ನವದೆಹಲಿ: ಎರಡು ದಶಕಗಳವೆರೆಗೆ ಕಾಂಗ್ರೆಸ್ ಪಕ್ಷವನ್ನು ಆಳಿದ ಸೋನಿಯಾ ಗಾಂಧಿ ಅವರು ಕೊನೆಗೂ ನೆಹರು-ಗಾಂಧಿ ಕುಟುಂಬದ ವಶದಲ್ಲಿದ್ದ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಬುಧವಾರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಸ್ತಾಂತರ ಮಾಡಿದ್ದಾರೆ. ಹೀಗೆ, ಅಧಿಕಾರ ಹಸ್ತಾಂತರಿಸಿದ ಬೆನ್ನಲ್ಲೇ ತಾಯಿ ಸೋನಿಯಾ ಗಾಂಧಿ ಅವರಿಗೆ ಪುತ್ರಿ ಪ್ರಿಯಾಂಕಾ ವಾದ್ರಾ (Priyanka Vadra) ಅವರು ಭಾವುಕ ಸಂದೇಶ ಕಳುಹಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಸೋನಿಯಾ ಗಾಂಧಿ ಅವರು ತಮ್ಮ ಪತಿ ರಾಜೀವ್ ಗಾಂಧಿ ಅವರ ಭಾವಚಿತ್ರ ಹಿಡಿದು ನಿಂತಿರುವ ಫೋಟೊ ಹಂಚಿಕೊಂಡ ಪ್ರಿಯಾಂಕಾ ವಾದ್ರಾ, “ಅಮ್ಮಾ, ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ. ಜಗತ್ತು ಏನು ಹೇಳುತ್ತದೆ ಅಥವಾ ಏನು ಯೋಚಿಸುತ್ತದೆ ಎಂಬುದು ಮುಖ್ಯವಲ್ಲ. ನೀವು ಪ್ರೀತಿಗಾಗಿಯೇ ಇದನ್ನೆಲ್ಲ ಮಾಡಿದಿರಿ ಎಂಬುದು ಗೊತ್ತಿದೆ” ಎಂದು ಒಕ್ಕಣೆ ಹಾಕಿದ್ದಾರೆ.
ಜಿ-23 ನಾಯಕರ ಒತ್ತಾಯ, ಪಕ್ಷದಲ್ಲೇ ಉಂಟಾದ ನಾಯಕತ್ವ ಬಿಕ್ಕಟ್ಟಿನಿಂದಾಗಿ ಎರಡು ದಶಕದ ಬಳಿಕ ಇತ್ತೀಚೆಗೆ ಕಾಂಗ್ರೆಸ್ ಆಂತರಿಕ ಚುನಾವಣೆ ನಡೆದಿದ್ದು, ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬುಧವಾರ ಅವರಿಗೆ ಸೋನಿಯಾ ಗಾಂಧಿ ಅವರು ಅಧಿಕಾರ ಹಸ್ತಾಂತರ ಮಾಡಿದ್ದಾರೆ.
ಇದನ್ನೂ ಓದಿ | Mallikarjun Kharge | ಮಲ್ಲಿಕಾರ್ಜುನ ಖರ್ಗೆ ನೆಲಮೂಲದ ನಾಯಕ, ಸೋನಿಯಾ ಗಾಂಧಿ ಬಣ್ಣನೆ