ನವದೆಹಲಿ: ದೇಶ ವಿರೋಧಿ ಚಟುವಟಿಕೆಗಳು, ದರೋಡೆ, ಸುಲಿಗೆ, ಕೊಲೆ, ಕಳ್ಳಸಾಗಣೆ ಸೇರಿ ಹಲವು ಕೃತ್ಯಗಳಲ್ಲಿ ತೊಡಗಿದವರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದೇಶಾದ್ಯಂತ ದಾಳಿ (NIA Crackdown) ನಡೆಸಿದ್ದು, ನಾಲ್ವರ ಆಸ್ತಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಹಾಗೆಯೇ, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ದೆಹಲಿ ಸೇರಿ ದೇಶದ 76 ಕಡೆ ಇತ್ತೀಚೆಗಷ್ಟೇ ಎನ್‌ಐಎ ದಾಳಿ ನಡೆಸಿತ್ತು. ಇದೇ ವೇಳೆ, ಕೋಟ್ಯಂತರ ರೂ. ನಗದು, ಪಿಸ್ತೂಲು, ರಿವಾಲ್ವರ್‌ಗಳು, ರೈಫಲ್ ಸೇರಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಈಗ ನಾಲ್ವರು ಗ್ಯಾಂಗ್‌ಸ್ಟರ್‌ಗಳ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ.
ದೇಶ ವಿರೋಧಿ ಚಟುವಟಿಕೆ ಸೇರಿ ಹಲವು ಕೃತ್ಯಗಳಲ್ಲಿ ತೊಡಗಿದವರ ವಿರುದ್ಧ ಎನ್‌ಐಎ ದೇಶಾದ್ಯಂತ ನಡೆಸುತ್ತಿರುವ ಐದನೇ ದಾಳಿ ಇದಾಗಿದೆ. ದೆಹಲಿಯಲ್ಲಿರುವ ಆಸಿಫ್ ಖಾನ್‌ನ ಮನೆ, ಕೃಷಿ ಭೂಮಿಯನ್ನು ಜಪ್ತಿ ಮಾಡಲಾಗಿದೆ. ಹಾಗೆಯೇ, ಹರಿಯಾಣದ ಮಹೇಂದ್ರಗಢ ಜಿಲ್ಲೆಯಲ್ಲಿ ಸುರೇಂದರ್ ಸಿಂಗ್ ಎಂಬಾತನಿಗೆ ಸೇರಿದ ಮೂರು ಆಸ್ತಿಗಳು ಸೇರಿ ಒಟ್ಟು ಐದು ಆಸ್ತಿಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕೊಲೆ, ಸುಲಿಗೆ, ದರೋಡೆ ಸೇರಿ ಇವರ ವಿರುದ್ಧ ಹಲವು ಕೇಸ್‌ಗಳಿವೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಕೂಡ ಇವರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಇದನ್ನೂ ಓದಿ: ಎನ್‌ಐಎ ಹೇಳಿದ್ದ ಅತ್ಯಂತ ಅಪಾಯಕಾರಿ ವ್ಯಕ್ತಿಯನ್ನು ಬಂಧಿಸಿದ ಇಂದೋರ್ ಪೊಲೀಸರು; ವಿಚಾರಣೆ ನಡೆಸಿದ ಮಹಾರಾಷ್ಟ್ರ ಎಟಿಎಸ್