Site icon Vistara News

ನಿಠಾರಿ ಸರಣಿ ಕೊಲೆ ಪ್ರಕರಣ: ಕೋಲಿ, ಪಂಧೇರ್‌ ಎದುರಿಸುತ್ತಿದ್ದ ಆರೋಪ ಏನು? ಅವರಿಗೇಕೆ ಗಲ್ಲು ಶಿಕ್ಷೆಯಾಗಿತ್ತು?

Nithari serial murder case, Allahabad High Court acquits Koli, Pandher

ನವದೆಹಲಿ: 2006ರ ನಿಠಾರಿ ಸರಣಿ ಕೊಲೆ ಪ್ರಕರಣದ (Nithari serial murder case) ಅಪರಾಧಿಗಳಾದ ಸುರೇಂದ್ರ ಕೋಲಿ (Surendra Koli) ಮತ್ತು ಮೋನಿಂದರ್ ಸಿಂಗ್ ಪಂಧೇರ್ (Moninder Singh Pandher) ಅವರನ್ನು ಅಲಹಾಬಾದ್ ಹೈಕೋರ್ಟ್‌ (Allahabad High Court) ಸೋಮವಾರ ಖುಲಾಸೆಗೊಳಿಸಿದೆ. ಎಲ್ಲ 12 ಪ್ರಕರಣಗಳಲ್ಲಿ ಸುರೇಂದ್ರ ಕೋಲಿ ಮುಗ್ಧರು ಎಂದು ಹೇಳಿರುವ ಕೋರ್ಟ್, ಎರಡು ಪ್ರಕರಣಗಳಲ್ಲಿ ಅಪರಾಧಿಯಾಗಿದ್ದ ಮೋನಿಂದೇರ್ ಸಿಂಗ್ ಪಂಧೇರ್‌ನನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ. 17 ವರ್ಷಗಳ ಬಳಿಕ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿದ್ದರಿಂದ, ನೇಣು ಶಿಕ್ಷೆಯಿಂದ ಪಾರಾಗಿದ್ದಾರೆ. ಘಾಜಿಯಾಬಾದ್ ಸಿಬಿಐ ನ್ಯಾಯಾಲಯವು ಇರಿಬ್ಬರ ವಿರುದ್ದ ಗಲ್ಲು ಶಿಕ್ಷೆ ವಿಧಿಸಿತ್ತು. ಈ ತೀರ್ಪು ಪ್ರಶ್ನಿಸಿ ಕೋಲಿ ಮತ್ತು ಪಂಧೇರ್ ಹೈಕೋರ್ಟ್ ಮೊರೆ ಹೋಗಿದ್ದರು.

ನಿಠಾರಿ ಸರಣಿ ಕೊಲೆ ಪ್ರಕರಣವು ಇತ್ತೀಚಿನ ಭಾರತೀಯ ಇತಿಹಾಸದಲ್ಲಿ ಅತ್ಯಂತ ಕುಖ್ಯಾತ ಕ್ರಿಮಿನಲ್ ತನಿಖೆಗಳಲ್ಲಿ ಒಂದಾಗಿದೆ. ಇದು 2006 ರಲ್ಲಿ ಉತ್ತರ ಪ್ರದೇಶದ ನೋಯ್ಡಾದ ಮನೆಯೊಂದರಲ್ಲಿ ಮತ್ತು ಅದರ ಸುತ್ತಮುತ್ತಲಿನಲ್ಲಿ ಬಹುಸಂಖ್ಯೆಯಲ್ಲಿ ಮಾನವರ ಮೂಳೆಗಳು ದೊರೆತಿದ್ದವು. ಆಗ ಈ ಸುದ್ದಿ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.

ನಿಠಾರಿ ಸರಣಿ ಹತ್ಯೆ ಪ್ರಕರಣವು, ಮಕ್ಕಳು ಮತ್ತು ಯುವತಿಯರ ಅಪಹರಣ, ಲೈಂಗಿಕ ದೌರ್ಜನ್ಯ ಮತ್ತು ಅವರು ಭೀಕರ ಕೊಲೆಯನ್ನು ಒಳಗೊಂಡಿದೆ. ಮೂಳೆಗಳು ದೊರೆತಿದ್ದ ಮನೆಯ ಮಾಲೀಕ ಪಂಧೇರ್ ಮತ್ತು ಅವರ ಸಹಾಯಕ ಕೋಲಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರು.

ಈ ಸುದ್ದಿಯನ್ನೂ ಓದಿ: Allahabad High Court: ‘ಸಪ್ತಪದಿ’ ತುಳಿಯದ ಮದ್ವೆ ಮದುವೆಯೇ ಅಲ್ಲ! ಅಲಹಾಬಾದ್ ಹೈಕೋರ್ಟ್

ಈಗ ಖುಲಾಸೆಯಾಗಿರುವ ಕೋಲಿ, ಮಕ್ಕಳಿಗೆ ಸ್ವೀಟ್ಸ್ ಮತ್ತು ಚಾಕೋಲೆಟ್ ಆಸೆ ತೋರಿಸಿ ಮಕ್ಕಳನ್ನು ಮನೆಗೆ ಕರೆದುಕೊಂಡು ಬರುತ್ತಿದ್ದ. ಬಳಿಕ ಅವರನ್ನು ಕೊಲೆ ಮಾಡಿ, ಶವಗಳೊಂದಿಗೆ ಸಂಭೋಗ ಮಾಡಿ, ಶವವನ್ನು ತುಂಡರಿಸಿ ಬೇಯಿಸಿ ಆರೋಪಿಗಳಿಬ್ಬರು ತಿನ್ನಿದ್ದರು ಎಂದು ಆರೋಪಿಸಲಾಗಿತ್ತು. ಉಳಿದ ಮೂಳೆಗಳನ್ನು ಮನೆಯ ಹಿಂದಿನ ಹಿತ್ತಲು ಹಾಗೂ ಚರಂಡಿಗೆ ಎಸೆಯುತ್ತಿದ್ದರು ಎಂದು ತನಿಖೆಯಲ್ಲಿ ಆರೋಪಿಸಲಾಗಿತ್ತು.

2006ರಲ್ಲಿ ಬೆಳಕಿಗೆ ಬಂದ ಈ ಪ್ರಕರಣದ ಮಾಹಿತಿ ತಿಳಿದು ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಉತ್ತರ ಪ್ರದೇಶದ ಪೊಲೀಸರು ತನಿಖೆ ನಡೆಸಿದ್ದರು. ಇದಾದ ಬಳಿಕ, ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ವ್ಯಾಪಕ ಒತ್ತಡ ಕೇಳಿ ಬಂದ ಹಿನ್ನೆಲೆಯಲ್ಲಿ ಅಂದಿನ ಉತ್ತರ ಪ್ರದೇಶ ಸರ್ಕಾರವು ಸಿಬಿಐ ಈ ಪ್ರಕರಣವನ್ನು ವಹಿಸಿತ್ತು. ಬಳಿಕ ನ್ಯಾಯಾಲಯವು ಇವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ರಾಷ್ಟ್ರಪತಿಗಳೂ ಇವರಿಗೆ ಕ್ಷಮಾದಾನ ನೀಡಲು ನಿರಾಕರಿಸಿದ್ದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version