Site icon Vistara News

ಯಾರೊಂದಿಗೂ ಮೈತ್ರಿಯಿಲ್ಲ, ಯಾರನ್ನಾದರೂ ಸೋಲಿಸಬೇಕೆಂಬ ಆಸೆಯೂ ಇಲ್ಲ: ಅರವಿಂದ್‌ ಕೇಜ್ರಿವಾಲ್‌

Arvind Kejriwal

What Next After Arvind Kejriwal Skips 3rd Probe Agency Summons? Here Is Explained

ನಾಗ್ಪುರ: ಪಂಜಾಬ್‌ನಲ್ಲಿಯೂ ಅಧಿಕಾರ ಹಿಡಿದ ಮೇಲೆ ಆಮ್‌ ಆದ್ಮಿ ಪಕ್ಷದ ನಾಯಕರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತಿದೆ. ಪಕ್ಷದ ಮುಖ್ಯಸ್ಥ, ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದಲ್ಲಿ ಒಂದೊಂದೇ ರಾಜ್ಯಗಳಲ್ಲಿ ಪಕ್ಷದ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಲಾಗುತ್ತಿದೆ. ಹಾಗಿದ್ದಾಗ್ಯೂ ಅರವಿಂದ್‌ ಕೇಜ್ರಿವಾಲ್ ಮುಂಬರುವ 2024ರ ಲೋಕಸಭಾ ಚುನಾವಣೆಗಾಗಿ ಬೇರೆ ಪಕ್ಷಗಳೊಂದಿಗೆ ಸೇರುತ್ತಾರಾ? ಆಪ್‌ ಪಕ್ಷವನ್ನೂ ಒಳಗೊಂಡಂತೆ ಇನ್ನಿತರ ಹಲವು ರಾಜಕೀಯ ಪಕ್ಷಗಳು ಸೇರಿ ಮಹಾ ಮೈತ್ರಿ ರಚನೆ ಮಾಡಿಕೊಳ್ಳಲಿವೆಯಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಎದ್ದಿತ್ತು. ಅದಕ್ಕೀಗ ಅರವಿಂದ್‌ ಕೇಜ್ರಿವಾಲ್‌ ಉತ್ತರಿಸಿದ್ದಾರೆ. ನಮ್ಮ ಪಕ್ಷವೇನಿದ್ದರೂ 130 ಕೋಟಿ ಭಾರತೀಯರೊಟ್ಟಿಗೆ ಮೈತ್ರಿ ಮಾಡಿಕೊಳ್ಳುತ್ತದೆಯೇ ಹೊರತು, ಇನ್ನುಳಿದ ಯಾವುದೇ ರಾಜಕೀಯ ಪಕ್ಷಗಳೊಟ್ಟಿಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅರವಿಂದ್‌ ಕೇಜ್ರಿವಾಲ್‌, ‘ಮೂರ್ನಾಲ್ಕು ರಾಜಕೀಯ ಪಕ್ಷಗಳು ಸೇರಿ ಮಾಡಿಕೊಳ್ಳುವ ಮೈತ್ರಿ ನನಗೆ ಇವತ್ತಿನವರೆಗೆ ಅರ್ಥವಾಗಿಲ್ಲ. ಹಾಗೇ, ನಾವೂ ಯಾರೊಂದಿಗಾದರೂ ಒಂದಾಗಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಆಸಕ್ತಿಯೂ ಇಲ್ಲ. ಯಾವುದೋ ಪಕ್ಷವನ್ನು ಸೋಲಿಸಲೆಂದು 8-10 ಪಕ್ಷಗಳೆಲ್ಲ ಸೇರಿ ಮೈತ್ರಿ ಮಾಡಿಕೊಂಡರೆ, ರಾಜಕೀಯ ಮಾಡುವುದಾದರೂ ಹೇಗೆ? ಅದಕ್ಕಿಂತ ಹೆಚ್ಚಾಗಿ ನನಗೆ ಯಾರನ್ನಾದರೂ ಸೋಲಿಸುವ ಇಚ್ಛೆ ಇಲ್ಲ. ಈ ದೇಶ ಗೆಲ್ಲಬೇಕು ಎಂಬುದಷ್ಟೇ ನನ್ನ ಬಯಕೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ | ಇದು ಹಿಜಾಬ್‌-ಕೇಸರಿ ಶಾಲು ವಿವಾದ ಅಲ್ಲ: ಸಮವಸ್ತ್ರದಿಂದ ಬಾಲಕ ಪತ್ತೆಯಾದ ಕತೆ !

ರಾಜಕೀಯ ಪಕ್ಷಗಳು ಚುನಾವಣೆ ವೇಳೆ ನೀಡುವ ʼಉಚಿತʼ ಭರವಸೆಗಳು ಉದಾಹರಣೆಗೆ, ನೀವು ನಮಗೆ ಮತ ಹಾಕಿ ಗೆಲ್ಲಿಸಿದರೆ ವಿದ್ಯುತ್‌, ರೇಷನ್‌ ಉಚಿತ ನೀಡುತ್ತೇವೆ ಎಂಬಿತ್ಯಾದಿ ಭರವಸೆಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಹಣಕಾಸಿನ ಅಸ್ಥಿರತೆ ಉಂಟಾಗುತ್ತದೆ ಎಂಬ ಆರ್ಥಿಕ ತಜ್ಞರು ನೀಡುವ ಹೇಳಿಕೆಗಳನ್ನು ಟೀಕಿಸಿದ ಅರವಿಂದ್‌ ಕೇಜ್ರಿವಾಲ್‌, ʼಯಾವುದೇ ಆರ್ಥಿಕ ತಜ್ಞರನ್ನು ಕೇಳಿದರೂ, ಜನರಿಗೆ ಅವರ ಅಗತ್ಯಗಳನ್ನು ಉಚಿತವಾಗಿ ನೀಡುವುದರಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಎಂದು ಹೇಳುತ್ತಾರೆಯೇ ಹೊರತು, ಭ್ರಷ್ಟಾಚಾರದಿಂದ ಆರ್ಥಿಕತೆ ಕುಸಿಯುತ್ತದೆ ಎಂದು ಯಾರೂ ವರದಿ ನೀಡುವುದಿಲ್ಲ. ನಾನು ಇಂದು ಜನರಿಗೆ ಅವರ ಅಗತ್ಯಗಳಲ್ಲಿ ಒಂದಷ್ಟನ್ನಾದರೂ ಉಚಿತವಾಗಿ ನೀಡುವ ಸಾಮರ್ಥ್ಯ ಹೊಂದಿದ್ದೇನೆ ಅಂದರೆ, ನಾವು ಭ್ರಷ್ಟಾಚಾರ ಕೊನೆಗಾಣಿಸಿದ್ದೇವೆ ಎಂದು ಅರ್ಥ. ಭ್ರಷ್ಟಾಚಾರ ಮಾಡದೆ ಉಳಿಸಲಾದ ಹಣವನ್ನೇ ಜನರಿಗೆ ವಿವಿಧ ಉಚಿತ ಯೋಜನೆಗಳ ಮೂಲಕ ನೀಡುತ್ತಿದ್ದೇವೆʼ ಎಂದು ತಿಳಿಸಿದರು.  

https://vistaranews.com/2022/05/06/%e0%b2%95%e0%b3%87%e0%b2%9c%e0%b3%8d%e0%b2%b0%e0%b2%bf%e0%b2%b5%e0%b2%be%e0%b2%b2%e0%b3%8d-%e0%b2%86%e0%b2%a1%e0%b2%b3%e0%b2%bf%e0%b2%a4%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%8e/
Exit mobile version