ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆ ದೃಷ್ಟಿಯಿಂದಾಗಿ ಹೆಚ್ಚಿನ ಮಹತ್ವ ಪಡೆದಿರುವ ತ್ರಿಪುರ, ಮೇಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಫಲಿತಾಂಶ (Northeast Assembly Election Result 2023) ಗುರುವಾರ (ಮಾರ್ಚ್ 2) ಪ್ರಕಟವಾಗಲಿದೆ. ಇಂದು ಬೆಳಗ್ಗೆ 8ಗಂಟೆಯಿಂದ ಮೂರು ರಾಜ್ಯಗಳಲ್ಲಿ ಮತ ಎಣಿಕೆ ಪ್ರಾರಂಭವಾಗಿದೆ. ಈ ಮೂರು ರಾಜ್ಯಗಳಲ್ಲಿ ನಡೆಯುತ್ತಿರುವ ಮತ ಎಣಿಕೆಯ ಸಮಗ್ರ ವರದಿ ಇಲ್ಲಿದೆ.
ಮೇಘಾಲಯದಲ್ಲಿ ಸಂಭ್ರಮ
ಮೇಘಾಲಯದಲ್ಲಿ ಸಿಎಂ ಕಾನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಇನ್ನೂ 20 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಹುಮತದ ಮಾರ್ಕ್ ಕ್ರಾಸ್ ಆಗಿಲ್ಲ. ಹಾಗಿದ್ದಾಗ್ಯೂ ಅಲ್ಲ ಎನ್ಪಿಪಿ ಬೆಂಬಲಿಗರಲ್ಲಿ ಸಂಭ್ರಮ ಮನೆ ಮಾಡಿದೆ.
ಮೇಘಾಲಯದಲ್ಲಿ ಸಿಎಂ ಕಾನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಇನ್ನೂ 20 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಹುಮತದ ಮಾರ್ಕ್ ಕ್ರಾಸ್ ಆಗಿಲ್ಲ. ಹಾಗಿದ್ದಾಗ್ಯೂ ಅಲ್ಲ ಎನ್ಪಿಪಿ ಬೆಂಬಲಿಗರಲ್ಲಿ ಸಂಭ್ರಮ ಮನೆ ಮಾಡಿದೆ.
#WATCH | Supporters of CM Conrad Sangma's National People's Party welcome him and dance in celebration as the party has won 5 seats and is leading on 20 seats so far#MeghalayaElections2023 pic.twitter.com/UWTsRozLsK
— ANI (@ANI) March 2, 2023
ಮೇಘಾಲಯದಲ್ಲಿ ಖಾತೆ ತೆರೆದ ಟಿಎಂಸಿ
ಮೇಘಾಲಯದಲ್ಲಿ ತೃಣಮೂಲ ಕಾಂಗ್ರೆಸ್ ಖಾತೆ ತೆರೆದಿದೆ. ರಾಜಾಬಾಲಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಮಿಜಾನೂರ್ ರೆಹಮಾನ್ ಕಾಜಿ ಅವರು, ಎನ್ಪಿಪಿ ಅಭ್ಯರ್ಥಿ ಅಬ್ದುಸ್ ಸಾಲೇಹ್ರನ್ನು 10 ಮತಗಳಿಂದ ಸೋಲಿಸಿದ್ದಾರೆ.
2 ಗಂಟೆವರೆಗಿನ ಟ್ರೆಂಡ್ ಹೀಗಿದೆ
ತ್ರಿಪುರದಲ್ಲಿ ಬಿಜೆಪಿ 34 ಕ್ಷೇತ್ರಗಳಲ್ಲಿ ಮುನ್ನಡೆ, ಲೆಫ್ಟ್ ಮತ್ತು ಕಾಂಗ್ರೆಸ್ ಒಕ್ಕೂಟ 14 ಕ್ಷೇತ್ರಗಳಲ್ಲಿ ಮುನ್ನಡೆ. ಮೇಘಾಲಯದಲ್ಲಿ ಎನ್ಪಿಪಿ 26 ಕ್ಷೇತ್ರಗಳಲ್ಲಿ ಮುನ್ನಡೆ ಮತ್ತು ನಾಗಾಲ್ಯಾಂಡ್ನಲ್ಲಿ ಬಿಜೆಪಿ-ಎನ್ಡಿಪಿಪಿ ಮೈತ್ರಿ 39 ಕ್ಷೇತ್ರಗಳಲ್ಲಿ ಮುನ್ನಡೆ. ತ್ರಿಪುರದಲ್ಲಿ ಬಿಜೆಪಿ ಗೆಲುವು, ನಾಗಾಲ್ಯಾಂಡ್ನಲ್ಲಿ ಬಿಜೆಪಿ-ಎನ್ಡಿಪಿಪಿ ಮೈತ್ರಿ ಜಯ ಪಕ್ಕಾ ಆಗಿದ್ದು, ಮೇಘಾಲಯದಲ್ಲಿ ಮತ್ತೆ ಮೈತ್ರಿ ಅನಿವಾರ್ಯವಾಗಿದೆ.
ತ್ರಿಪುರದಲ್ಲಿ ಸಂಭ್ರಮಾಚರಣೆ
ತ್ರಿಪುರದಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. 15 ಕ್ಷೇತ್ರಗಳಲ್ಲಿ ಪಕ್ಷ ಈಗಾಗಲೇ ಗೆದ್ದಿದ್ದು, 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ತ್ರಿಪುರದಲ್ಲಿ ಈಗಾಗಲೇ ಸಂಭ್ರಮಾಚರಣೆ ಪ್ರಾರಂಭವಾಗಿದೆ. ಕಾರ್ಯಕರ್ತರು ನರೇಂದ್ರ ಮೋದಿ ಜಿಂದಾಬಾದ್, ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದಾರೆ. ಬಿಜೆಪಿ ಕಚೇರಿ ಬಳಿ ಪಟಾಕಿಗಳನ್ನು ಸಿಡಿಸಲಾಗುತ್ತಿದೆ. ಪರಸ್ಪರ ಸಿಹಿ ಹಂಚಿಕೆ ನಡೆಯುತ್ತಿದೆ.
ತ್ರಿಪುರ ಸಿಎಂಗೆ ಗೆಲುವು
ತ್ರಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಮುಖ್ಯಮಂತ್ರಿ ಮಾಣಿಕ್ ಸಾಹಾ ಅವರು ತಮ್ಮ ಕ್ಷೇತ್ರ ಬರ್ದೋವಾಲಿ ಕ್ಷೇತ್ರದಲ್ಲಿ, ಕಾಂಗ್ರೆಸ್ ಅಭ್ಯರ್ಥಿಯನ್ನು 1257 ಮತಗಳಿಂದ ಸೋಲಿಸಿದ್ದಾರೆ. ಚುನಾವಣಾ ಆಯೋಗದಿಂದ ಗೆಲುವಿನ ಸರ್ಟಿಫಿಕೇಟ್ ಕೂಡ ಪಡೆದಿದ್ದಾರೆ.