖಲೆಗಳು, ಕ್ಯೂಆರ್ ಕೋಡ್ ಆಧಾರಿತ ಒಪಿಡಿ ನೋಂದಣಿಗಳು ಸೇರಿ ಮುಂತಾದ ಸೌಲಭ್ಯ ಇವೆ. ಆರೋಗ್ಯ ದಾಖಲೆಗಳ ಡಿಜಿಟಲೀಕರಣವು ರೋಗಿಗಳ ಹಳೆಯ ವೈದ್ಯಕೀಯ ದಾಖಲೆಗಳು ಕಳೆದುಹೋಗುವುದಿಲ್ಲ. ಹಾಗೆಯೇ, ಕ್ಷಿಪ್ರವಾಗಿ ರೋಗಿಯ ಎಲ್ಲ ಮಾಹಿತಿಯು ಲಭ್ಯವಾಗಲಿದೆ.

ಇದನ್ನೂ ಓದಿ | Covid Treatment Bill | ಹೆಚ್ಚುವರಿ ಹಣ ವಸೂಲಿ ಮಾಡಿದ 577 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌ ಜಾರಿ

Exit mobile version