ಪಣಜಿ: ಸ್ಯಾಂಡಲ್ವುಡ್ ನಟಿ ನಿಶ್ವಿಕಾ ನಾಯ್ಡು (Nishvika Naidu) ಈಗ ಸಖತ್ ಸುದ್ದಿಯಲ್ಲಿದ್ದಾರೆ. ಹುಕ್ಕಾ ಪಾರ್ಟಿಯೊಂದರಲ್ಲಿ ನಶೆ ಮಧ್ಯೆ ನಿಶ್ವಿಕಾ ತನ್ನ ಗೆಳತಿಗೆ ಲಿಪ್ ಲಾಕ್ ಮಾಡಿದ್ದಲ್ಲದೆ, ಆಕೆಯ ಬಾಯೊಳಗಿದ್ದ ಹೊಗೆ ಎಳೆದು ಹೊರಬಿಟ್ಟಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದೆ.
ನಿಶ್ವಿಕಾ ತನ್ನ ಸ್ನೇಹಿತೆಯರ ಜೊತೆಗೆ ಗೋವಾಕ್ಕೆ ಪ್ರವಾಸಕ್ಕೆಂದು ಹೋಗಿದ್ದರು. ಗೋವಾದ ಕ್ಯಾಸಿನೋದಲ್ಲಿ ನಡೆದ ಪಾರ್ಟಿಯೊಂದರಲ್ಲಿ ಸ್ನೇಹಿತೆಯೊಬ್ಬಳು ಹುಕ್ಕಾ ಪೈಪ್ ಮೂಲಕ ಧಂ ಎಳೆದುಕೊಂಡಿದ್ದಾಳೆ. ಬಳಿಕ ನಿಶ್ವಿಕಾ ನಾಯ್ಡು ತುಟಿಯ ಬಳಿ ತನ್ನ ಬಾಯನ್ನು ಒಯ್ದಿದ್ದಾಳೆ. ಆಗ ನಿಶ್ವಿಕಾ ಲಿಪ್ಲಾಕ್ ಮಾಡಿದ್ದಲ್ಲದೆ, ಸ್ನೇಹಿತೆಯ ಬಾಯಲ್ಲಿರುವ ಹೊಗೆಯನ್ನು ತಾವು ಎಳೆದುಕೊಂಡು ಹೊರಗೆ ಬಿಟ್ಟಿದ್ದಾರೆ. ಈ ವಿಡಿಯೊವನ್ನು ನಿಶ್ವಿಕಾ ಸ್ನೇಹಿತೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಇದನ್ನು ನೋಡಿರುವ ನೆಟ್ಟಿಗರು ತರಹೇವಾರಿ ಕಮೆಂಟ್ಗಳನ್ನು ಹಾಕುತ್ತಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ನಿಶ್ವಿಕಾ ನಾಯ್ಡು ತಕ್ಷಣವೇ ಎಚ್ಚೆತ್ತುಕೊಂಡಿದ್ದು, ವಿಡಿಯೊಗಳನ್ನು ಡಿಲೀಟ್ ಮಾಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಆಕೆಯ ಸ್ನೇಹಿತೆಯ ಖಾತೆಯಲ್ಲಿರುವ ವಿಡಿಯೊ ಜತೆಗೆ ಇನ್ನಿತರ ಸೋಷಿಯಲ್ ಮೀಡಿಯಾ ಸೇರಿದಂತೆ ಆನ್ಲೈನ್ ತಾಣದಲ್ಲಿ ಅಪ್ಲೋಡ್ ಆಗಿರುವ ವಿಡಿಯೊಗಳು ಸಹ ಡಿಲೀಟ್ ಆಗುತ್ತಿವೆ.
ನಿಶ್ವಿಕಾ ಅವರು ಪ್ರಸ್ತುತ ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆ ಹಂತದಲ್ಲಿದೆ. ‘ದಿಲ್ ಪಸಂದ್’ ಹೆಸರಿನ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಇದೀಗ ನಿಶ್ವಿಕಾ ಮುತ್ತಿನ ಮತ್ತಿನಲ್ಲಿ ಸುದ್ದಿಯಾಗಿರುವುದು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ.
2018ರ ‘ಅಮ್ಮ ಐ ಲವ್ ಯು’ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿಮಾ ರಂಗಕ್ಕೆ ನಿಶ್ವಿಕಾ ಪದಾರ್ಪಣೆ ಮಾಡಿದ್ದರು. ಬಳಿಕ ‘ವಾಸು, ನಾನು ಪಕ್ಕಾ ಕಮರ್ಶಿಯಲ್’, ‘ಪಡ್ಡೆಹುಲಿ’, ‘ಜಂಟಲ್ಮನ್’, ‘ರಾಮಾರ್ಜುನ’, ‘ಸಖತ್’ ಸಿನಿಮಾಗಳಲ್ಲಿ ನಟಿಸಿರುವ ನಿಶ್ವಿಕಾ ಇದೀಗ ‘ಗುರು-ಶಿಷ್ಯರು’ ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ | ಪಾರ್ಕ್ ಹೋಟೆಲ್ನಲ್ಲಿ ಡ್ರಗ್ಸ್ ಪಾರ್ಟಿ, ಬಾಲಿವುಡ್ ನಟ ಸಿದ್ಧಾಂತ್ ಕಪೂರ್ ವಶಕ್ಕೆ