Site icon Vistara News

ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ಸಂಗೀತ ದಿಗ್ಗಜರ ನೇತೃತ್ವದಲ್ಲಿ ಗುರು ಪೂರ್ಣಿಮೆ

Guru purnima NAMCC

ಮುಂಬೈ, ಮಹಾರಾಷ್ಟ್ರ: ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ (NMACC) ಗುರು ಪೂರ್ಣಿಮೆ (guru purnima) ಆಚರಣೆ ಅದ್ಧೂರಿಯಾಗಿ ನೆರವೇರಿತು. ಈ ಸಂಭ್ರಮವನ್ನು ಮುನ್ನಡೆಸಿದ್ದು ಭಾರತೀಯ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಗುರು- ಶಿಷ್ಯ ಪರಂಪರೆಯ ಸಾರದೊಂದಿಗೆ ಹದಿನೇಳನೇ ಶತಮಾನದಿಂದ ಅನುಸರಿಸುತ್ತಾ ಬಂದಿರುವಂಥ ಕುಟುಂಬ ಸದಸ್ಯರು. ಸರೋದ್ ಮಾಂತ್ರಿಕ- ಪದ್ಮವಿಭೂಷಣ ಉಸ್ತಾದ್ ಅಮ್ಜದ್ ಅಲಿ ಖಾನ್ (ustad amjad ali khan) ಜತೆಗೆ ಅವರ ಮಕ್ಕಳಾದ ಅಮಾನ್ ಅಲಿ ಬಂಗಾಶ್ (amaan ali bangash) ಮತ್ತು ಅಯಾನ್ ಅಲಿ ಬಂಗಾಶ್ (ayaan ali bangash) ಹಾಗೂ ಉಸ್ತಾದ್ ಅವರ ಅವಳಿ ಮೊಮ್ಮಕ್ಕಳಾದ 10 ವರ್ಷದ ಜೊಹಾನ್ ಮತ್ತು ಅಬೀರ್ ಅಲಿ ಬಂಗಾಶ್ (abeer ali bangash) ಪಾಲ್ಗೊಂಡಿದ್ದರು.

ಈ ಮೂರು ತಲೆಮಾರಿನ ಅದ್ಭುತ ಕಲಾವಿದರಿಗೆ ದಿ ಗ್ರ್ಯಾಂಡ್ ಥಿಯೇಟರ್‌ನ ವೇದಿಕೆಯಲ್ಲಿ ಸ್ವಾಗತಿಸುತ್ತಾ ನೀತಾ ಅಂಬಾನಿ ಮೆಚ್ಚುಗೆ ವ್ಯಕ್ತಪಡಿಸಿದರು. “ಉಸ್ತಾದ್ ಅಮ್ಜದ್ ಅಲಿ ಖಾನ್ ಮತ್ತು ಅವರ ಕುಟುಂಬದವರ ಪ್ರದರ್ಶನವು ಜೀವನದ ಗಮನಾರ್ಹ ಸ್ವರಮೇಳವನ್ನು ಪ್ರತಿನಿಧಿಸುತ್ತದೆ. ಇದು ಸಂಗೀತ ಪರಂಪರೆಯ ಮೇಳವಾಗಿದೆ. ಜತೆಗೆ ಅದು ಕಾಲವನ್ನು ಮೀರಿದೆ ಹಾಗೂ ಮೂರು ತಲೆಮಾರುಗಳ ಅಸಾಧಾರಣ ಒಗ್ಗೂಡಿಸುವಿಕೆಯ ಆಚರಣೆ ಆಗಿದೆ. – ಸಾರ್ವಕಾಲಿಕ ಗುರು, ಬೆಳಕು ತೋರುವವರು ಇಂದಿನ ಮಾರ್ಗದರ್ಶಕರು ಅವರು,” ಎಂಬ ಮಾತುಗಳೊಂದಿಗೆ ಗುರುವಂದನೆಯ ತನ್ನ ಭಾಷಣವನ್ನು ಅವರು ಮುಕ್ತಾಯಗೊಳಿಸಿದರು.

