Site icon Vistara News

Twin Tower Demolition | ಗಗನಚುಂಬಿ ಕಟ್ಟಡ ನೆಲಸಮ, ನೆರೆಯ ಕಟ್ಟಡಗಳಿಗೆ ಹಾನಿ? ಅಧಿಕಾರಿಗಳು ಹೇಳುವುದೇನು?

Noida Final 1

ನೊಯ್ಡಾ: ಸೂಪರ್‌ಟೆಕ್‌ನ ಅವಳಿ ಗಗನಚುಂಬಿ ಕಟ್ಟಡಗಳನ್ನು (Twin Tower Demolition) ನೆಲಸಮಗೊಳಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದು, ಕೇವಲ ಒಂಬತ್ತು ಸೆಕೆಂಡ್‌ಗಳಲ್ಲಿ ಕಟ್ಟಡಗಳು ಧರೆಗುರುಳಿವೆ. ಇದರ ಬೆನ್ನಲ್ಲೇ, ಧರೆಗುರುಳಿದ ಕಟ್ಟಡದ ಸುತ್ತಲೂ ಇದ್ದ ಕಟ್ಟಡಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ಅವಳಿ ಕಟ್ಟಡಗಳ ಪಕ್ಕದ ಯಾವುದೇ ಹೌಸಿಂಗ್‌ ಸೊಸೈಟಿಗಳಿಗೆ ಹಾನಿಯಾಗಿಲ್ಲ. ಕಟ್ಟಡಗಳ ಕೆಲವು ಅವಶೇಷಗಳು ರಸ್ತೆಗಳ ಮೇಲೆ ಬಿದ್ದಿವೆ. ಮುಂದಿನ ಒಂದು ಗಂಟೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ” ಎಂದು ನೊಯ್ಡಾ ಸಿಇಒ ರೀತು ಮಹೇಶ್ವರಿ ಮಾಹಿತಿ ನೀಡಿದ್ದಾರೆ.

ಕಟ್ಟಡಗಳನ್ನು ೩,೭೦೦ ಕೆಜಿ ಸ್ಫೋಟಕ ಬಳಸಿ ನೆಲಸಮಗೊಳಿಸಲಾಗಿದ್ದು, ಅವಶೇಷಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಸಂಜೆ ಐದು ಗಂಟೆ ವೇಳೆಗೆ ಸ್ಥಳಾಂತರಗೊಂಡಿರುವ ಎಲ್ಲ ಸುತ್ತಮುತ್ತಲಿನ ನಿವಾಸಿಗಳನ್ನು ಕರೆತರಲಾಗುತ್ತದೆ. ನೀರು ಹಾಗೂ ವಿದ್ಯುತ್‌ ಸೇವೆಯನ್ನೂ ಒದಗಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ | Twin Towers Demolition | ಅವಳಿ ಕಟ್ಟಡ ನೆಲಸಮಕ್ಕೆ 100 ಕೋಟಿ ರೂ.ಗಳ ವಿಮೆ!

Exit mobile version