ಹಿಂದಿನ ದಿನದಂತೆಯೇ ದಿ ಗ್ರ್ಯಾಂಡ್ ಥಿಯೇಟರ್‌ನಲ್ಲಿ ಪ್ರೇಕ್ಷಕರು ಕಿಕ್ಕಿರಿದಿದ್ದರು. ಇಲ್ಲಿನ ಧ್ವನಿ ವ್ಯವಸ್ಥೆಯೂ ಸೇರಿದಂತೆ ವಿಶ್ವದರ್ಜೆಯ ಸವಲತ್ತುಗಳು ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡಿತು. ‌ ‘ಮೂರು ತಲೆಮಾರುಗಳು, ಒಂದು ಪರಂಪರೆ’ ಎಂಬ ಶೀರ್ಷಿಕೆಯಡಿ ಪ್ರದರ್ಶನವು ಮನಸೂರೆಗೊಂಡಿತು.

ಈ ಸುದ್ದಿಯನ್ನೂ ಓದಿ: NMACC: ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ 3400 ಅಶಕ್ತ ಮಕ್ಕಳಿಗೆ ದಿ ಸೌಂಡ್ ಆಫ್ ಮ್ಯೂಸಿಕ್ ಪ್ರದರ್ಶನ

ನೀತಾ ಅಂಬಾನಿಯವರ ನಂಬಿಕೆಯ ಧ್ವನಿಯನ್ನು ಪ್ರತಿಧ್ವನಿಸುವಂತೆ, ತಾಯಿಯು ಮಗುವಿನ ಮೊದಲ ಗುರು ಎಂದು ಉಸ್ತಾದ್ ಅಮ್ಜದ್ ಅಲಿ ಖಾನ್ ಅವರು ಉಲ್ಲೇಖಿಸಿದರು. ಗುರುಪೂರ್ಣಿಮೆಯನ್ನು ಸಾರ್ವಜನಿಕವಾಗಿ, ಸಾಂಸ್ಕೃತಿಕ ಕೇಂದ್ರದಂತಹ ವೇದಿಕೆಯಲ್ಲಿ ಆಚರಿಸುತ್ತಿರುವುದಕ್ಕೆ ಅವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಮತ್ತು ಇದು ಉತ್ತಮ ಉಪಕ್ರಮ ಎಂದು ಬಣ್ಣಿಸಿದರು.

ಕಾಲಾತೀತವಾದ ಗುರು-ಶಿಷ್ಯ ಬಾಂಧವ್ಯಕ್ಕೆ ವಾರ್ಷಿಕ ಗೌರವವನ್ನು ಕಲ್ಪಿಸಲಾಗಿದೆ. ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ ಪ್ರಸ್ತುತಪಡಿಸಿದ ಪರಂಪರಾ, ಭಾರತದ ಅತ್ಯುತ್ತಮವಾದದ್ದನ್ನು ಜಗತ್ತಿಗೆ ಪ್ರದರ್ಶಿಸುವ ಮತ್ತು ವಿಶ್ವದ ಅತ್ಯುತ್ತಮವಾದದ್ದನ್ನು ಭಾರತಕ್ಕೆ ತರುವ ನೀತಾ ಅಂಬಾನಿಯವರ ದೃಷ್ಟಿಯಿಂದ ಮಾರ್ಗದರ್ಶನ ಪಡೆದಿದೆ. ‘ಪರಂಪರಾ: ಎ ಗುರು ಪೂರ್ಣಿಮಾ ಸ್ಪೆಷಲ್’ನ ಮೊದಲ ಆವೃತ್ತಿಯು ಮುಕ್ತಾಯ ಕಂಡಿತು. ಈ ಎರಡು ದಿನಗಳಲ್ಲಿ 4000 ಪ್ರೇಕ್ಷಕರು ಪಾಲ್ಗೊಳ್ಳುವುದರೊಂದಿಗೆ ಕಾರ್ಯಕ್ರಮವು ಅದ್ಭುತ ಯಶಸ್ಸನ್ನು ಕಂಡಿತು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version